Menu Close

ಟಿ-20 ವಿಶ್ವಕಪ್ ಫೈನಲ್ : 10,000 ಕೋಟಿ ರೂಪಾಯಿಗಳ ಅಕ್ರಮ ಬೆಟ್ಟಿಂಗ್ ಪ್ರಕರಣದ ಉನ್ನತ ಮಟ್ಟದ ತನಿಖೆ ನಡೆಸಿ !

 ‘ ಸುರಾಜ್ಯ ಅಭಿಯಾನ’ ದಿಂದ ನಾಗ್ಪುರ ಮತ್ತು ಗೋವಾ ದೂರುಗಳಿಗೆ ಬೆಂಬಲ


ನಾಗ್ಪುರಿನ ದೂರು   

ನಾಗ್ಪುರ / ಪಣಜಿ : ಇಂದು ಅಹಮದಾಬಾದ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿರುವ ಟಿ-20 ವಿಶ್ವಕಪ್ 2026 ರ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ, ದೇಶದಲ್ಲಿ 10,000 ಕೋಟಿ ರೂಪಾಯಿಗಳ ಬೃಹತ್ ಅಕ್ರಮ ಬೆಟ್ಟಿಂಗ್ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಹೈಟೆಕ್ ಆಪ್‌ಗಳು ಮತ್ತು ಆಫ್‌ಶೋರ್ ಸರ್ವರ್‌ಗಳ ಮೂಲಕ ಈ ಹಗರಣ ನಡೆಯುತ್ತಿದೆ. ಈ ಕುರಿತು ರಾಯಬಂದರ್ (ಪಣಜಿ) ನಿವಾಸಿ ಶ್ರೀ. ದಿಲೀಪ್ ಶೆಟ್ಯೆ ಅವರು ಪಣಜಿ ಪೊಲೀಸ್ ಕಮಿಷನರ್ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಲಿಖಿತ ದೂರು ನೀಡಿದ್ದಾರೆ. ನಾಗ್ಪುರದಲ್ಲೂ ಜಾಗೃತ ನಾಗರಿಕರೊಬ್ಬರು ಇ-ಮೇಲ್ ಮೂಲಕ ದೂರು ದಾಖಲಿಸಿದ್ದಾರೆ. ಈ ದೂರುಗಳಿಗೆ ಹಿಂದೂ ಜನಜಾಗೃತಿ ಸಮಿತಿಯು ಪೂರ್ಣ ಬೆಂಬಲ ನೀಡಿದ್ದು, ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸುವಂತೆ ಒತ್ತಾಯಿಸಿದೆ.
ಕೆಲವು ಪ್ರಮುಖ ಪತ್ರಿಕೆಗಳಲ್ಲಿ ಈ ಬೆಟ್ಟಿಂಗ್ ಕುರಿತು ವರದಿಗಳು ಪ್ರಕಟವಾಗಿವೆ. ವಾಸ್ತವವಾಗಿ, ಆಡಳಿತ ಮತ್ತು ಪೊಲೀಸ್ ವ್ಯವಸ್ಥೆಯು ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣದ ಕ್ರಮ ಕೈಗೊಳ್ಳಬೇಕಿತ್ತು. ಇಷ್ಟು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಬೆಟ್ಟಿಂಗ್ ಭಾರತದ ಅಂತರಾಷ್ಟ್ರೀಯ ವರ್ಚಸ್ಸನ್ನು ಕುಗ್ಗಿಸುತ್ತಿದೆ ಮತ್ತು ಭಾರತೀಯ ಕ್ರಿಕೆಟ್‌ನ ವಿಶ್ವಾಸಾರ್ಹತೆಯನ್ನು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ‘ಸುರಾಜ್ಯ ಅಭಿಯಾನ’ ಹೇಳಿದೆ. ಕ್ರೀಡೆಯ ಹೆಸರಿನಲ್ಲಿ ನಡೆಯುವ ಈ ಜೂಜು ಕೆಲವು ನಿರ್ದಿಷ್ಟ ವ್ಯಕ್ತಿಗಳ ನಿಯಂತ್ರಣದಲ್ಲಿದ್ದು, ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ಅಧಿಕಾರಿಗಳಿಗೂ ತಿಳಿದಿರುತ್ತದೆ ಎಂದು ಅಭಿಯಾನವು ಆರೋಪಿಸಿದೆ.

                                                                                               
                                                                                 ಪಣಜಿ (ಗೋವಾ) ದೂರು

ಪ್ರಮುಖ ಬೇಡಿಕೆಗಳು :
ಮೂಲದ ತನಿಖೆ : 10,000 ಕೋಟಿ ರೂಪಾಯಿಗಳ ಈ ದಂಧೆಯ ಗಂಭೀರತೆಯನ್ನು ಗಮನಿಸಿ, ಪೊಲೀಸ್ ಆಡಳಿತವು ತಕ್ಷಣವೇ ಮಾಧ್ಯಮಗಳನ್ನು ಸಂಪರ್ಕಿಸಿ ಈ ಮಾಹಿತಿಯ ಮೂಲವನ್ನು ತನಿಖೆ ಮಾಡಬೇಕು ಮತ್ತು ಬೆಟ್ಟಿಂಗ್ ನಿಯಂತ್ರಣ ಕೊಠಡಿಗಳನ್ನು ಧ್ವಂಸಗೊಳಿಸಬೇಕು.
ಕಠಿಣ ಕಾನೂನು ಕ್ರಮ : ಕೇಂದ್ರ ಸರ್ಕಾರವು ಅನುಮೋದಿಸಿದ ‘ಆನ್‌ಲೈನ್ ಗೇಮಿಂಗ್ ಆಕ್ಟ್ 2025’ ಅಡಿಯಲ್ಲಿ ಇಂತಹ ಅಕ್ರಮ ಬೆಟ್ಟಿಂಗ್ ಅನ್ನು ಜಾಮೀನು ರಹಿತ ಅಪರಾಧವೆಂದು ಘೋಷಿಸಲಾಗಿದೆ; ಈ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು.
ಆರ್ಥಿಕ ತನಿಖೆ : ಜಾರಿ ನಿರ್ದೇಶನಾಲಯ (ED) ಮತ್ತು ಸೈಬರ್ ಸೆಲ್ ಈ ಹವಾಲಾ ಜಾಲ ಮತ್ತು ಡಿಜಿಟಲ್ ಪೇಮೆಂಟ್ ಗೇಟ್‌ವೇಗಳನ್ನು ತಕ್ಷಣವೇ ಬಂದ್ ಮಾಡಬೇಕು.
SIT ರಚನೆ : ಸ್ಥಳೀಯ ಬುಕ್ಕಿಗಳು ಮತ್ತು ಅಂತರಾಷ್ಟ್ರೀಯ ಸಿಂಡಿಕೇಟ್‌ಗಳ ನಡುವಿನ ಸಂಬಂಧವನ್ನು ತನಿಖೆ ಮಾಡಲು ರಾಜ್ಯ ಮಟ್ಟದಲ್ಲಿ ತಕ್ಷಣವೇ ವಿಶೇಷ ತನಿಖಾ ತಂಡವನ್ನು (SIT) ರಚಿಸುವುದು ಅತ್ಯಗತ್ಯ.

 

                                                         
                                                   ಗೋವಾ ಸೈಬರ್ ಶಾಖೆಗೆ ದೂರು ನೀಡುತ್ತಿರುವ ಶ್ರೀ . ದಿಲೀಪ್ ಶೇಟ್ಯೆ

“ದೇಶ ಮತ್ತು ಕ್ರಿಕೆಟ್‌ನ ಅಂತರಾಷ್ಟ್ರೀಯ ಘನತೆಯನ್ನು ಕಾಪಾಡಲು, ಪಂದ್ಯ ಮುಗಿಯುವ ಮೊದಲೇ ಈ ಜಾಲದ ಮೇಲೆ ಆಂತರಿಕ ‘ಸರ್ಜಿಕಲ್ ಸ್ಟ್ರೈಕ್’ ನಡೆಸಬೇಕು.” ಎಂದು ‘ಸುರಾಜ್ಯ ಅಭಿಯಾನ’ ತಿಳಿಸಿದೆ.
ಆಡಳಿತದಲ್ಲಿ ಪಾರದರ್ಶಕತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ‘ಸುರಾಜ್ಯ ಅಭಿಯಾನ’ವು ಈ ಪ್ರಕರಣದ ಮೇಲೆ ನಿರಂತರ ನಿಗಾ ಇಡಲಿದೆ

 

Related News