Menu Close

ಧಾರ್ಮಿಕ-ಸಾಂಸ್ಕೃತಿಕ ಚಿಂತನೆಯ ದಾರಿದೀಪ, ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ ಡಾ. ಎಸ್‌.ಎಲ್‌. ಭೈರಪ್ಪರ ಅಗಲಿಕೆಗೆ ಹಿಂದೂ ಜನಜಾಗೃತಿ ಸಮಿತಿಯ ಶ್ರದ್ಧಾಂಜಲಿ

ಡಾ. ಎಸ್‌.ಎಲ್‌. ಭೈರಪ್ಪ

ಕನ್ನಡದ ಅತ್ಯುನ್ನತ ಕಾದಂಬರಿಕಾರ, ತತ್ತ್ವಚಿಂತಕ, ಪದ್ಮಭೂಷಣ, ಪದ್ಮಶ್ರೀ ಹಾಗೂ ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಡಾ. ಎಸ್‌.ಎಲ್‌. ಭೈರಪ್ಪ ಅವರ ನಿಧನವು ಭಾರತೀಯ ಸಾಹಿತ್ಯ ಲೋಕಕ್ಕೆ ಮತ್ತು ಧರ್ಮ-ಸಂಸ್ಕೃತಿಯ ಚಿಂತನೆಗೆ ಅಳಿಸಲಾಗದ ನಷ್ಟವಾಗಿದೆ.

ಡಾ. ಭೈರಪ್ಪ ಅವರು ತಮ್ಮ ಕೃತಿಗಳ ಮೂಲಕ ಭಾರತದ ಇತಿಹಾಸ, ಸಂಸ್ಕೃತಿ, ಧರ್ಮ ಮತ್ತು ಸಮಾಜದ ವಾಸ್ತವತೆಯನ್ನು ವಸ್ತುನಿಷ್ಠವಾಗಿ ಪ್ರತಿಬಿಂಬಿಸಿ, ಓದುಗರನ್ನು ಚಿಂತನೆಗೆ, ಆತ್ಮಪರಿಶೀಲನೆಗೆ ಪ್ರೇರೇಪಿಸಿದರು. ಪರ್ವ, ಆವರಣ, ಉತ್ತರಕಾಂಡ, ಮಂಡರ ಮುಂತಾದ ಕೃತಿಗಳು ಕೇವಲ ಸಾಹಿತ್ಯ ಸೃಷ್ಟಿಗಳಷ್ಟೇ ಅಲ್ಲ, ಅವು ಭಾರತೀಯ ಆತ್ಮದ ಪ್ರತಿಬಿಂಬಗಳಾಗಿವೆ.

ಹಿಂದೂ ಸಮಾಜದ ಮುಂದೆ ನಿಂತ ಅನೇಕ ಸವಾಲುಗಳ ಸತ್ಯವನ್ನು ಅವರ ಬರಹಗಳು ಧೈರ್ಯವಾಗಿ ಬಿಚ್ಚಿಟ್ಟಿವೆ. ಧರ್ಮ, ಸತ್ಯ ಮತ್ತು ಸಂಸ್ಕೃತಿಯ ಪರ ಹೋರಾಡುವ ಬಗೆಯಲ್ಲಿ ಅವರು ನೀಡಿದ ಕೊಡುಗೆ ಮುಂದಿನ ಪೀಳಿಗೆಯವರಿಗೆ ಮಾರ್ಗದರ್ಶಿಯಾಗಲಿದೆ.

ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕದ ಪರವಾಗಿ, ಡಾ. ಭೈರಪ್ಪರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತದೆ. ಅವರ ಚಿಂತನೆ, ತತ್ವ ಮತ್ತು ಧರ್ಮಜಾಗೃತಿ ಸಂದೇಶಗಳು ಸದಾಕಾಲ ಪ್ರೇರಣೆಯಾಗಲಿ.

ॐ ಶಾಂತಿಃ 🙏

Related News