
ಗುರುಪೂಜೆ
ಜುಲೈ 10 2025 ಆಷಾಢ ಹುಣ್ಣಿಮೆ, ಅಂದರೆ ಗುರುಪೂರ್ಣಿಮೆ, ಭಾರತೀಯ ಸಂಸ್ಕೃತಿಯಲ್ಲಿನ ಗುರುಶಿಷ್ಯ ಪರಂಪರೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ಗುರುಪೂರ್ಣಿಮೆ ನಿಮಿತ್ತ ರಾಷ್ಟ್ರ ಹಾಗೂ ಧರ್ಮದ ರಕ್ಷಣೆಗಾಗಿ ಹಿಂದೂ ಸಮಾಜವನ್ನು ಸಂಘಟಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಶಿವಮೊಗ್ಗ, ದಾವಣಗೆರೆ, ಉಡುಪಿ, ಮಂಗಳೂರು, ಹುಬ್ಬಳ್ಳಿ, ಗದಗ, ವಿಜಯಪುರ, ರಾಯಚೂರು, ಸೇರಿದಂತೆ 23 ಕಡೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ರಾಷ್ಟ್ರ ನಿಷ್ಠ ವಕೀಲರು, ಹಿಂದೂ ಸಂಘಟನೆಗಳ ಕಾರ್ಯಕರ್ತರು, ವೈದ್ಯರು, ಉದ್ಯಮಿಗಳು, ಸಾಧಕರು ಸೇರಿದಂತೆ 8000 ಕ್ಕೂ ಅಧಿಕ ಹಿಂದೂ ಬಾಂಧವರು ಹಾಗೂ ಶ್ರೀರಾಮ ಸೇನೆಯ ಸಂಸ್ಥಾಪಕರು ಶ್ರೀ. ಪ್ರಮೋದ ಮುತಾಲಿಕ, ರಾಷ್ಟ್ರ ರಕ್ಷಣಾ ಪಡೆಯ ಶ್ರೀ. ಪುನೀತ ಕೆರೆ ಹಳ್ಳಿ, ರಾಷ್ಟ್ರ ಧರ್ಮ ಸಂಘಟನೆಯ ಶ್ರೀ. ಸಂತೋಷ ಕೆಂಚಾಂಬ, ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್‌ರಮಗಳಲ್ಲಿ ಉಪಸ್ಥಿತರಿದ್ದರು. ಇನ್ನು ನೇರಪ್ರಸಾರದ ಮೂಲಕ ಸುಮಾರು 4500 ಕ್ಕೂ ಅಧಿಕ ಹಿಂದೂಗಳು ಕಾರ್ಯಕ್ರಮ ವೀಕ್ಷಿಸಿದ್ದಾರೆ, ಆಂಗ್ಲ, ತೆಲುಗು ಮತ್ತು ಬಂಗಾಳಿ ಭಾಷೆಗಳಲ್ಲಿಯೂ ಈ ಕಾರ್ಯಕ್ರಮದ ನೇರಪ್ರಸಾರ ಆಯಿತು.
ಕಾರ್ಯಕ್ರಮದ ಬೆಳಗ್ಗಿನ ಅವಧಿಯಲ್ಲಿ ಮಧ್ಯಪ್ರದೇಶದ ಶ್ರೇಷ್ಠ ಸಂತರು ಮತ್ತು ಸನಾತನ ಸಂಸ್ಥೆಯ ಪ್ರೇರಣಾಸ್ಥಾನ ಪ. ಪೂ. ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆ ಮಾಡಲಾಯಿತು. ನಂತರ ಆಧ್ಯಾತ್ಮಿಕ ಸಾಧನೆ ಮತ್ತು ಧರ್ಮಾಚರಣೆ ಮಾಡಿ ಶಿಕ್ಷಣದಲ್ಲೂ ಉತ್ತಮ ರೀತಿ ಫಲಿತಾಂಶ ಪಡೆದ ಸುಮಾರು ಸಾಧಕ ವಿದ್ಯಾರ್ಥಿಗಳ ಸತ್ಕಾರ ಮಾಡಲಾಯಿತು. ನಂತರ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಗುರುಪೂರ್ಣಿಮೆ ನಿಮಿತ್ತ ಹಿಂದೂ ಸಮಾಜಕ್ಕೆ ನೀಡಿದ ಸಂದೇಶದ ವಾಚನ ಮಾಡಲಾಯಿತು. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆಧ್ಯಾತ್ಮಿಕ ಬಲ ವೃದ್ಧಿಗಾಗಿ ಎಲ್ಲಡೆ ಸಾಮೂಹಿಕವಾಗಿ ಪ್ರಭು ಶ್ರೀರಾಮನ ನಾಮಜಪ ಮಾಡಲಾಯಿತು. ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಸಾಧನೆ ಮಾಡಿ ತಮ್ಮ ಜೀವನದಲ್ಲಿ ಬದಲಾವಣೆಗಳನ್ನು ಕಂಡ ಸಾಧಕರು ತಮ್ಮ ಅನುಭವಗಳನ್ನು ಹಂಚಿಕೊಂಡರು. ನಂತರ ಉಪಸ್ಥಿತ ಗಣ್ಯರು ತಮ್ಮ ಮಾರ್ಗದರ್ಶನ ಮಾಡಿದರು.
ಹಿಂದೂ ಧರ್ಮದ ಮೇಲಿನ ಆಘಾತಗಳನ್ನು ತಡೆಯಲು ಹಿಂದೂಗಳು ಶಕ್ತಿಯ ಉಪಾಸನೆ ಮಾಡಬೇಕು ! – ಶ್ರೀ. ಪ್ರಮೋದ ಮುತಾಲಿಕ್, ಅಧ್ಯಕ್ಷರು, ಶ್ರೀರಾಮಸೇನೆ

ಶ್ರೀ. ಪ್ರಮೋದ್ ಮುತಾಲಿಕ್, ಅಧ್ಯಕ್ಷರು, ಶ್ರೀರಾಮ ಸೇನೆ
ಮುತಾಲಿಕ ಅವರು ಮಾತನಾಡಿ ಸದ್ಯ ಹಿಂದೂ ಧರ್ಮದ ಮೇಲೆ ವಿವಿಧ ರೀತಿಯ ಆಯಾಮಗಳಲ್ಲಿ ಆಕ್ರಮಣಗಳು ನಡೆಯುತ್ತಿದೆ. ಲವ್ ಜಿಹಾದ್, ಮತಾಂತರ, ಗೋ ಹತ್ಯೆ, ಜನಸಂಖ್ಯಾ ಜಿಹಾದ್ ಇವೆಲ್ಲವುಗಳಿಂದ ಭವಿಷ್ಯದಲ್ಲಿ ಹಿಂದೂ ಸಮಾಜ ಅನೇಕ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಹಿಂದೂಗಳು ಶಕ್ತಿಯ ಉಪಾಸನೆಯನ್ನು ಮಾಡಬೇಕಾಗಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕ್, ಸಂಗೊಳ್ಳಿ ರಾಯಣ್ಣ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವರಂತೆ ಶಕ್ತಿಯ ಉಪಾಸನೆಯನ್ನು ಮಾಡಬೇಕಾಗಿದೆ. ನಾವು ಬಾಹ್ಯ ಶತ್ರುಗಳನ್ನ ಸುಲಭವಾಗಿ ಎದುರಿಸಬಹುದು ಆದರೆ ಆಂತರಿಕ ಶತ್ರುಗಳನ್ನ ಎದುರಿಸುವುದು ತುಂಬಾ ಕಠಿಣ. ಆದರೆ ಈ ಕಾರ್ಯವನ್ನು ಹಿಂದೂ ಸಂಘಟನೆಗಳಾದ ಹಿಂದೂ ಜನಜಾಗೃತಿ ಸಮಿತಿ, ಶ್ರೀರಾಮ ಸೇನೆ, ಬಜರಂಗದಳ ಈ ಸಂಘಟನೆಗಳು ಎದುರಿಸುತ್ತವೆ. ಈ ಎಲ್ಲ ಸಂಘಟನೆಗಳಿಗೆ ಮಾರ್ಗದರ್ಶನ ಪ್ರೇರಣೆ ಗುರುವಿನ ಸ್ಥಾನದಲ್ಲಿದ್ದು ಸನಾತನ ಸಂಸ್ಥೆಯು ಮಾಡುತ್ತಿದೆ. ಇಂತಹ ಸರ್ವ ಶ್ರೇಷ್ಠವಾದಂತಹ ಸನಾತನ ಸಂಸ್ಥೆಯ ಗುರುಗಳ ಮಾರ್ಗದರ್ಶನದಲ್ಲಿ ಹಿಂದೂ ಸಂಘಟನೆಗಳು ಕಾರ್ಯವನ್ನು ಮಾಡಿದರೆ ಬಹುಬೇಗ ಹಿಂದೂ ರಾಷ್ಟ್ರವನ್ನು ಸಾಕಾರ ಮಾಡಬಹುದು ಎಂದರು. ಈ ಸಂದರ್ಭದಲ್ಲಿ ಅವರು ರಾಷ್ಟ್ರರಕ್ಷಣೆಗಾಗಿ ಜೀವನವನ್ನು ಮುಡಿಪಾಗಿರಿಸಿರುವ ರಾಷ್ಟ್ರ ರಕ್ಷಣಾ ಪಡೆಯ ಶ್ರೀ. ಪುನೀತ ಕೆರೆಹಳ್ಳಿಯವರಿಗೆ ಮುತಾಲಿಕರವರು ಸತ್ಕಾರ ಮಾಡಿದರು.
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕ್ಷಾತ್ರತೇಜ ವೃದ್ಧಿಸುವುದು ಅತ್ಯಾವಶ್ಯಕ ! – ಶ್ರೀ. ಸಂತೋಷ ಕೆಂಚಾಂಬ, ರಾಷ್ಟ್ರ ಧರ್ಮ ಸಂಘಟನೆ !
ಶ್ರೀ. ಸಂತೋಷ ಕೆಂಚಾಂಬ ಅವರು ಮಾತನಾಡಿ ವಿದ್ಯಾರಣ್ಯರು ಮತ್ತು ರಾಮದಾಸ ಸ್ವಾಮಿಗಳಂತಹ ಮಹಾನ್ ಗುರುಗಳನ್ನು ಸ್ಮರಿಸುತ್ತಾ, ಭಾರತಕ್ಕೆ ಈಗ ಗುರುಗಳ ಮಾರ್ಗದರ್ಶನ ಅತ್ಯಂತ ಅಗತ್ಯವಿದೆ. ಮುಂಬರುವ ಆಪತ್ಕಾಲದಲ್ಲಿ ದೇಶಕ್ಕೆ ಕ್ಷಾತ್ರತೇಜದ ಆವಶ್ಯಕತೆಯಿದೆ, ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ಥಾನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪ್ರತಿಯೊಂದು ಮಾರ್ಗದರ್ಶನ ಇದೇ ದಿಶೆಯಲ್ಲಿದ್ದು ನನಗೂ ಇದರಿಂದ ಪ್ರೇರಣೆ ಲಭಿಸಿದೆ, ಪ್ರತಿಯೊಬ್ಬ ಹಿಂದೂವೂ ಈ ದಿಶೆಯಲ್ಲಿ ಸಾಗಬೇಕಿದೆ. ಭಯೋತ್ಪಾದನೆಯಂತಹ ಸಮಸ್ಯೆ, ಯುವಜನತೆ ವ್ಯಸನಗಳ ಕಡೆ ಸಾಗುತ್ತಿರುವುದು, ಹಾಗೂ ಜಾತಿ-ಭಾಷೆ ಹೆಸರಿನಲ್ಲಿ ಹಿಂದೂಗಳಲ್ಲಿ ನಡೆಯುತ್ತಿರುವ ವಿಭಜನೆಯಂತಹ ಸಮಸ್ಯೆಗಳಿಗೆ ಹಿಂದೂಗಳ ಸಂಘಟನೆಯೇ ಏಕೈಕ ಪರಿಹಾರ ಎಂದರು.
ಗುರುಶಿಷ್ಯ ಪರಂಪರೆಯ ಆದರ್ಶವನ್ನಿಟ್ಟು ಧರ್ಮರಕ್ಷಣೆಗಾಗಿ ಸಂಘಟಿತರಾಗೋಣ ! – ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಪ್ರಭು ಶ್ರೀರಾಮನು ರಾವಣನ ವಿರುದ್ಧ ವಾನರಸೇನೆಯ ಸಂಘಟನೆ ನಿರ್ಮಿಸಿದರು. ಛತ್ರಪತಿ ಶಿವಾಜಿ ಮಹಾರಾಜರೂ ಹಿಂದೂಗಳ ಮೇಲೆ ಆಕ್ರಮಣ ಮಾಡುವ ಇಸ್ಲಾಮೀ ಸುಲ್ತಾನರ ವಿರುದ್ಧ ಸಾಮಾನ್ಯ ಮಾವಳೆಗಳ ಸಂಘಟನೆಯನ್ನು ಮಾಡಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಈ ಸಂಘಟನೆಯು ಧರ್ಮಕ್ಕಾಗಿ ತ್ಯಾಗ ಮಾಡುವ ಪ್ರೇರಣಾದಾಯಿ ವಿಚಾರದ ಮೇಲೆ ಆಗಿತ್ತು. ಇಂತಹ ನಿಸ್ವಾರ್ಥ ಸಂಘಟನೆ ನಿರ್ಮಾಣವಾದಾಗಲೇ ನಿಜವಾದ ಅರ್ಥದಲ್ಲಿ ರಾಮರಾಜ್ಯ ಮತ್ತು ಹಿಂದವೀ ಸ್ವರಾಜ್ಯ ಸಾಕಾರಗೊಳ್ಳುತ್ತದೆ. ಪ್ರಸ್ತುತ ಕಾಲದಲ್ಲಿಯೂ ಇಂತಹ ಸಂಘಟನೆಯ ಆವಶ್ಯಕತೆಯಿರುವುದರಿಂದ ಪ್ರಭು ಶ್ರೀರಾಮನಂತೆ ಆದರ್ಶ ಸಂಘಟನೆ ನಿರ್ಮಿಸಲು ಗುರುಶಿಷ್ಯ ಪರಂಪರೆಯ ಆದರ್ಶವನ್ನಿಟ್ಟು ಧರ್ಮರಕ್ಷಣೆಗಾಗಿ ಸಂಘಟಿತರಾಗೋಣ ಎಂದು ಕರೆ ನೀಡಿದರು.

ಶ್ರೀ. ಗುರುಪ್ರಸಾದ್ ಗೌಡ, ರಾಜ್ಯ ಸಂಯೋಜಕರು, ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ
ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುಪ್ರಸಾದ್ ಗೌಡ ಮಾತನಾಡುತ್ತ ಪ್ರಭು ಶ್ರೀರಾಮನು ರಾವಣನ ವಿರುದ್ಧ ವಾನರಸೇನೆಯ ಸಂಘಟನೆ ನಿರ್ಮಿಸಿದರು. ಛತ್ರಪತಿ ಶಿವಾಜಿ ಮಹಾರಾಜರೂ ಹಿಂದೂಗಳ ಮೇಲೆ ಆಕ್ರಮಣ ಮಾಡುವ ಇಸ್ಲಾಮೀ ಸುಲ್ತಾನರ ವಿರುದ್ಧ ಸಾಮಾನ್ಯ ಮಾವಳೆಗಳ ಸಂಘಟನೆಯನ್ನು ಮಾಡಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಈ ಸಂಘಟನೆಯು ಧರ್ಮಕ್ಕಾಗಿ ತ್ಯಾಗ ಮಾಡುವ ಪ್ರೇರಣಾದಾಯಿ ವಿಚಾರದ ಮೇಲೆ ಆಗಿತ್ತು. ಇಂತಹ ನಿಸ್ವಾರ್ಥ ಸಂಘಟನೆ ನಿರ್ಮಾಣವಾದಾಗಲೇ ನಿಜವಾದ ಅರ್ಥದಲ್ಲಿ ರಾಮರಾಜ್ಯ ಮತ್ತು ಹಿಂದವೀ ಸ್ವರಾಜ್ಯ ಸಾಕಾರಗೊಳ್ಳುತ್ತದೆ. ಪ್ರಸ್ತುತ ಕಾಲದಲ್ಲಿಯೂ ಇಂತಹ ಸಂಘಟನೆಯ ಆವಶ್ಯಕತೆಯಿರುವುದರಿಂದ ಪ್ರಭು ಶ್ರೀರಾಮನಂತೆ ಆದರ್ಶ ಸಂಘಟನೆ ನಿರ್ಮಿಸಲು ಕಟಿಬದ್ಧರಾಗೋಣ ಎಂದರು.
🛕ಬೆಂಗಳೂರಿನಲ್ಲಿ ನಡೆದ ಗುರುಪೂರ್ಣಿಮಾ ಮಹೋತ್ಸವದಲ್ಲಿ 1000 ಕ್ಕೂ ಅಧಿಕ ರಾಷ್ಟ್ರ ಭಕ್ತರು ಉಪಸ್ಥಿತರಿದ್ದರು
🚩 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ @HinduJagrutiOrg
— HJS Karnataka (@HJSKarnataka) July 12, 2025

ಸ್ವರಕ್ಷಾ ಪ್ರಾತ್ಯಕ್ಷಿಕೆಯ ದೃಶ್ಯ
ಶ್ರೀ. ಗುರು ಪ್ರಸಾದ್ ಗೌಡ ಇವರು ಮುಂದುವರೆಸಿ ಪ್ರಸ್ತುತ ಹಿಂದೂ ಸಮಾಜದ ಮೇಲೆ ಅನೇಕ ರೀತಿ ಆಘಾತಗಳಾಗುತ್ತಿವೆ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಮಾಯಕ ಹಿಂದೂಗಳ ಮೇಲೆ ದೌರ್ಜನ್ಯವೆಸಗಿದ ಘಟನೆಗಳು ಬೆಳಕಿಗೆ ಬಂದಿವೆ, ಇತ್ತೀಚೆಗೆ ಮಂಡ್ಯದಲ್ಲಿ ಮತಾಂಧರು ಗೋಹತ್ಯೆ ಮಾಡುತ್ತಿರುವಾಗ ಅನೇಕ ಹಿಂದೂಗಳು ಗೋರಕ್ಷಣೆ ಮಾಡಲು ಮುಂದಾದರೆ ಪೊಲೀಸರು ಗೋರಕ್ಷಕರನ್ನೇ ಬಂಧಿಸಿದರು. ವಕ್ಫ್ ಕಾನೂನಿನ ವಿರುದ್ಧ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮತಾಂಧರು ಗಲಭೆಗಳನ್ನು ನಡೆಸಿದರು. ಇದರಲ್ಲಿ ಪೊಲೀಸರ ಮೇಲೂ ಆಕ್ರಮಣ ಮಾಡಲಾಯಿತು, ಹಾಗೆಯೇ ಹಿಂದೂಗಳ ಮನೆಗಳು, ಅಂಗಡಿಗಳನ್ನು ಸುಡಲಾಯಿತು. ಉತ್ತರಪ್ರದೇಶ, ರಾಜಸ್ಥಾನ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಮತಾಂಧರು ಕಲ್ಲು ತೂರಿ ಹಿಂಸಾಚಾರ ನಡೆಸಿದರು. ಒಟ್ಟಾರೆ ಅಂಶವೇನೆಂದರೆ, ಭಾರತದ ಮೇಲೆ ಆಂತರಿಕ ಮತ್ತು ಬಾಹ್ಯ ಶತ್ರುಗಳಿಂದ ನಡೆಯುತ್ತಿರುವ ಆಕ್ರಮಣಗಳು ಕೇವಲ ವಿಸ್ತರಣಾವಾದಕ್ಕಾಗಿ ಅಲ್ಲ, ಬದಲಾಗಿ ಹಿಂದೂ ಧರ್ಮವನ್ನು ನಾಶಪಡಿಸಲು ನಡೆಯುತ್ತಿವೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ‘ದೇಶ’ ಕೇಳಿ ಗುಂಡು ಹಾರಿಸದೆ, ‘ಧರ್ಮ’ ಕೇಳಿ ಗುಂಡು ಹಾರಿಸಿದರು. ಇನ್ನು ನಮ್ಮ ಮುಂದೆ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಮತಾಂತರದಂತಹ ಅನೇಕ ಸಮಸ್ಯೆಗಳು ಇವೆ. ಇದೆಲ್ಲವನ್ನು ನೋಡಿದಾಗ ಹಿಂದೆ ಪ್ರಭು ಶ್ರೀರಾಮರ ಕಾಲದಲ್ಲಿ, ಶಿವಾಜಿ ಮಹಾರಾಜರ ಕಾಲದಲ್ಲಿ, ಹಕ್ಕ ಬುಕ್ಕರ ಕಾಲದಲ್ಲಿ ಇದೇ ರೀತಿ ಧರ್ಮಸಂಕಟಗಳು ಎದುರಿಗಿದ್ದವು. ಈ ಎಲ್ಲ ಸಂದರ್ಭಗಳಲ್ಲಿಯೂ ಅವರು ಗುರುಗಳ ಮಾರ್ಗದರ್ಶನ ಪಡೆದು ಧರ್ಮಸಂಸ್ಥಾಪನೆಯ ಕಾರ್ಯ ಮಾಡಿದ್ದಾರೆ. ಹಾಗಾಗಿ ಗುರುಶಿಷ್ಯ ಪರಂಪರೆಗೆ ಹಿಂದಿನಿಂದಲೂ ಅಷ್ಟೇ ಮಹತ್ವವಿದೆ. ಈಗ ನಾವೂ ಸಹ ಇಂದಿನ ಗುರುಪೂರ್ಣಿಮೆಯ ದಿನ ಧರ್ಮಸಂಸ್ಥಾಪನೆಗಾಗಿ ಸಂಘಟಿತರಾಗಲು ಸಂಕಲ್ಪ ಮಾಡಬೇಕಿದೆ ಎಂದರು.
ಲೈವ್ ರೆಕಾರ್ಡ್ ಮಾಡಲಾಗಿದೆ

ಉಪಸ್ಥಿತ ಹಿಂದೂ ಬಾಂಧವರು


