Menu Close

‘ಜಯಪುರ ಡೈಲಾಗ್ 2025’ ಸಮ್ಮೇಳನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪ್ರಭಾವಶಾಲಿ ಪಾಲುಗೊಳ್ಳುವಿಕೆ

  • ‘ಜೈಪುರ ಡೈಲಾಗ್ಸ್ ೨೦೨೫’ ದ ವಿಚಾರ ಸಂಕಿರಣದಲ್ಲಿ ‘ಶತ್ರು ಅರಿವು (ಶತ್ರುಬೋಧ)’ ವಿಷಯದ ಕುರಿತು ಎರಡನೇ ದಿನವೂ ತೀವ್ರ ಚರ್ಚೆ!

  • ವಕ್ತಾರರು ಭಾರತ-ವಿರೋಧಿ ಕಥಾವಸ್ತುವನ್ನು ಬಹಿರಂಗವಾಗಿ ಪರಿಚಯಿಸಿದರು!

  • ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂದೆ ಅವರಿಂದಲೂ ಮಾರ್ಗದರ್ಶನ!

ಜೈಪುರ (ರಾಜಸ್ಥಾನ) – ನಮ್ಮ ಶತ್ರುಗಳು ಹೊರಗಿಲ್ಲ, ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಇತಿಹಾಸಕಾರರು ಸತ್ಯವನ್ನು ಮುಚ್ಚಿಡದೆ ಇತಿಹಾಸವನ್ನು ಬರೆದರು; ಆದರೆ ಸ್ವಾತಂತ್ರ್ಯದ ನಂತರ ಮಾರ್ಕ್ಸ್ವಾದಿ ಪ್ರಭಾವದಡಿಯಲ್ಲಿ ಇತಿಹಾಸವನ್ನು ವಿರೂಪಗೊಳಿಸಲಾಯಿತು. ನಿಜವಾದ ಸಂಪ್ರದಾಯ ಮತ್ತು ಸಾಂಸ್ಕೃತಿಕ ದೃಷ್ಟಿಯನ್ನು ತೆಗೆದುಹಾಕಿ ಹೊಸ ವಿಕೃತಿಯನ್ನು ರಚಿಸಲಾಯಿತು. ದೆಹಲಿ, ಜೆಎನ್‌ಯು ಮತ್ತು ಅಲಿಗಢದಂತಹ ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳಿಂದ ಮೂಲ ಭಾರತೀಯ ಇತಿಹಾಸವೇ ಕಣ್ಮರೆಯಾಯಿತು. ಆದ್ದರಿಂದ, ಇಂದು ನಮ್ಮ ಶತ್ರುಗಳು ನಮ್ಮ ವಿಚಾರ ಜಗತ್ತಿನಲ್ಲಿಯೇ ಅಡಗಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಪ್ರಸಿದ್ಧ ಇತಿಹಾಸ ಸಂಶೋಧಕರು ಮತ್ತು ರಾಜ್ಯಸಭಾ ಸದಸ್ಯರು (ರಾಷ್ಟ್ರಪತಿ ನಾಮನಿರ್ದೇಶಿತ) ಮೀನಾಕ್ಷಿ ಜೈನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನವೆಂಬರ್ ೭ ರಿಂದ ೯ ರವರೆಗೆ ಆಯೋಜಿಸಲಾದ ಪ್ರಸಿದ್ಧ ‘ಜೈಪುರ ಡೈಲಾಗ್ ೨೦೨೫’ ಸಮಾವೇಶದಲ್ಲಿ ‘ಶತ್ರು ಬೋಧ’ (ಶತ್ರುವಿನ ಅರಿವು) ವಿಷಯದ ಸತ್ರದಲ್ಲಿ ಸಂಸದೆ ಜೈನ್ ಮಾತನಾಡುತ್ತಿದ್ದರು.

ಸಂಸದೆ ಮೀನಾಕ್ಷಿ ಜೈನ್ ಅವರು ದೀಪ ಬೆಳಗಿಸುವುದರ ಮೂಲಕ ಈ ಸಮಾವೇಶವನ್ನು ಉದ್ಘಾಟಿಸಿದರು. ಮೊದಲ ದಿನ ಮುಖ್ಯ ಸಭಾಂಗಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ೧೪ ಸತ್ರಗಳನ್ನು ಆಯೋಜಿಸಲಾಗಿತ್ತು. ಜೈಪುರ ಡೈಲಾಗ್‌ನ ಅಧ್ಯಕ್ಷರಾದ ಸಂಜಯ ದೀಕ್ಷಿತ್ ಅವರ ‘ಆಲ್ ರಿಲಿಜಿಯನ್ ಆರ್ ನಾಟ್ ಸೇಮ್’ ಎಂಬ ಇಂಗ್ಲಿಷ್ ಪುಸ್ತಕದ ‘ಸಭಿ ಧರ್ಮ ಸಮಾನ್ ನಹೀಂ’ ಎಂಬ ಹಿಂದಿ ಆವೃತ್ತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

‘ರಾಷ್ಟ್ರವಾದಿಗಳ ಮಹಾಸಂಗಮ’ ಎಂದು ಗುರುತಿಸಲಾಗುವ ‘ಜೈಪುರ ಡೈಲಾಗ್ಸ್ ೨೦೨೫’ ವಿಚಾರ ಸಂಕಿರಣದಲ್ಲಿ, ಎರಡನೇ ದಿನ ‘ಶತ್ರು ಅರಿವು’ (ಶತ್ರುಬೋಧ) ವಿಷಯದ ಕುರಿತು ವಿವಿಧ ಕ್ಷೇತ್ರಗಳ ತಜ್ಞರು ಭಾರತದ ಮೇಲಿನ ಆಂತರಿಕ ಮತ್ತು ಬಾಹ್ಯ ಆಕ್ರಮಣಗಳ ಬಗ್ಗೆ ಆಳವಾದ ಚರ್ಚೆ ನಡೆಸಿದರು. ಲೇಖಕ ಮತ್ತು ಚಿಂತಕ ಆನಂದ ರಂಗನಾಥನ್, ಪ್ರಮುಖ ಚಲನಚಿತ್ರ ವಿಮರ್ಶಕ ರಾಜೇಶ ಕುಮಾರ್ ಸಿಂಗ್, ರಾಜಕೀಯ ವಿಶ್ಲೇಷಕ ಶಾಂತನು ಗುಪ್ತಾ, ಸಂಶೋಧಕ ವಿನೋದ ಕುಮಾರ್, ಮಾಜಿ ಮುಖ್ಯ ಕೇಂದ್ರ ಮಾಹಿತಿ ಆಯುಕ್ತ ಉದಯ ಮಾಹುರ್ಕರ್, ಗರ್ವಿತ್ ಭಾರದ್ವಾಜ್ ಮತ್ತು ಹಿರಿಯ ಪತ್ರಕರ್ತ ಅನುಪಮ ಮಿಶ್ರಾ ಅವರು ‘ಆಪರೇಷನ್ ಸಿಂದೂರ’ನಿಂದ ಚೀನಾ-ಪಾಕಿಸ್ತಾನದ ಸಂಬಂಧಗಳಲ್ಲಿನ ಹೊಸ ಬೆಳವಣಿಗೆಗಳವರೆಗೆ ಅನೇಕ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು ಮತ್ತು ಭಾರತವು ಜಾಗರೂಕರಾಗಿರಲು ಕರೆ ನೀಡಿದರು. ಕಾರ್ಯಕ್ರಮವನ್ನು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಅವರೂ ಕೂಡ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಹಲಾಲ್ ಮಾಂಸ ಬೇಡವಾದರೆ, ಹಿಂದೂ ಖಾಟಿಕ್ ಸಮಾಜವನ್ನು ಜಾಗೃತಗೊಳಿಸಿ! – ರಮೇಶ ಶಿಂದೆ

ವೇದಿಕೆಯ ಮೇಲೆ ಎಡದಿಂದ ಶ್ರೀ. ದೇವದತ್ತ ಮಾಜಿ, ಡಾ. ಒಮೆಂದ್ರ ರತ್ನು, ಶ್ರೀ. ಸಂದೀಪ ಬಾಲಕೃಷ್ಣ, ಶ್ರೀ. ರಮೇಶ ಶಿಂದೆ ಮತ್ತು ಶ್ರೀ. ಜೈ ಅಹುಜಾ.

ಭಾರತದಲ್ಲಿನ ‘ಹಲಾಲ್ ಆರ್ಥಿಕತೆ’ ಎಂಬ ಶತ್ರುಬೋಧದ ಅಡಿಯಲ್ಲಿ ನಡೆದ ಚರ್ಚಾ ಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ರಮೇಶ ಶಿಂದೆ ಅವರೊಂದಿಗೆ ಶ್ರೀ. ಜೈ ಅಹುಜಾ, ಡಾ. ಒಮೆಂದ್ರ ರತ್ನು ಮತ್ತು ಶ್ರೀ. ದೇವದತ್ತ ಮಾಜಿ ಅವರು ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಶ್ರೀ. ರಮೇಶ ಶಿಂದೆ ಅವರು,

1. ಎಲ್ಲ ಕಡೆಯ ಮುಸಲ್ಮಾನರು ಹಲಾಲ್ ಉತ್ಪನ್ನಗಳಿಗೆ ಬೇಡಿಕೆ ಇಡುತ್ತಾರೆ; ಆದರೆ ಒಬ್ಬ ಹಿಂದೂ ಕೂಡ ‘ಹಲಾಲ್ ಉತ್ಪನ್ನಗಳು ಬೇಡ’ ಎಂದು ಧ್ವನಿ ಎತ್ತುವುದಿಲ್ಲ ಅಥವಾ ಅಂತಹ ಬೇಡಿಕೆ ಇಡುವುದಿಲ್ಲ.

2. ಯಾವುದೇ ಮುಸಲ್ಮಾನನಿಗೆ, ‘ನಾನು ನಿನಗೆ 50 ರೂಪಾಯಿ ಅಗ್ಗದ ದರದಲ್ಲಿ ‘ಝಟ್ಕಾ’ ಮಾಂಸವನ್ನು ಕೊಡುತ್ತೇನೆ’ ಎಂದು ಹೇಳಿದರೆ, ಅವನು ಅದನ್ನು ನಿರಾಕರಿಸುತ್ತಾನೆ. ಆದರೆ, ಇದಕ್ಕೆ ವಿರುದ್ಧವಾಗಿ, ಹಿಂದೂವಿಗೆ ‘ಝಟ್ಕಾ’ ಇರಲಿ ಅಥವಾ ‘ಹಲಾಲ್’ ಇರಲಿ, ಅದರ ಬಗ್ಗೆ ಯಾವುದೇ ಕಾಳಜಿ ಇರುವುದಿಲ್ಲ.

3. ಮತ್ತೊಂದೆಡೆ, ಹಿಂದೂಗಳು ಮಾಂಸ ವ್ಯಾಪಾರ ಮಾಡಲು ಸಿದ್ಧರಿರುವುದಿಲ್ಲ. ಅದರಲ್ಲಿ ಅವರಿಗೆ ಕೆಲವು ತೊಂದರೆಗಳಿರುವುದು ಕಂಡುಬಂದಿದೆ. ಈ ವ್ಯವಹಾರ ಮಾಡಿದರೆ ಮದುವೆಗೆ ಹೆಣ್ಣು ಮಕ್ಕಳು ಸಿಗುವುದಿಲ್ಲ. ಕೆಲವು ಕಡೆ ಒಂದು ತಪ್ಪು ಕಲ್ಪನೆಯೂ ಇದೆ, ಅಂದರೆ, ಪ್ರಾಣಿಗಳನ್ನು ಕೊಂದರೆ ಪಾಪ ತಗಲುತ್ತದೆ. ಆದ್ದರಿಂದ ಮಾಂಸವನ್ನು ಮಾರಾಟ ಮಾಡುವ ಹಿಂದೂ ವ್ಯಾಪಾರಿಗಳು ಕೂಡ ಮುಸಲ್ಮಾನರು ಕೊಂದ ಪ್ರಾಣಿಗಳ ಮಾಂಸವನ್ನೇ ತಂದು ಮಾರಾಟ ಮಾಡುತ್ತಾರೆ.

4. ಖಾಟಿಕ್ ಸಮಾಜದ ಅನೇಕ ಜನರು ಅಶಿಕ್ಷಿತರು ಮತ್ತು ಧರ್ಮದ ಬಗ್ಗೆ ಅರಿವಿಲ್ಲದ ಕಾರಣ ಅವರಿಗೆ ಈ ಬಗ್ಗೆ ಮಾರ್ಗದರ್ಶನ ನೀಡುವುದು ಅವಶ್ಯಕವಾಗಿದೆ. ಇಸ್ಲಾಂ ಧರ್ಮ ಇಲ್ಲದಿದ್ದಾಗಲೂ ಜನರು ಮಾಂಸಾಹಾರ ಸೇವಿಸುತ್ತಿದ್ದರು. ಆಗ ಹಿಂದೂಗಳು ಪ್ರಾಣಿಗಳನ್ನು ಕೊಂದರೆ ಅವರಿಗೆ ಪಾಪ ತಗಲುತ್ತಿರಲಿಲ್ಲವೇ? ಆದ್ದರಿಂದ ಈ ನಿಟ್ಟಿನಲ್ಲಿ ಹಿಂದೂಗಳಿಗೆ ಮಾರ್ಗದರ್ಶನ ನೀಡುವುದು ಅವಶ್ಯಕವಾಗಿದೆ.

5. ಈ ಎಲ್ಲಾ ಭಯಾನಕತೆಯನ್ನು ಅಂಕಿ-ಅಂಶಗಳ ರೂಪದಲ್ಲಿ ನೋಡಿದರೆ, ಕೇವಲ ಕೋಳಿ ಮತ್ತು ಮೇಕೆ ಮಾಂಸದ ಒಟ್ಟು ವ್ಯಾಪಾರವು ₹10 ಸಾವಿರ ಕೋಟಿ ರೂಪಾಯಿಗಳಷ್ಟಿದೆ. ಇದರಲ್ಲಿ ಹೆಚ್ಚಿನ ಮಾಂಸದ ಉತ್ಪಾದನೆಯು ಹಲಾಲ್ ವಿಧಾನದಲ್ಲಿ ಆಗುತ್ತದೆ.

‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ಯ ಮೂಲಕ ಹಿಂದೂತ್ವನಿಷ್ಠ ಸಂಘಟನೆಗಳು ಹೇಗೆ ಒಗ್ಗೂಡಿ ಹಿಂದೂ ಧರ್ಮ ರಕ್ಷಣೆಯ ಕಾರ್ಯ ಮಾಡುತ್ತಿವೆ ಎಂಬುದರ ಬಗ್ಗೆಯೂ ಶ್ರೀ. ಶಿಂದೆ ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಈ ವೇಳೆ ವೈದ್ಯರಾದ ಡಾ. ರತ್ನು ಅವರು, ಹಲಾಲ್ ಮಾಂಸವು ಆರೋಗ್ಯದ ದೃಷ್ಟಿಯಿಂದ ಹಾನಿಕಾರಕವಾಗಿದ್ದು, ‘ಝಟ್ಕಾ’ ಮಾಂಸವು ಸುರಕ್ಷಿತವಾಗಿದೆ ಎಂದು ಹೇಳಿದರು.

Related News