Menu Close

ಅಫಜಲ ಖಾನ್ ವಧೆಯ ಶಿಲ್ಪಕ್ಕಾಗಿ ಮುಂದಾಳತ್ವ ವಹಿಸಿದ ಮಾಜಿ ಶಾಸಕ ನಿತಿನ ಶಿಂದೆ ಅವರನ್ನು ಕೊಲ್ಲುವುದಾಗಿ ಮತಾಂಧನ ಬೆದರಿಕೆ!

  • ಛಾಯಾಚಿತ್ರ ಸಾಲು – ಸಾಂಗ್ಲಿ ನಗರ ಪೊಲೀಸ ಅಧಿಕಾರಿಗಳಿಗೆ (1) ಮನವಿ ಸಲ್ಲಿಸುತ್ತಿರುವ ಹಿಂದೂ ಏಕತಾ ಆಂದೋಲನದ ಪದಾಧಿಕಾರಿಗಳು

  • ಹಿಂದೂ ಏಕತಾ ಆಂದೋಲನದಿಂದ ದೂರು ದಾಖಲು!

  • ಬೆದರಿಕೆ ಹಾಕಿದ ಮುಸ್ತಫಾ ಮುಲಾಣಿ ಪರಾರಿ

ಸಾಂಗ್ಲಿ– ಇಲ್ಲಿನ ‘ಸಿ ನ್ಯೂಸ್’ನ ಯೂಟ್ಯೂಬ್ ಸುದ್ದಿ ವಾಹಿನಿಯಲ್ಲಿ ಶಿವಾಜಿ ಪ್ರತಾಪಗಡದಲ್ಲಿ ಅಫಜಲ್ ಖಾನ್ ವಧೆಯ ಶಿಲ್ಪವನ್ನು ಸ್ಥಾಪಿಸುವ ಕುರಿತಾದ ಸುದ್ದಿಯನ್ನು ನೋಡಿ, ಹಿಂದೂ ಏಕತಾ ಆಂದೋಲನದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ. ನಿತಿನ ಶಿಂದೆ ಅವರನ್ನು ಮತಾಂಧ ಮುಸ್ತಫಾ ಮುಲಾಣಿ ಕೊಲ್ಲುವ ಬೆದರಿಕೆಯನ್ನು ಹಾಕಿದ್ದಾನೆ. ಈ ಸಂಬಂಧ ‘ಮತಾಂಧ ಮುಲಾಣಿಯ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಹಿಂದೂ ಏಕತಾ ಆಂದೋಲನದ ಪದಾಧಿಕಾರಿಗಳು ಸಾಂಗ್ಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸಂದರ್ಭದಲ್ಲಿ ಹಿಂದೂ ಏಕತಾ ಆಂದೋಲನದ ಮಿರಜ ನಗರಾಧ್ಯಕ್ಷ ಶ್ರೀ. ಸೋಮನಾಥ ಗೋಟಖಿಂಡೆ, ಕಾರ್ಯಕರ್ತರಾದ ಸರ್ವಶ್ರೀ ರಾಜು ಜಾಧವ, ಅವಧೂತ ಜಾಧವ, ಅನಿರುದ್ಧ ಕುಂಭಾರ, ಅರುಣ ವಾಘಮೋಡೆ, ಅರವಿಂದ ಯೇತನಾಳೆ, ಗಜಾನನ ಮಾನೆ, ಸುಮಿತ ಶಿಂಗೆ, ದಿಗ್ವಿಜಯ ಶಿಂದೆ, ಶುಭಂ ಗವಳಿ, ಅನಿಕೇತ ಆಂಬರುಳೆ, ಅನಿಕೇತ ಕುಂಬಾರ, ಶಾಂತಾರಾಮ ಶಿಂದೆ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಂಪಾದಕೀಯ ನಿಲುವು

  • ಮತಾಂಧರಿಗೆ ಕಾನೂನು ಮತ್ತು ಸುವ್ಯವಸ್ಥೆಯ ಭಯವೇ ಉಳಿದಿಲ್ಲ, ಇದು ಛತ್ರಪತಿ ಶಿವಾಜಿ ಮಹಾರಾಜರ ಮಹಾರಾಷ್ಟ್ರಕ್ಕೆ ಖೇದಕರ!
  • ಇಂತಹ ಬೆದರಿಕೆ ಹಾಕಿದ ಮತಾಂಧನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು, ಇದು ಛತ್ರಪತಿ ಶಿವಾಜಿ ಮಹಾರಾಜ ಪ್ರೇಮಿಗಳ ಅಪೇಕ್ಷೆ!

ಆಧಾರ : ಸನಾತನ ಪ್ರಭಾತ ಪತ್ರಿಕೆ

Read more on Hindu Organisations

Related News