Menu Close

ಗಜೇಂದ್ರಗಡದ ಕೋಟೆಯಲ್ಲಿ ಕೋಟೆ ಸ್ವಚ್ಛತೆ ಮತ್ತು ಶೌರ್ಯ ಜಾಗೃತಿ ಅಭಿಯಾನ

 

ಛತ್ರಪತಿ ಶಿವಾಜಿ ಸಾನಿಧ್ಯದಲ್ಲಿ ಒಂದು ದಿನ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಗಜೇಂದ್ರಗಡದ ಕೋಟೆಯಲ್ಲಿ ಕೋಟೆ ಸ್ವಚ್ಛತೆ ಮತ್ತು ಶೌರ್ಯ ಜಾಗೃತಿ ಅಭಿಯಾನ

ಉಪಸ್ಥಿತ  ಧರ್ಮಪ್ರೇಮಿಗಳು

 

ಗಜೇಂದ್ರಗಡ: ಹಿಂದವಿ ಸ್ವರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರಿಂದ ನವೀಕರಿಸಲ್ಪಟ್ಟಿದೆಯೆಂದು ಹೇಳಲಾಗುವ ಗದಗ ಜಿಲ್ಲೆಯ ಗಜೇಂದ್ರಗಡದ ಕೋಟೆಯಲ್ಲಿ ಸಮಿತಿಯ ಕಾರ್ಯಕರ್ತರಿಂದ ಕೋಟೆಯ ಸ್ವಚ್ಛತೆಯನ್ನು ಮಾಡಲಾಯಿತು.

ಪ್ರತಿವರ್ಷ ‘ಶಿವಾಜಿ ಸಾನಿಧ್ಯದಲ್ಲಿ ಒಂದು ದಿನ ‘ ಎನ್ನುವ ಅಭಿಯಾನದಲ್ಲಿ ಕೋಟೆಯ ಸ್ವಚ್ಛತೆಯನ್ನು ಮಾಡಲಾಗುತ್ತಿದೆ. ಮುಂದಿನ ಪೀಳಿಗೆಯವರಿಗೆ ನಮ್ಮ ಇತಿಹಾಸ ತಿಳಿಸಲು ಮತ್ತು ತೋರಿಸಲು ಕೋಟೆಗಳ ಸಂರಕ್ಷಣೆ ಮತ್ತು ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತ್ಯವಾಗಿದೆ.

ಕೋಟೆ ಸ್ವಚ್ಛತೆಗೆ ಬಾಗಲಕೋಟೆ,ಹುಬ್ಬಳ್ಳಿ – ಧಾರವಾಡ,ಗದಗ, ಜಿಲ್ಲೆಗಳಿಂದ ಯುವಕ – ಯುವತಿಯರು ,ಧರ್ಮಪ್ರೇಮಿಗಳು ಸೇರಿ 60ಕ್ಕಿಂತ ಹೆಚ್ಚು ಜನ ಕೋಟೆ ಸ್ವಚ್ಛತೆಯಲ್ಲಿ ಸಹಭಾಗಿಯಾದರು. ಮೊದಲು ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆಯನ್ನು ಮಾಡಲಾಯಿತು, ಕೋಟೆಯ ಇತಿಹಾಸವನ್ನು ತಿಳಿದುಕೊಳ್ಳಲಾಯಿತು, ಶಿವಾಜಿ ಮಹಾರಾಜರ ಆದರ್ಶ ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಳ್ಳುವುದರ ಬಗ್ಗೆ, ಧಾರ್ಮಿಕ ಕಾರ್ಯಗಳಿಗೆ ಆಧ್ಯಾತ್ಮಿಕ ಬಲ ಹೆಚ್ಚಿಸಿಕೊಳ್ಳಲು ನಾಮಜಪದ ಮಹತ್ವವನ್ನು ತಿಳಿಸಲಾಯಿತು. ಕೊನೆಗೆ ಎಲ್ಲರೂ ಒಂದಾಗಿ ಹಿಂದೂರಾಷ್ಟ್ರ ಸ್ಥಾಪನೆಗಾಗಿ ಪ್ರಾರ್ಥನೆ ಮತ್ತು ಪ್ರತಿಜ್ಞೆಯನ್ನು ಮಾಡಿದರು.

 

 

Related News