Menu Close

ತೀರ್ಥಹಳ್ಳಿ ಮಂದಿರ ಮಹಾಸಂಘದಿಂದ ತೀರ್ಥಹಳ್ಳಿ ತಹಶೀಲ್ದಾರ್ ಮೂಲಕ ಸನ್ಮಾನ್ಯ ಶ್ರೀ ರಾಮಲಿಂಗ ರೆಡ್ಡಿಯವರಿಗೆ ಮನವಿ!

ಮಾನ್ಯ ಶಿರಸ್ತೇದಾರ್ ಶ್ರೀ ಸತ್ಯಮೂರ್ತಿ ಯವರ ಮೂಲಕ ಮಾನ್ಯ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ. ರಾಮಲಿಂಗ ರೆಡ್ಡಿಯವರಿಗೆ ಮನವಿ

ತೀರ್ಥಹಳ್ಳಿ: ಮಂದಿರಗಳ ರಕ್ಷಣೆ ದೃಷ್ಟಿಯಿಂದ ತೀರ್ಥಹಳ್ಳಿ ಮಂದಿರ ಮಹಾಸಂಘದ ಅಧಿವೇಶನದಲ್ಲಿ ನಿರ್ಣಯಗಳನ್ನು ಅನಷ್ಠಾನಕ್ಕೆ ತರುವ ಕುರಿತು, ತೀಮಂದಿರ ಮಹಾಸಂಘವು ದಿನಾಂಕ ಫೆಬ್ರವರಿ 23-03-2025 ಭಾನುವಾರದಂದು ಗಾಯಿತ್ರಿ ಮಂದಿರದಲ್ಲಿ ತಾಲ್ಲೂಕು ಸ್ಥರದ ಮಂದಿರಗಳ ಅಧಿವೇಶನವನ್ನು ಆಯೋಚಿಸಿದ್ದು, ಇದರಲ್ಲಿ-ತೀರ್ಥಹಳ್ಳಿ ತಾಲ್ಲೂಕಿನ 200 ಕ್ಕೂ ಅಧಿಕ ವಿಶ್ವಸ್ಥರು, ಅರ್ಚಕರು ಉಪಸ್ಥಿತರಿದ್ದರು. ಈ ಅಧಿವೇಶನದಲ್ಲಿ ದೇವಸ್ಥಾನಗಳ ರಕ್ಷಣೆ ದೃಷ್ಟಿಯಿಂದ ಈ ಕೆಳಗಿನ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ದಯವಿಟ್ಟು ಈ ನಿರ್ಣಯಗಳನ್ನು ತಾವು ಅನುಷ್ಠಾನಕ್ಕೆ ತರಬೇಕು ಎಂದು ಮಾನ್ಯ ಶಿರಸ್ತೇದಾರ್ ಶ್ರೀ ಸತ್ಯಮೂರ್ತಿ ಯವರ ಮೂಲಕ ಮಾನ್ಯ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ. ರಾಮಲಿಂಗ ರೆಡ್ಡಿಯವರಿಗೆ ಮನವಿ ನೀಡಲಾಯಿತು.ಈ ಸಂದರ್ಭದಲ್ಲಿ ತೀರ್ಥಹಳ್ಳಿ ತಾಲೂಕು ಮಂದಿರ ಮಹಾಸಂಘದ ಸಂಯೋಜಕರಾದ ಶ್ರೀ. ಮೋಹನ್ ಕೆರೋಡಿ, ಕರ್ನಾಟಕ ಮಂದಿರ ಮಹಾಸಂಘದ ಸದಸ್ಯರಾದ ಶ್ರೀ. ಸುರೇಂದ್ರ, ಶ್ರೀಮತಿ ಗೀತಾ ಹೆಗಡೆ, ತೀರ್ಥಹಳ್ಳಿ ಮಾರಿಕಾಂಬ ದೇವಸ್ಥಾನದ ನಿರ್ದೇಶಕರಾದ ಶ್ರೀ. ಮಂಜುನಾಥ್ ಶೆಟ್ಟಿ, ಶ್ರೀ. ಗುತ್ಯಮ್ಮ ದೇವಸ್ಥಾನ ಮೇಳಿಗೆ ಕಾರ್ಯದರ್ಶಿ ಸುಧಾಕರ್, ಶ್ರೀ. ಆಂಜನೇಯ ಸ್ವಾಮಿ ದೇವಸ್ಥಾನ ಆಗುಂಬೆಯ ಕಾರ್ಯದರ್ಶಿ ಶ್ರೀ.ಸುಧೀಂದ್ರ ಮಲ್ಯ, ಶ್ರೀ.ರಾಘವೇಂದ್ರ ಭಟ್ , ಶ್ರೀಕಾಂತ್ ಭಟ್ , ಸೇರಿದಂತೆ 30 ಕ್ಕೂ ಹೆಚ್ಚು ದೇವಸ್ಥಾನಗಳ ವಿಶ್ವಸ್ಥರು ಮತ್ತು ಪುರೋಹಿತರು ಉಪಸ್ಥಿತರಿದ್ದರು.

ಅಧಿವೇಶನದಲ್ಲಿ ಮಂಡನೆ ಆದ ನಿರ್ಣಯಗಳು

1. ಕರ್ನಾಟಕದಲ್ಲಿ ಪ್ರಾಚೀನ ಅಥವಾ ಐತಿಹಾಸಿಕ ಮಹತ್ವವಿರುವ, ಆದರೆ ಆಡಳಿತ ಹಾಗೂ ಪುರಾತತ್ವ ವಿಭಾಗದಿಂದ ದುರ್ಲಕ್ಷಿಸಲ್ಪಟ್ಟಿರುವ ದೇವಸ್ಥಾನಗಳನ್ನು ಜೀರ್ಣೋದ್ದಾರ ಮಾಡಲು ಕರ್ನಾಟಕ ಸರಕಾರವು ಮುಂಬರುವ ಮುಂಗಡ ಪತ್ರದಲ್ಲಿ ಸಾಕಷ್ಟು ಅನುದಾನವನ್ನು ನೀಡಬೇಕು.

2. ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳಿಂದ ಸಂಗ್ರಹವಾದ ಕಾಮನ್ ಪೂಲ್ ನಿಧಿಯನ್ನು ಅನ್ಯ ಯಾವುದೇ ಉದ್ದೇಶಕ್ಕೆ ಬಳಸದೇ ಕೇವಲ ಹಿಂದೂ ಧಾರ್ಮಿಕ ಉದ್ದೇಶಕ್ಕೆ ಮಾತ್ರ ಬಳಸಬೇಕು.

3. ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳ ಮೂಲಕ ಭಕ್ತರಿಗೆ, ಮಕ್ಕಳಿಗೆ ಸಂಸಾರ ನೀಡುವುದು ಮತ್ತು ಹಿಂದೂ ಧರ್ಮ ಶಿಕ್ಷಣವನ್ನು ನೀಡಲು ವ್ಯವಸ್ಥೆ ಮಾಡಬೇಕು.

4. ಕರ್ನಾಟಕದಲ್ಲಿ ಧಾರ್ಮಿಕ ಮಹತ್ವವಿರುವ ತೀರ್ಥಕ್ಷೇತ್ರಗಳು, ಮಂದಿರಗಳು, ಶ್ರೀಕ್ಷೇತ್ರ. ಕೋಟೆಗಳಲ್ಲಿನ ದೇವಸ್ಥಾನಗಳ ಜಮೀನಿನ ಮೇಲೆ ಖಾಸಗಿಯವರ ಅತಿಕ್ರಮಣ, ಅನ್ಯ ಮತೀಯರ ಅತಿಕ್ರಮಣಗಳನ್ನು ಕರ್ನಾಟಕ ಸರಕಾರ ಸಮೀಕ್ಷೆ ಮಾಡಿ ತಕ್ಷಣ ಆ ಅತಿಕ್ರಮಣಗಳನ್ನು ತೆರವುಗೊಳಿಸಬೇಕು. ಈ ವಿಷಯದಲ್ಲಿ ನಡೆಯುತ್ತಿರುವ ನ್ಯಾಯಾಂಗ ಖಟ್ಟೆಗಳಿಗಾಗಿ ತ್ವರಿತಗತಿ. (Fast track court) ನ್ಯಾಯಾಲಯಗಳನ್ನು ನಿರ್ಮಾಣ ಮಾಡಬೇಕು.
5. ದೇವಸ್ಥಾನಗಳ ಪರಿಸರದಲ್ಲಿ ಹಾಗೂ ತೀರ್ಥಕ್ಷೇತ್ರದ ಸ್ಥಳಗಳ ಪಾವಿತ್ರ್ಯ ರಕ್ಷಣೆಗಾಗಿ ಮದ್ಯ ಹಾಗೂ ಮಾಂಸ ನಿಷೇಧ ಮಾಡಬೇಕೆಂದು ಕರ್ನಾಟಕ ಸರಕಾರ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

6. ಮಾನ್ಯ ಸರ್ವೋಚ್ಚ ನ್ಯಾಯಾಲಯವು ಯಾವುದೇ ಖಾಸಗಿ ದೇವಸ್ಥಾನಗಳನ್ನು ಸರಕಾರವು ವಶಪಡಿಸಿಕೊಂಡಿದ್ದರೆ, ಅದರ ಸಮಸ್ಯೆ ಮತ್ತು ಕಣ್ಣಿಗಳನ್ನು ಬಗೆಹರಿಸಿ, 6 ತಿಂಗಳ ಒಳಗೆ ವಾಪಾಸು ಅದರ ಮೂಲ ವಾರಸುದಾರರಿಗೆ ನೀಡಬೇಕೆಂದು ಆದೇಶ ನೀಡಿದೆ. ಈ ಆದೇಶದ ಅನ್ವಯ ಕರ್ನಾಟಕ ಕೆಲವು ಖಾಸಗಿ ದೇವಸ್ಥಾನಗಳ ವಿಷಯದಲ್ಲಿ ಸರಕಾರವು ವಶಪಡಿಸಿಕೊಂಡು ಹಲವು ವರ್ಷಗಳು ಸಂದಿದೆ. ಈ ಮಂದಿರಗಳು ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಯಲ್ಲಿ ಇದೆ. ಈ ಸಮಸ್ಯೆಗೆ ಕೂಡಲೇ ಪರಿಹಾರ ಮಾಡಬೇಕು.

7. ಧಾರ್ಮಿಕ ದತ್ತಿ ಇಲಾಖೆಯ ಕನಿಷ್ಠಪಕ್ಷ ಸಿ ಗ್ರೇಡ್ ದೇವಸ್ಥಾನಗಳನ್ನಾದರೂ ಖಾಸಗಿ ಸಹಭಾಗಿತ್ವದಲ್ಲಿ ಅಬಿವೃದ್ದಿ ಮಾಡಲು ಇರುವ ಕಾನೂನು ಸಮಸ್ಯೆಗಳನ್ನು ಬಗೆಹರಿಸಬೇಕು ಮತ್ತು ದೇವಸ್ಥಾನಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು.

8. ದೇವಸ್ಥಾನಗಳಲ್ಲಿ ಭಕ್ತರು ಶ್ರದ್ಧೆಯಿಂದ ಅರ್ಪಣೆ ಮಾಡಿದ ನಿಧಿಯನ್ನು ಅನ್ಯ ಅಭಿವೃದ್ಧಿ ಕಾರ್ಯಕ್ಕಾಗಿ ಉಪಯೋಗಿಸಬಾರದು ಮತ್ತು ದೇವಸ್ಥಾನಗಳ ಸಂಪತ್ತನ್ನು ದೇವಸ್ಥಾನಗಳ ಅಭಿವೃದ್ಧಿ, ಜೀರ್ಣೋದ್ಧಾರಕ್ಕಾಗಿ ಮಾತ್ರ ಸರಕಾರವು ಉಪಯೋಗಿಸಬೇಕು.

9. ದೇವಸ್ಥಾನದ ಜಾತ್ರೆ ಉತ್ಸವ ಇತ್ಯಾದಿ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ದೇವರ ಮೇಲೆ ಶ್ರದ್ದೆ ಇರುವವರಿಗೆ ಮಾತ್ರ ನೀಡಬೇಕು ಮತ್ತು ಅನ್ಯ ಮತೀಯರಿಗೆ ವ್ಯಾಪಾರ ವಹಿವಾಟು ಮಾಡುವುದಕ್ಕೆ ಅವಕಾಶ ನೀಡಬಾರದು.

10. ರಾಜ್ಯದ ಅನೇಕ ಸ್ಥಳಗಳಲ್ಲಿ ಕಳೆದ ನೂರಾರು ವರ್ಷಗಳಿಂದ ಪ್ರಾಚೀನ ದೇವಸ್ಥಾನ. ವನದೇವತೆಗಳನ್ನು ಭಕ್ತರು ಪೂಜೆ ಮಾಡಿಕೊಂಡು ಬಂದಿದ್ದು, ಇತ್ತೀಚೆಗೆ ಅರಣ್ಯ ಇಲಾಖೆ, ವಿವಿಧ ಇಲಾಖೆಗಳು ಮಾಲಿಕತ್ವದ ವಿಚಾರದಲ್ಲಿ ನಿತ್ಯ ಪೂಜೆಯನ್ನು, ಮಂದಿರಗಳಲ್ಲಿ ಹಬ್ಬ ಉತ್ಸವಗಳ ಆಚರಣೆ. ದೇವಸ್ಥಾಗಳ ಅಭಿವೃದ್ಧಿ ಮಾಡಲು ಅಡಚಣೆ ಮಾಡುತ್ತಿದ್ದು, ಇದಕ್ಕೆ ಇರುವ ಕಾನೂನು ಅಡಚಣೆಗಳನ್ನು ದೂರ ಮಾಡಬೇಕು ಮತ್ತು ಅಲ್ಲಿ ನಿತ್ಯಪೂಜೆ ನಡೆಯಲು ವ್ಯವಸ್ಥೆ ಮಾಡಬೇಕು.

11. ದೇವಸ್ಥಾನಗಳನ್ನು ಶಂಕರಾಚಾರ್ಯರು ಮತ್ತು ಹಿಂದೂ ಧರ್ಮಾಚಾರ್ಯರು ನೇತೃತ್ವದಲ್ಲಿ ನಿರ್ವಹಣೆ ಮಾಡುವ ಸನಾತನ ಹಿಂದೂ ಬೋರ್ಡ ಸ್ಥಾಪನೆಗೆ ಸಹಕಾರ ನೀಡಬೆಕು ಎಂದು ಮಾನ್ಯ ತಾಲ್ಲೂಕು ಶಿರಸ್ತೇದಾರ್ ರವರಿಗೆ ಮನವಿ ನೀಡಲಾಯಿತು.

Related News