ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ವೈಚಾರಿಕ ಆಕ್ರಮಣ ಬಯಲಿಗೆ ಮುಂದಡಿ !

ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ಧರ್ಮ, ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಹಿಂದೂ ಸಂತರು, ಆಧ್ಯಾತ್ಮಿಕ ಸಂಸ್ಥೆಗಳು, ಹಿಂದೂ ಮುಖಂಡರು ಮತ್ತು ಹಿಂದೂ ಸಂಘಟನೆಗಳ ವಿರುದ್ಧ ಸುಳ್ಳು ಆರೋಪಗಳು, ಅಪಮಾನ ಹಾಗೂ ತೇಜೋವಧೆ ಮಾಡುವಂತಹ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಈ ಪಿತೂರಿಯನ್ನು ಅರ್ಬನ್ ನಕ್ಸಲರು ಹಾಗೂ ಕೆಲವು ಅಂತರಾಷ್ಟ್ರೀಯ ಶಕ್ತಿಗಳು ಸಹ ಬೆಂಬಲಿಸುತ್ತಿವೆ.
ಈ ಗಂಭೀರ ವಿಷಯವನ್ನು ಸಮಾಜದ ಮುಂದಿಡಲು ಮತ್ತು ನಿಜಾಂಶವನ್ನು ಬಯಲು ಮಾಡಲು, ಇದೇ ಸೆಪ್ಟೆಂಬರ್ 9 ಮಂಗಳವಾರ ಸಂಜೆ 5.30 ಗಂಟೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜ್ ಅಡಿಟೋರಿಯಂನಲ್ಲಿ “ವೈಚಾರಿಕ ಆಕ್ರಮಣ : ಭಾರತದ ಆಂತರಿಕ ಶತ್ರು !!” ಎಂಬ ಶೀರ್ಷಿಕೆಯಡಿ ವಿಶೇಷ ಚರ್ಚಾಕೂಟ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ. ಪಿ. ಕೃಷ್ಣ ಭಟ್, ಯುವ ಬ್ರಿಗೇಡ್ ಸಂಸ್ಥಾಪಕರಾದ ಶ್ರೀ. ಚಕ್ರವರ್ತಿ ಸೂಲಿಬೆಲೆ, The Dharma Dispatch ನ ಮುಖ್ಯ ಸಂಪಾದಕರಾದ ಶ್ರೀ. ಸಂದೀಪ್ ಬಾಲಕೃಷ್ಣ, ಸಂವಾದ ಟಿವಿಯ ಸಂಪಾದಕರಾದ ಶ್ರೀ. ವೃಷಾಂಕ ಭಟ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ ಇವರು ಈ ಚರ್ಚಾಕೂಟದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಈ ಕಾರ್ಯಕ್ರಮಕ್ಕಾಗಿ ರಾಷ್ಟ್ರನಿಷ್ಠ ವಕೀಲರು, ಉದ್ಯಮಿಗಳು, ವೈದ್ಯರು, ಹಿಂದುತ್ವನಿಷ್ಠರು ಸೇರಿದಂತೆ ನೂರಾರು ರಾಷ್ಟ್ರಭಕ್ತರು ಸೇರಲಿದ್ದಾರೆ. ಈ ಕಾರ್ಯಕ್ರಮವು ಹಿಂದೂ ಜನಜಾಗೃತಿ ಸಮಿತಿಯ ಯೂಟ್ಯೂಬ್ ಚಾನೆಲ್ HJSkarnataka ಮತ್ತು ಫೇಸ್ಬುಕ್ ಪೇಜ್ JagoHinduBengaluru ಈ ಸಾಮಾಜಿಕ ಮಾಧ್ಯಮಗಳ ಮೂಲಕ ನೇರಪ್ರಸಾರ ಇರಲಿದೆ.
ಪತ್ರಕರ್ತರಿಗೆ ಕರೆ !
ಸಮಾಜದ ಹಿತಕ್ಕಾಗಿ ಹಮ್ಮಿಕೊಂಡಿರುವ ಈ ಮಹತ್ವದ ಕಾರ್ಯಕ್ರಮದ ಬಗ್ಗೆ ಸರಿಯಾದ ಮಾಹಿತಿ ಜನಸಾಮಾನ್ಯರಿಗೆ ತಲುಪಿಸಲು ಈ ಕಾರ್ಯಕ್ರಮದ ವರದಿಯನ್ನು ಉತ್ತಮ ರೀತಿಯಲ್ಲಿ ಪ್ರಕಟಿಸಿ ರಾಷ್ಟ್ರಕಾರ್ಯದಲ್ಲಿ ಕೈಜೋಡಿಸಬೇಕೆಂದು ವಿನಂತಿಸುತ್ತೇವೆ.


