ಮಂಗರೂಳನಾಥದಲ್ಲಿ ವಿರಾಟ್ ಹಿಂದೂ ಧರ್ಮಸಭೆ

ಅಕೋಲಾ – ನಮಗೆ ನಮ್ಮದೇ ಘಾತುಕ ಹಿಂದೂಗಳಿಂದ ಹೆಚ್ಚು ಅಪಾಯವಿದೆ. ಇಂತಹ ಅವಿವೇಕಿ ಹಿಂದೂಗಳಿಂದ ಸನಾತನಿ ವಿಚಾರಧಾರೆಯ ಜನರು ಸಂಪೂರ್ಣವಾಗಿ ಎಚ್ಚರದಿಂದ ಇರಬೇಕಾದ ಅವಶ್ಯಕತೆ ಇದೆ. ದೇಶಕ್ಕೆ ಹೊರಗಿನ ಶತ್ರುಗಳಿಗಿಂತ, ಒಳಗಿರುವ ಘಾತುಕ ಜಯಚಂದರಿಂದ ಹೆಚ್ಚು ಅಪಾಯವಿದೆ. ದೇಶದಲ್ಲಿ ಲವ್ ಜಿಹಾದ್ ನಡೆಯುತ್ತಿದೆ. ಹಿಂದೂ ವಿರೋಧಿ ಜನರು ಹಿಂದೂಯೇತರರನ್ನು ಪ್ರಚೋದಿಸುತ್ತಿದ್ದಾರೆ.
ಜಾತ್ಯತೀತರು ಹಿಂದೂ ಧರ್ಮದ ಬಗ್ಗೆ ತಪ್ಪು ಕಲ್ಪನೆಗಳನ್ನು ಹರಡುವ ಹಟ ಹಿಡಿದಿದ್ದಾರೆ. ಇದಕ್ಕೆ ಕಡಿವಾಣ ಹಾಕುವುದು ಅವಶ್ಯಕವಾಗಿದೆ. ಪ್ರಧಾನಮಂತ್ರಿ ಮೋದಿ ಅವರು ಇಲ್ಲದೇ ಇದ್ದಿದ್ದರೆ, ಇಂದು ದೇಶ ಎಲ್ಲಿಗೋ ಹೋಗಿರುತ್ತಿತ್ತು, ಎಂದು ಭಾಗ್ಯನಗರದ ಗೋಶಾಮಹಲ್ ಶಾಸಕ ಟಿ. ರಾಜಾಸಿಂಗ್ ಅವರು ಮಂಗರೂಳನಾಥದ ವಿರಾಟ್ ಹಿಂದೂ ಧರ್ಮಸಭೆಯಲ್ಲಿ ಪ್ರತಿಪಾದಿಸಿದರು. ನವೆಂಬರ್ ೧ ರಂದು ಜಿಲ್ಲಾ ಪರಿಷತ್ ಕ್ರೀಡಾ ಮೈದಾನದಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ನಾಗಾ ಸನ್ಯಾಸಿ ಸುದರ್ಶನ ಗಿರಿ (ಗೋಸ್ವಾಮಿ ಸಂತ ತುಳಸಿದಾಸ ಮಹಾರಾಜರ ವಂಶಸ್ಥರು); ಶ್ರೀ ಶ್ರೀ ಶಿವ ವೆಂಕಟೇಶ ಆನಂದ ಭಾರತಿ ಸ್ವಾಮಿ ಮಹಾರಾಜ್, ಹರಿದ್ವಾರ ಅವರ ವಂದನೀಯ ಉಪಸ್ಥಿತಿ ಇತ್ತು. ಅವರೂ ಸಹ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅವರು, ಹಿಂದೂಯೇತರರ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸನಾತನಿ ಹಿಂದೂಗಳ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಆದ್ದರಿಂದ ದೇಶದಲ್ಲಿ ‘ಹಮ್ ದೋ ಹಮಾರೆ ದೋ’ (ನಾವು ಇಬ್ಬರು ಮತ್ತು ನಮ್ಮ ಇಬ್ಬರು – ೨ ಮಕ್ಕಳು) ಈ ಕಾನೂನನ್ನು ಎಲ್ಲರಿಗೂ ತರುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಟಿ. ರಾಜಾಸಿಂಗ್ ಅವರಿಗೆ ವಾಶಿಮ್ ಜಿಲ್ಲೆಗೆ ಬರಲು ನಿರ್ಬಂಧವಿದ್ದರೂ, ಮುಂಬಯಿ ಉಚ್ಚ ನ್ಯಾಯಾಲಯದ ನಾಗಪುರ ಪೀಠವು ವಿರಾಟ್ ಹಿಂದೂ ಧರ್ಮಸಭೆಗಾಗಿ ಅವರಿಗೆ ಷರತ್ತುಬದ್ಧ ಅನುಮತಿ ನೀಡಿತ್ತು. ಈ ಕಾರ್ಯಕ್ರಮ ನಡೆಯಬಾರದು ಎಂದು ಕೆಲವು ಹಿಂದೂ ವಿರೋಧಿಗಳು ಬಹಳಷ್ಟು ಪ್ರಯತ್ನಗಳನ್ನು ಮಾಡಿದ್ದರು.
ಆಧಾರ : ಸನಾತನ ಪ್ರಭಾತ ಪತ್ರಿಕೆ


