Menu Close

ಝೆನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮ !

ಸ್ವಾತಂತ್ರ್ಯೋತ್ಸವದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯಾ ಗೌಡ ಇವರ ಸಹಭಾಗ

ಬೆಂಗಳೂರು: ನಗರದ ಪ್ರಖ್ಯಾತ ಝೆನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆಗಸ್ಟ್ 15ರಂದು 79ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ರಣಾರಾಗಿಣಿ ಶಾಖೆಯ ವಕ್ತಾರರಾದ ಸೌ. ಭವ್ಯ ಗೌಡ ಅವರಿಂದ ಧ್ವಜಾರೋಹಣ ನೆರವೇರಿತು. ಈ ಸಂದರ್ಭದಲ್ಲಿ ಶಾಲೆಯ ವ್ಯವಸ್ಥಾಪಕ ಮುಖ್ಯಸ್ಥರಾದ ಶ್ರೀ. ವೆಂಕಟೇಶ್ ಕೃಷ್ಣಮೂರ್ತಿ, ಡಾ. ಸೌ. ಸುಧಾಮೂರ್ತಿ, ಪ್ರಾಂಶುಪಾಲರು, ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಧ್ವಜಾರೋಹಣದ ವೇಳೆ ಸೌ. ಭವ್ಯ ಗೌಡ ಅವರು ಮಾತನಾಡಿ, ” ಇಂದು ನಾವೆಲ್ಲರೂ 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದೇವೆ, ಈ ಸ್ವಾತಂತ್ರ್ಯಕ್ಕಾಗಿ 6 ಲಕ್ಷ ಜನ ಕ್ರಾಂತಿಕಾರಿ ದೇಶ ಪ್ರೇಮಿಗಳು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಅವರ ತ್ಯಾಗ, ಬಲಿದಾನದಿಂದಾಗಿ ನಾವು ಈ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಖುದಿರಾಮ್ ಬೋಸ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಮದನ್ ಲಾಲ್ ದಿಂಗ್ರ ರಂತಹ ಕ್ರಾಂತಿಕಾರಿಗಳ ದೇಶಪ್ರೇಮ, ಧೈರ್ಯ, ನಿಷ್ಠೆ, ತ್ಯಾಗವನ್ನು ನಮ್ಮಲ್ಲಿ ಬೆಳೆಸಿಕೊಳ್ಳಬೇಕು. ಇದೊಂದು ದಿನಕ್ಕೆ ನಮ್ಮ ರಾಷ್ಟ್ರ ಪ್ರೇಮ ಸೀಮಿತವಾಗದೆ ಜೀವನ ಪೂರ್ತಿಯಾಗಿ ಅಳವಡಿಸಿಕೊಳ್ಳಬೇಕು ಮತ್ತು ರಾಷ್ಟ್ರ ಪುರುಷರ ಜೀವನ ಚರಿತ್ರೆಯನ್ನು ಓದಿ ಅವರ ಆದರ್ಶ ಜೀವನ ಮತ್ತು ತತ್ವವನ್ನು ನಾವು ಪಾಲಿಸಬೇಕು ಹಾಗೂ ಯುವ ಪೀಳಿಗೆಗೆ ಶಿಕ್ಷಣದೊಂದಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು ” ಎಂದು ಕರೆ ನೀಡಿದರು.

ಶಾಲೆಯ ವ್ಯವಸ್ಥಾಪಕ ಮುಖ್ಯಸ್ಥರಾದ ಶ್ರೀ. ವೆಂಕಟೇಶ್ ಕೃಷ್ಣಮೂರ್ತಿ ಇವರು ಮಾತನಾಡಿ ನಾವೆಲ್ಲರು ದೇಶ ಪ್ರೇಮವನ್ನು ಛತ್ರಪತಿ ಶಿವಾಜಿ ಮಹಾರಾಜರಿಂದ ಕಲಿಯಬೇಕು ಹಾಗೂ ಗುರು ಶಿಷ್ಯ ಪರಂಪರೆಯ ವಿದ್ಯಾರಣ್ಯರಂತೆ ಶಿಕ್ಷಕರು ತಯಾರಿಯಾಗಬೇಕು ಮತ್ತು ಹಕ್ಕ ಬುಕ್ಕರಂತೆ ಮಕ್ಕಳಲ್ಲಿ ದೇಶಪ್ರೇಮವನ್ನು ನಿರ್ಮಾಣಮಾಡಿ ಸಕ್ಷಮವಾಗಿ ತಯಾರು ಮಾಡಬೇಕು ಕರೆಕೊಟ್ಟರು.

ಡಾ. ಸೌ. ಸುಧಾ ಮೂರ್ತಿ ಇವರು ಮಾತನಾಡಿ ಮಕ್ಕಳಲ್ಲಿ ದೇಶ ಪ್ರೇಮವನ್ನು ನಿರ್ಮಾಣ ಮಾಡಬೇಕು ಮತ್ತು ಜಾತಿ, ಪಂಥದ ಬೇಧ ಭಾವವನ್ನು ಮರೆತು ನಾವು ದೇಶಕ್ಕೋಸ್ಕರ ಒಂದಾಗಬೇಕು. ಅನ್ಯಾಯ ಎಲ್ಲಿ ಆಗುತ್ತಿದೆ ಅಲ್ಲಿ ನಾವೆಲ್ಲರೂ ಸಹ ಮುಂದಾಗಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮಕ್ಕಳು ಎಲ್ಲಾ ರಾಷ್ಟ್ರ ಪುರುಷರ ಮತ್ತು ವೀರ ಮಹಿಳೆಯರ ವೇಷ ಭೂಷಣವನ್ನು ಧರಿಸಿದ್ದರು ಮತ್ತು ಎಲ್ಲಾ ರಾಷ್ಟ್ರಪುರುಷರ ಜಯ ಘೋಷವನ್ನು ಕೂಗಿದರು.

Related News