Menu Close

ವಿಶ್ವ ಹಿಂದೂ ಪರಿಷತ್ ವತಿಯಿಂದ ವಿವಿಧೆಡೆ ನಡೆದ ಹಿಂದೂ ಸಂಗಮ ಕಾರ್ಯಕ್ರಮಗಳಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಹಭಾಗ !

ಹಿಂದೂ ಸಮಾಜದಲ್ಲಿ ಏಕತೆ ಮತ್ತು ಸಂಘಟನೆ ಬಲಪಡಿಸುವುದು, ಧಾರ್ಮಿಕ ಜಾಗೃತಿ ಮೂಡಿಸುವುದು, ಸನಾತನ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಯುವ ಪೀಳಿಗೆಗೆ ತಲುಪಿಸುವುದು ಮತಾಂತರ ತಡೆ, ಗೋ-ರಕ್ಷಣೆ, ದೇವಸ್ಥಾನ ಸಂರಕ್ಷಣೆ ಮುಂತಾದ ವಿಷಯಗಳ ಬಗ್ಗೆ ಅರಿವು ಹಾಗೂ ಸ್ಥಳೀಯವಾಗಿ ಸಂಘಟನೆಗಳನ್ನು ಬಲಪಡಿಸಿ ಕಾರ್ಯಕರ್ತರನ್ನು ಸಕ್ರಿಯಗೊಳಿಸುವ ಉದ್ದೇಶದಿಂದ ವಿಶ್ವ ಹಿಂದೂ ಪರಿಷತ್ ಇತ್ತೀಚಿಗೆ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಹಿಂದೂ ಸಂಗಮ ಈ ಭವ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಬೆಂಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡಿದೆ. ಕಾರ್ಯಕ್ರಮಗಳ ಪೂರ್ವದಲ್ಲಿ ಭವ್ಯ ಶೋಭಾಯಾತ್ರೆ, ದೀಪ ಪ್ರಜ್ವಲನೆ, ಗಣ್ಯ ವಕ್ತಾರರ ವ್ಯಾಖ್ಯಾನ, ಹಿಂದೂ ಸಮಾಜದಿಂದ ಸಂಕಲ್ಪ ಮಾಡಿಸುವುದು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮದ ರೂಪುರೇಖೆಯಲ್ಲಿದ್ದವು. ವಿವಿದೆಡೆಗಳಲ್ಲಿ ನಡೆದ ಈ ಕಾರ್ಯಕ್ರಮಗಳಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವಿವಿಧ ವಕ್ತಾರರನ್ನು ವ್ಯಾಖ್ಯಾನಕ್ಕಾಗಿ ಆಹ್ವಾನಿಸಲಾಗಿತ್ತು.

ಜಾಗೃತಿ ಮೂಡಿಸುವ ಕಾರ್ಯವನ್ನು ಯಾರೂ ಹಿಂದೂ ಸಂಘಟನೆಗಳಿಗೆ ಗುತ್ತಿಗೆ ನೀಡಿಲ್ಲ; ಇದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ ! – ಶ್ರೀ. ಗುರುಪ್ರಸಾದ್ ಗೌಡ, ಹಿಂದೂ ಜನಜಾಗೃತಿ ಸಮಿತಿ.

ಮಂಗಳೂರಿನ ಊರ್ವದಲ್ಲಿರುವ ಮಾರಿಗುಡಿಯಲ್ಲಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ್ ಗೌಡ ಇವರು ಭಾರತ ಒಂದು ಕಾಲದಲ್ಲಿ ವಿಶ್ವಗುರುವಾಗಿತ್ತು. ಅನೇಕ ಸಂತಮಹಾತ್ಮರು ಇದೇ ಭೂಮಿಯಲ್ಲಿ ನಡೆಸಿದ್ದಾರೆ. ಜಗತ್ತಿನಲ್ಲಿರುವ ಅನೇಕ ರಾಷ್ಟ್ರಗಳಲ್ಲಿ ಕೇವಲ ಭಾರತವನ್ನು ಮಾತ್ರ ಮಾತೃ ಸಮಾನದಲ್ಲಿ ನೋಡಿ ಮಾತೃಭೂಮಿ ಎಂದು ಕರೆಯುತ್ತೇವೆ. ಭಾರತದಲ್ಲಿರುವ ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆ ಈ ಎರಡು ಘಟಕಗಳಿಂದಾಗಿಯೇ ಭಾರತವು ವಿಶ್ವಗುರುವಾಗಿತ್ತು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಹಿಂದೂ ಸಮಾಜವು, ಧರ್ಮದಿಂದ ದೂರ ಹೋಗುತ್ತಿದೆ, ಧರ್ಮಾಚರಣೆ ಮಾಡುತ್ತಿಲ್ಲ ಎಲ್ಲಿಯೂ ಧರ್ಮಶಿಕ್ಷಣವು ಸಿಗುತ್ತಿಲ್ಲ. ಆದ್ದರಿಂದ ಹಿಂದೂ ಸಮಾಜ ಅಧೋಗತಿಯತ್ತ ಸಾಗುತ್ತಿದೆ, ಸಮಾಜದ ಈ ಪರಿಸ್ಥಿತಿಯ ಬದಲಾವಣೆ ಕೇವಲ ಹಿಂದೂ ಸಂಘಟನೆಗಳಿಗೆ ವಹಿಸಿದ ಗುತ್ತಿಗೆಯಲ್ಲ, ಸಮಾಜವು ಧರ್ಮಚರಣಿಯಾಗಲು ಪ್ರತಿಯೊಬ್ಬ ಹಿಂದೂವೂ ತನ್ನ ಯೋಗದಾನವನ್ನು ನೀಡಬೇಕಿದೆ. ಎಲ್ಲರ ಸಂಘಟಿತ ಪ್ರಯತ್ನದಿಂದಲೇ ರಾಮರಾಜ್ಯದಂತಹ ಆದರ್ಶ ರಾಷ್ಟ್ರದ ಸ್ಥಾಪನೆಯಾಗಲು ಸಾಧ್ಯವಿದೆ ಎಂದು ಕರೆ ನೀಡಿದರು.

ಹಿಂದೂ ಸಮಾಜದ ಮೇಲೇರಿಗಿರುವ ವಿವಿಧ ಸಂಕಟಗಳನ್ನು ಎದುರಿಸಲು ಸಂಘಟನೆಯೇ ಆವಶ್ಯಕ ! – ಸೌ. ಪವಿತ್ರ ಕುಡ್ವ, ಹಿಂದೂ ಜನಜಾಗೃತಿ ಸಮಿತಿ

ಮಂಗಳೂರಿನ ಕೋಡಿಕಲ್ ನಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿ ರಣರಾಗಿಣಿ ಶಾಖೆಯ ಸೌ. ಪವಿತ್ರ ಕುಡ್ವ ಇವರು ಮಾತನಾಡಿದರು. ಹಿಂದೆ ಭಾರತದ ಗುರುಕುಲಗಳಿಗೆ ಜ್ಞಾನಾರ್ಜನೆ ಮಾಡುವ ದೃಷ್ಟಿಯಿಂದ ಅನೇಕ ರಾಷ್ಟ್ರಗಳಿಂದ ಬಂದು ಜ್ಞಾನವನ್ನು ಪಡೆದು ಹೋಗುತ್ತಿದ್ದರು. ಕಾಲಕ್ರಮೇಣ ಭಾರತೀಯರು ಪಾಶ್ಚಾತ್ಯರ ಅಂಧಾನುಕರಣೆಯನ್ನು ಪ್ರಾರಂಭಿಸಿದರು. ನಮ್ಮ ದೇಶ, ಸಂಸ್ಕೃತಿ, ಭಾಷೆಯ ಮೇಲಿನ ಅಭಿಮಾನವು ಕ್ಷೀಣವಾಯಿತು. ಇದರ ಪರಿಣಾಮವಾಗಿ ಭಾರತದಲ್ಲಿ ಹಿಂದೂ ಸಮಾಜದ ಮೇಲೆ ನಿರಂತರವಾಗಿ ಲವ್ ಜಿಹಾದ್, ಮತಾಂತರ ಇಂತಹ ಹಲವಾರು ದೌರ್ಜನ್ಯಗಳು ನಡೆದಿವೆ ಮತ್ತು ಇಗಲೂ ನಡೆಯುತ್ತಿವೆ. ಈ ಎಲ್ಲಾ ಸಮಸ್ಯೆಗಳಿಂದ ಹೊರಬೇಕೆಂದರೆ ಅದಕ್ಕಾಗಿ ಸಂಘಟನೆಯ ಅವಶ್ಯಕತೆ ಇದೆ, ಅದಕ್ಕಾಗಿ ನಾವೆಲ್ಲರೂ ಸಂಘಟಿತರಾಗಬೇಕಿದೆ ಎಂದರು.


ಬೆಂಗಳೂರಿನ ಕೆಂಗೇರಿಯ ಹಿಂದೂ ಸಮಾಜೋತ್ಸವದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯ ಗೌಡ

ಮಂಗಳೂರಿನ ಊರ್ವ ಮಾರಿಗುಡಿಯ ಹಿಂದೂ ಸಂಗಮದಲ್ಲಿ ಉಪಸ್ಥಿತ ಹಿಂದೂ ಬಾಂಧವರು

Related News