(ಘರ್‌ವಾಪಸಿ ಎಂದರೆ ಹಿಂದೂ ಧರ್ಮಕ್ಕೆ ಪುನಃ ಪ್ರವೇಶ)

ಸಾರಂಗಢ (ಛತ್ತೀಸ್‌ಗಢ) – ಛತ್ತೀಸ್‌ಗಢ ರಾಜ್ಯದ ಸಾರಂಗಢದಲ್ಲಿ ಇತ್ತೀಚೆಗೆ ನಡೆದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ೧೪೦ ಮುಸಲ್ಮಾನರು ಹಿಂದೂ ಧರ್ಮಕ್ಕೆ ಪುನಃ ಪ್ರವೇಶ ಪಡೆದರು. ಪ.ಪೂ. ಅಜಯ ಉಪಾಧ್ಯಾಯ ಅವರ ವಂದನಿಯ ಉಪಸ್ಥಿತಿಯಲ್ಲಿ ಈ ‘ಘರ್‌ವಾಪಸಿ’ ಕಾರ್ಯಕ್ರಮ ನಡೆಯಿತು. ಈ ಐತಿಹಾಸಿಕ ಸಂದರ್ಭದಲ್ಲಿ ‘ಅಖಿಲ ಭಾರತೀಯ ಘರ್‌ವಾಪಸಿ ಅಭಿಯಾನ’ದ ಪ್ರಮುಖ ಶ್ರೀ. ಪ್ರಬಲ ಪ್ರತಾಪಸಿಂಗ ಜುದೇವ್ ಅವರು ಮುಖ್ಯ ಅತಿಥಿಗಳಾಗಿ ಹಾಜರಿದ್ದರು. ಅವರು ಎಲ್ಲಾ ೧೪೦ ಮುಸಲ್ಮಾನ್ ಬಂಧುಗಳ ಕಾಲು ತೊಳೆದು ಸನಾತನ ಧರ್ಮಕ್ಕೆ ವಿಧಿವತ್ತಾಗಿ ಸ್ವಾಗತಿಸಿದರು.

೧. ಈ ಸಂದರ್ಭದಲ್ಲಿ ಶ್ರೀ. ಪ್ರಬಲ ಪ್ರತಾಪಸಿಂಗ ಜುದೇವ್ ಅವರು, “ಸನಾತನ ಧರ್ಮವು ಕೇವಲ ಶ್ರದ್ಧೆಯಲ್ಲ, ಬದಲಿಗೆ ಒಂದು ಅತ್ಯುತ್ತಮ ಜೀವನ ಪದ್ಧತಿಯಾಗಿದೆ. ಸನಾತನ ಧರ್ಮವು ಸಾಮರಸ್ಯ, ಪ್ರೀತಿ ಮತ್ತು ಸತ್ಯದ ಹಾದಿಯಲ್ಲಿ ನಡೆಯಲು ಕಲಿಸುತ್ತದೆ. ‘ಘರ್‌ವಾಪಸಿ’ ಎಂಬುದು ಕೇವಲ ಒಂದು ಅಭಿಯಾನವಲ್ಲ, ಅದು ರಾಷ್ಟ್ರ ನಿರ್ಮಾಣದ ಕಾರ್ಯವಾಗಿದೆ” ಎಂದು ಹೇಳಿದರು.
माँ समलेश्वरी की पावन भूमि पर धर्म की पुनः स्थापना हुई!🚩
सारंगढ़ (छत्तीसगढ़) में आयोजित “विराट हिन्दू सम्मेलन” में पूजनीय अजय उपाध्याय जी महाराज के सानिध्य में 140 धर्मांतरित बंधुओं के पैर पखारकर उन्हें विधिवत सनातन धर्म में घरवापसी करवाकर स्वागत किया।
माँ समलेश्वरी की पवित्र… pic.twitter.com/3JNMxjCNhm
— Prabal Pratap Singh Judev (@prabaljudevBJP) October 31, 2025
ಆಧಾರ : ಸನಾತನ ಪ್ರಭಾತ ಪತ್ರಿಕೆ


