-
ಕಲಂಗೂಟ್‌ನಲ್ಲಿ ಇಂದು ಪ್ರತಿಭಟನಾ ಸಭೆ
-
ಕಲಂಗೂಟ್ ಪಂಚಾಯತ್ ‘ಎಲ್.ಇ.ಡಿ.’ ಫಲಕಗಳ ಮೇಲೆ ನಿಷೇಧ ಹೇರಲಿದೆ

ಮಾಪಸಾ – ಬಾಗಾ ಮತ್ತು ಹಡಫಡೆಯ ೨ ಬೇರೆ ಬೇರೆ ಅಂಗಡಿಗಳ ಹೊರಗೆ ಅಳವಡಿಸಿದ್ದ ‘ಎಲ್.ಇ.ಡಿ.’ (ಆಧುನಿಕ ವಿದ್ಯುದ್ದೀಪ) ಫಲಕಗಳ ಮೇಲೆ ‘ಪಾಕಿಸ್ತಾನ ಜಿಂದಾಬಾದ್’ ಎಂದು ಬರೆದಿರುವುದು ಪ್ರದರ್ಶನಗೊಂಡ ನಂತರ, ಇದರ ತೀವ್ರ ಪ್ರತಿಧ್ವನಿ ರಾಜ್ಯಾದ್ಯಂತ ಕೇಳಿಬಂದಿದೆ. ಈ ಘಟನೆಯನ್ನು ಖಂಡಿಸಲು ‘ಯೂತ್ ಫಾರ್ ಭಾರತ್’ ಎಂಬ ಸ್ಥಳೀಯ ಸಂಘಟನೆಯು ಪ್ರತಿಭಟನಾ ಸಭೆಯನ್ನು ಆಯೋಜಿಸಿದೆ. ಕಲಂಗೂಟ್ ಪಂಚಾಯತ್ ‘ಎಲ್.ಇ.ಡಿ.’ ಫಲಕಗಳ ಮೇಲೆ ನಿಷೇಧ ಹೇರಲಾಗುವುದು ಎಂದು ಹೇಳಿದೆ, ಹಾಗೆಯೇ ಹಡಫಡೆಯ ವಿವಾದಾತ್ಮಕ ಫಲಕ ಪ್ರದರ್ಶಿಸಿದ ಅಂಗಡಿಯ ಅನುಮತಿಯನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದೆ. ಹಿಂದು ಜನಜಾಗೃತಿ ಸಮಿತಿಯು ಒಂದು ಪತ್ರಿಕಾ ಪ್ರಕಟಣೆಯ ಮೂಲಕ ‘ದೇಶದ್ರೋಹಿ ಪಾಕಿಸ್ತಾನ ಪ್ರೇಮಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಮತ್ತು ಈ ಪ್ರಕರಣದ ತನಿಖೆಯನ್ನು ‘ರಾಷ್ಟ್ರೀಯ ತನಿಖಾ ಸಂಸ್ಥೆ’ಗೆ (ಎನ್ಐಎ) ವಹಿಸಬೇಕು’ ಎಂದು ಒತ್ತಾಯಿಸಿದೆ.
🚨 ‘Pakistan Zindabad’ flashed on LED boards of 2 shops in Baga & Hadfade, Goa
9 people including shop owners arrested
CM @DrPramodPSawant says govt won’t tolerate such acts ⚡
It is suspected that LED boards were hacked.
Across India, such ‘Pakistan-lovers’ keep surfacing…… pic.twitter.com/ZE8TM8uJbo
— Sanatan Prabhat (@SanatanPrabhat) November 5, 2025
ಸಂಬಂಧಿತ ವಿವಾದಾತ್ಮಕ ಅಂಗಡಿಯನ್ನು ಒಬ್ಬ ಮುಸಲ್ಮಾನ ವ್ಯಕ್ತಿಗೆ ಬಾಡಿಗೆಗೆ ನೀಡಲಾಗಿತ್ತು! – ಸರಪಂಚ ಸಿಕ್ವೇರಾ, ಕಲಂಗೂಟ್ ಪಂಚಾಯತ್
ಕಲಂಗೂಟ್ ಪಂಚಾಯತ್‌ನ ಸರಪಂಚ ಸಿಕ್ವೇರಾ ಅವರು, “ಪಾಕಿಸ್ತಾನ ಜಿಂದಾಬಾದ್’ ಫಲಕ ಕಂಡು ನಮಗೆ ದುಃಖವಾಗಿದೆ. ನಮಗೆ ಭಾರತ ದೇಶದ ಬಗ್ಗೆ ಹೆಮ್ಮೆಯಿದೆ. ಇಂತಹ ಕೃತ್ಯಗಳನ್ನು ನಾವು ಸಹಿಸುವುದಿಲ್ಲ. ಕೆಲವು ಸ್ಥಳೀಯ ಜನರು ತಮ್ಮ ಅಂಗಡಿಗಳನ್ನು ಇತರ ವ್ಯಕ್ತಿಗಳಿಗೆ ಗುತ್ತಿಗೆಗೆ ನೀಡುತ್ತಿದ್ದಾರೆ. ಸಂಬಂಧಿತ ವಿವಾದಾತ್ಮಕ ಅಂಗಡಿಯನ್ನು ಇದೇ ರೀತಿಯಲ್ಲಿ ಒಬ್ಬ ಮುಸಲ್ಮಾನ ವ್ಯಕ್ತಿಗೆ ಬಾಡಿಗೆಗೆ ನೀಡಲಾಗಿತ್ತು. ಗೋಮಾಂತಕರು ಅಂಗಡಿ ಅಥವಾ ಮನೆಗಳನ್ನು ಇತರರಿಗೆ ಬಾಡಿಗೆಗೆ ನೀಡುವಾಗ ಜಾಗರೂಕರಾಗಿರಬೇಕು ಎಂದು ನಾವು ಪದೇ ಪದೇ ಹೇಳುತ್ತಿದ್ದೇವೆ. ಸಂಬಂಧಿತ ಅಂಗಡಿಯ ಪರವಾನಗಿಯನ್ನು ನವೀಕರಿಸಲಾಗಿರಲಿಲ್ಲ. ಈ ಅಂಗಡಿಯ ಸಮೀಕ್ಷೆಯನ್ನು ನವೆಂಬರ್ ೭ ರಂದು ನಡೆಸಲಾಗುವುದು ಮತ್ತು ಅದರ ನಂತರ ಅದನ್ನು ಬೀಗ ಹಾಕಲಾಗುವುದು” ಎಂದು ಹೇಳಿದರು.
ದೇಶದ್ರೋಹಿ ಪಾಕಿಸ್ತಾನಿ ಪ್ರೇಮಿಗಳನ್ನು ಹುಡುಕಿ ಕ್ರಮಕೈಗೊಳ್ಳಬೇಕು ! – ಹಿಂದೂ ಜನಜಾಗೃತಿ ಸಮಿತಿ
ಪಣಜಿ, ನವೆಂಬರ್ 6 (ಸುದ್ದಿ) – ಗೋವಾದ ಬಾಗಾ ಮತ್ತು ಹಡಫಡೆ ಪ್ರದೇಶಗಳಲ್ಲಿನ ಎರಡು ಬೇರೆ-ಬೇರೆ ಅಂಗಡಿಗಳ ಹೊರಗೆ ಅಳವಡಿಸಲಾಗಿದ್ದ ‘ಡಿಜಿಟಲ್’ ಫಲಕಗಳ ಮೇಲೆ ‘ಪಾಕಿಸ್ತಾನ ಜಿಂದಾಬಾದ್’ ಎಂದು ಬರೆದಿರುವುದು ಪತ್ತೆಯಾಗಿದೆ. ಗೋವಾದಲ್ಲಿ ಈ ರೀತಿ ನಡೆಯುವುದು ಅತ್ಯಂತ ಗಂಭೀರ ವಿಷಯವಾಗಿದ್ದು, ಈ ಘಟನೆಯನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸಿದೆ. ಈ ಪ್ರಕರಣದ ಕುರಿತು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು, ದೇಶದ್ರೋಹಿ ಪಾಕ್ ಪ್ರೇಮಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಈ ಘಟನೆಯ ತನಿಖೆಯನ್ನು ‘ರಾಷ್ಟ್ರೀಯ ತನಿಖಾ ಸಂಸ್ಥೆ’ಗೆ ಒಪ್ಪಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಉತ್ತರ ಗೋವಾ ಸಂಯೋಜಕರಾದ ಗೋವಿಂದ ಚೋಡಣಕರ ಅವರು ಆಗ್ರಹಿಸಿದರು.
ಶ್ರೀ ಗೋವಿಂದ ಚೋಡಣಕರ್ ಅವರು ಮಾತು ಮುಂದುವರೆಸಿ,
“೨ ವರ್ಷಗಳ ಹಿಂದೆ ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗ, ಕಲಂಗೂಟ್‌ನ ಒಂದು ಉಪಾಹಾರ ಗೃಹದ ಮಾಲೀಕರು, ತಾನು ಪಾಕಿಸ್ತಾನವನ್ನು ಬೆಂಬಲಿಸುತ್ತಿರುವುದಾಗಿ ಹೇಳಿದ್ದರು. ಇತ್ತೀಚೆಗೆ ಮಾಪಸಾದಲ್ಲಿ ಬಾಂಗ್ಲಾದೇಶದಿಂದ ಬಂದ ಅಪರಾಧಿಗಳು ಶಸ್ತ್ರಸಜ್ಜಿತ ದರೋಡೆ ನಡೆಸಿದರು. ಭಾರತದಾದ್ಯಂತ ಮತಾಂತರ ಮಾಡುವ ಛಾಂಗುರ ಬಾಬಾ ಗ್ಯಾಂಗ್‌ನ ಆಯೇಶಾ ಎಂಬ ಮಹಿಳೆಯನ್ನು ಗೋವಾದಲ್ಲಿ ಬಂಧಿಸಲಾಯಿತು. ಈ ಘಟನೆಗಳು ಗೋವಾ ರಾಜ್ಯವು ಈಗ ದೇಶದ್ರೋಹಿಗಳಿಗೆ ಸುರಕ್ಷಿತ ಆಶ್ರಯ ತಾಣವಾಗುತ್ತಿದೆ ಎಂಬುದನ್ನು ತೋರಿಸುತ್ತವೆ.”
ಕಲಂಗೂಟ್ ಪಂಚಾಯತ್ ‘ಎಲ್.ಇ.ಡಿ.’ ಫಲಕಗಳ ಮೇಲೆ ನಿಷೇಧ ಹೇರಲಿದೆ! ಜೋಸೆಫ್ ಸಿಕ್ವೇರಾ, ಸರಪಂಚ, ಕಲಂಗೂಟ್ ಪಂಚಾಯತ್
ಮಾಪಸಾ – ಕಲಂಗೂಟ್ ಪಂಚಾಯತ್ ವ್ಯಾಪ್ತಿಯಲ್ಲಿ ‘ಎಲ್.ಇ.ಡಿ.’ ಫಲಕಗಳ ಮೇಲೆ ‘ಪಾಕಿಸ್ತಾನ ಜಿಂದಾಬಾದ್’ ಬರಹ ಪ್ರದರ್ಶನಗೊಂಡ ನಂತರ, ಪಂಚಾಯತ್ ತನ್ನ ವ್ಯಾಪ್ತಿಯಲ್ಲಿ ‘ಎಲ್.ಇ.ಡಿ.’ ಫಲಕಗಳನ್ನು ಅಳವಡಿಸುವುದನ್ನು ನಿಷೇಧಿಸಿದೆ. ಇನ್ನು ಮುಂದೆ ಹೊಸ ಅಂಗಡಿಯನ್ನು ತೆರೆಯಬೇಕಾದರೆ, ‘ಎಲ್.ಇ.ಡಿ.’ ಫಲಕವನ್ನು ಅಂಗಡಿಯಲ್ಲಿ ಅಳವಡಿಸುವುದಿಲ್ಲ ಎಂದು ಪಂಚಾಯತ್‌ಗೆ ಲಿಖಿತ ರೂಪದಲ್ಲಿ ಬರೆದು ಕೊಡಬೇಕಾಗುತ್ತದೆ. ನಿಯಮ ಉಲ್ಲಂಘಿಸಿದರೆ ಪಂಚಾಯತ್ ಫಲಕವನ್ನು ವಶಪಡಿಸಿಕೊಳ್ಳುತ್ತದೆ. ಹಾಗೆಯೇ, ಮುಂದಿನ ಕೆಲವು ದಿನಗಳಲ್ಲಿ ಸಂಬಂಧಪಟ್ಟವರಿಗೆ ಮುನ್ಸೂಚನೆ ನೀಡಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲ ‘ಎಲ್.ಇ.ಡಿ.’ ಫಲಕಗಳನ್ನು ತೆಗೆದುಹಾಕಲಾಗುವುದು ಎಂದು ಕಲಂಗೂಟ್ ಪಂಚಾಯತ್‌ನ ಸರಪಂಚ ಜೋಸೆಫ್ ಸಿಕ್ವೇರಾ ಅವರು ಕಲಂಗೂಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಲಂಗೂಟ್ ತಿರುವು ರಸ್ತೆಯಲ್ಲಿ ‘ಯೂತ್ ಫಾರ್ ಭಾರತ್’ ಸಂಘಟನೆಯಿಂದ ಇಂದು ಪ್ರತಿಭಟನಾ ಸಭೆ
ಮಾಪಸಾ, ನವೆಂಬರ್ ೬ (ವರದಿ) – ನವೆಂಬರ್ ೫ ರಂದು ಇಲ್ಲಿನ ಬಾಗಾ ಮತ್ತು ಹಡಫಡೆಯ ೨ ಬೇರೆ ಬೇರೆ ಅಂಗಡಿಗಳ ಹೊರಗೆ ಅಳವಡಿಸಲಾಗಿದ್ದ ‘ಡಿಜಿಟಲ್’ ಫಲಕಗಳ ಮೇಲೆ ‘ಪಾಕಿಸ್ತಾನ ಜಿಂದಾಬಾದ್’ ಎಂದು ಬರೆದಿರುವುದು ಕಂಡುಬಂದಿತ್ತು. ಇಂತಹ ರಾಷ್ಟ್ರವಿರೋಧಿ ಕೃತ್ಯವನ್ನು ಖಂಡಿಸಲು ‘ಯೂತ್ ಫಾರ್ ಭಾರತ್’ ಸಂಘಟನೆಯು ಪ್ರತಿಭಟನಾ ಸಭೆಯನ್ನು ಆಯೋಜಿಸಿದೆ.
ಈ ಪ್ರತಿಭಟನಾ ಸಭೆಯು ನವೆಂಬರ್ ೭ ರಂದು ಸಂಜೆ ೬ ಗಂಟೆಗೆ ಕಲಂಗೂಟ್‌ನ ತಿರುವು ರಸ್ತೆಯಲ್ಲಿ ನಡೆಯಲಿದೆ. ‘ಎಲ್ಲ ದೇಶಬಾಂಧವರು ತಮ್ಮ ದೇಶದ ಮೇಲಿನ ಪ್ರೀತಿಯಿಂದ ಒಗ್ಗೂಡಿ ಈ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಬೇಕು’ ಎಂದು ಈ ಸಂಘಟನೆಯಿಂದ ಆಹ್ವಾನ ನೀಡಲಾಗಿದೆ. ಈ ಕುರಿತು ಆಹ್ವಾನ ನೀಡುವ ಒಂದು ‘ವೀಡಿಯೋ’ವನ್ನು ಪ್ರಸಾರ ಮಾಡಲಾಗಿದೆ. ಅದರಲ್ಲಿ ‘ಭಾರತದಲ್ಲಿ ನಡೆಯುವ ರಾಷ್ಟ್ರವಿರೋಧಿ ಕೃತ್ಯಗಳನ್ನು ಸಹಿಸಲಾಗದು’ ಎಂದು ಹೇಳಲಾಗಿದೆ.


