Menu Close

ದಾವಣಗೆರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಮಂದಿರ ಅಧಿವೇಶನ ದೀಪ ಪ್ರಜ್ವಲನೆ ಮೂಲಕ ಸಂಪನ್ನ !

ಹೆಬ್ಬಾಳು ಮಠದ ಪೂ. ಮಹಾಂತ ರುದ್ರೇಶ್ವರ ಮಹಾ ಸ್ವಾಮಿಗಳು ಮಾತನಾಡುತ್ತ, ಇಂದು ಮನೆಗಳಲ್ಲಿ ಯುವಕರನ್ನು ಸಂಸ್ಕಾರವಂತರನ್ನಾಗಿ ಮಾಡದಕಾರಣ ನಮ್ಮ ನಮ್ಮ ಜನಾಂಗದಲ್ಲಿ (ಧರ್ಮದಲ್ಲಿ ) ಮತಾಂತರ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ, ಆದ್ದರಿಂದ ಪ್ರತಿ ಮನೆ ಮನೆ ಯಲ್ಲಿ ಧರ್ಮದ ಬಗ್ಗೆ ಶಿಕ್ಷಣ ಕಲಿಸಬೇಕು ಎಂದು ಉಪಸ್ಟಿತರಿಗೆ ಕರೆ ನೀಡಿದರು

ದೀಪ ಪ್ರಜ್ವಲನೆ ಮಾಡುತ್ತಿರುವ ಎಡದಿಂದ ವಾಸವಿ ದೇವಸ್ಥಾನಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶ್ರೀ.ಆರ್.ಎಲ್. ಪ್ರಭಾಕರ್, ಮಲೆಬೆನ್ನೂರು ಶ್ರೀ ವೀರಭದ್ರೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ಚಿದಾನಂದಪ್ಪ , ಹೆಬ್ಬಾಳ ಮಠದ ಪೂ.ಮಹಾಂತ ರುದ್ರೇಶ್ವರ ಮಹಾ ಸ್ವಾಮಿಗಳು. ಪ್ರಖ್ಯಾತ ಜವಳಿ ವ್ಯಾಪಾರಿಗಳಾದ ಶ್ರೀ ಬಿ ಎಸ್ ಚನ್ನಬಸಪ್ಪ & ಸನ್ಸ್ ಇದರ ಮಾಲೀಕರಾದ ಶ್ರೀ.ಬಿ.ಸಿ.ಉಮಾಪತಿ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ.ಗುರುಪ್ರಸಾದ್ ಗೌಡ

ದಾವಣಗೆರೆ : ದಾವಣಗೆರೆ -ಹರಿಹರ ಅರ್ಬನ್ ಸಹಕಾರ ಸಮುದಾಯ ಭವನದಲ್ಲಿ ದಿನಾಂಕ 09.02.2025 ರವಿವಾರದಂದು ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿ ಜಂಟಿ ಆಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಂದಿರ ಅಧಿವೇಶನದ ಕಾರ್ಯಕ್ರಮವನ್ನು ಶಂಖನಾದ, ವೇದಮಂತ್ರ ಪಠಣೆ, ದೀಪ ಪ್ರಜ್ವಲನೆ ಮೂಲಕ ಪ್ರಾರಂಭ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಹೆಬ್ಬಾಳು ಮಠದ ಪೂ.ಮಹಾಂತ ರುದ್ರೇಶ್ವರ ಮಹಾ ಸ್ವಾಮಿಗಳು, ಪ್ರಖ್ಯಾತ ಜವಳಿ ವ್ಯಾಪಾರಿಗಳಾದ ಶ್ರೀ ಬಿ ಎಸ್ ಚನ್ನಬಸಪ್ಪ & ಸನ್ಸ್ ಇದರ ಮಾಲೀಕರಾದ ಶ್ರೀ.ಬಿ.ಸಿ.ಉಮಾಪತಿ, ಮಲೆಬೆನ್ನೂರು ಶ್ರೀ ವೀರಭದ್ರೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ಚಿದಾನಂದಪ್ಪ ,ವಾಸವಿ ದೇವಸ್ಥಾನಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶ್ರೀ.ಆರ್.ಎಲ್. ಪ್ರಭಾಕರ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ.ಗುರುಪ್ರಸಾದ್ ಗೌಡ ಜಿಲ್ಲಾ ಮಟ್ಟದ ಮಂದಿರ ಅಧಿವೇಶನದ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರಖ್ಯಾತ ಜವಳಿ ವ್ಯಾಪಾರಿಗಳಾದ ಶ್ರೀ ಬಿ ಎಸ್ ಚನ್ನಬಸಪ್ಪ & ಸನ್ಸ್ ಇದರ ಮಾಲೀಕರಾದ ಶ್ರೀ.ಬಿ.ಸಿ.ಉಮಾಪತಿ ಇವರು ಮಾತನಾಡಿ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ಎಲ್ಲಾ ಹಿಂದುಗಳು ಜಾತಿ ಮತ ಸಂಪ್ರದಾಯವನ್ನು ಬದಿಗಿಟ್ಟು ಹಿಂದೂ ಎಂದು ಸಂಘಟಿತರಾಗಬೇಕಾಗಿದೆ ಇದಕ್ಕಾಗಿ ಎಲ್ಲ ದೇವಸ್ಥಾನಗಳು ತಮ್ಮಲ್ಲಿ ಬರುವ ಎಲ್ಲ ಭಕ್ತಾದಿಗಳಿಗೆ ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಾಗಿದೆ.

ಶ್ರೀ. ಚಿದಾನಂದಪ್ಪ ಇವರು ಮಾತನಾಡಿ ಸರಕಾರ ದೇವಸ್ಥಾನದ ಹಣ ಬಳಸಿಕೊಳ್ಳುತ್ತಿರುವುದು ನಮ್ಮ ದುರ್ದೈವವೇ ಆಗಿದೆ,ಸರಕಾರದ ಅಧೀನದಲ್ಲಿರುವ ಎಲ್ಲಾ ದೇವಸ್ಥಾನಗಳನ್ನು ಭಕ್ತರಿಗೆ ಹಿಡಿರುಗಿಸಬೇಕೆಂದು ಅಗ್ರಹಿಸಿದರು. ಈ ಮಂದಿರ ಅಧಿವೇಶನ ತಾಲ್ಲೂಕು ಮಟ್ಟದಲ್ಲಿ ನಡೆಸಬೇಕು , ಸನಾತನ ಹಿಂದೂ ಧರ್ಮ ರಕ್ಷಣೆ ಕಾರ್ಯದಲ್ಲಿ ನಾವೆಲ್ಲರೂ ಒಟ್ಟಾಗಿ ಒಂದಾಗಬೇಕು ಎಂದರು.

ಶ್ರೀ. ಆರ್. ಎಲ್. ಪ್ರಭಾಕರ್ ಇವರು ಮಾತನಾಡಿ ಎಲ್ಲಾ ದೇವಸ್ಥಾನಗಳ ಆಡಳಿತ ಮಂಡಳಿಯವರು ದೇವಸ್ಥಾನಗಳಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿ ಉಳಿಯುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕಾಗಿದೆ ಮಕ್ಕಳಲ್ಲಿ ದೇವಸ್ಥಾನ, ದೇವತೆಗಳ ಬಗ್ಗೆ ಭಕ್ತಿ ಭಾವ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕಿದೆ,ದೇವಸ್ಥಾನಗಳನ್ನು ರಕ್ಷಿಸಲು ಧರ್ಮರಕ್ಷಣೆ ಕಾರ್ಯದಲ್ಲಿ ನಾವು ಒಂದಾಗಬೇಕಿದೆ, ಎಂದು ಉಪಸ್ಥಿತರಿಗೆ ಕರೆ ನೀಡಿದರು

ದೇವಸ್ಥಾನಗಳ ರಕ್ಷಣೆಗಾಗಿ ಹೋರಾಡಬೇಕಾಗಿದೆ – ಇದಕ್ಕಾಗಿ ಪ್ರತಿಯೊಬ್ಬ ಭಕ್ತನ ಯೋಗದಾನವು ಅತ್ಯವಶ್ಯಕವಾಗಿದೆ – ಶ್ರೀ, ಗುರುಪ್ರಸಾದ್ ಗೌಡ

ಶ್ರೀ.ಗುರುಪ್ರಸಾದ ಗೌಡ ಇವರು ಕರ್ನಾಟಕ ಮಂದಿರ ಮಹಾಸಂಘದ ಉದ್ದೇಶ ಹಾಗೂ ಇಲ್ಲಿಯ ತನಕ ನಡೆದು ಬಂದ ದಾರಿಯನ್ನು ತಿಳಿಸಿ ಮಾತನಾಡಿದ ಇವರು ದೇವಸ್ಥಾನಗಳ ನಿಧಿಯನ್ನು ಅನ್ಯಧರ್ಮೀಯರಿಗೆ ನೀಡುವುದು, ಸರಕಾರೀಕರಣವಾದ ಮಂದಿರಗಳ ಜೀರ್ಣೋದ್ಧಾರಕ್ಕಾಗಿ ಸಹಾಯ ಮಾಡದೇ ಇತರ ಧರ್ಮೀಯರ ಪ್ರಾರ್ಥನಾ ಸ್ಥಳಕ್ಕೆ ನೀಡಲಾಗುತ್ತದೆ. ದೇವಸ್ಥಾನಗಳ ಜಮೀನನ್ನು ಕಬಳಿಸುವುದು, ಲೆಕ್ಕವನ್ನಿಡದಿರುವುದು, ಆಭರಣಗಳ ಕಳ್ಳತನ ಇವೆಲ್ಲವುಗಳ ವಿರುದ್ಧ ಮಹಾಸಂಘವು ಹೋರಾಡಿ ಕೊಲ್ಹಾಪುರದ ಮಹಾಲಕ್ಷ್ಮೀ ದೇವಸ್ಥಾನದ ಅವ್ಯವಹಾರವನ್ನು ಬಯಲಿಗೆಳೆಯಿತು. ದೇವಸ್ಥಾನಗಳನ್ನು ಅನಧಿಕೃತವೆಂದು ನೆಲಸಮಗೊಳಿಸುವುದು, ಮಸೀದಿಗಳನ್ನು ಮತ್ತು ಇಗರ್ಜಿಗಳನ್ನು ಬಿಟ್ಟುಬಿಡುವುದು ಇವೆಲ್ಲವುಗಳ ವಿರುದ್ಧ ಮಹಾಸಂಘವು ವಕೀಲರ ಮೂಲಕ ದೇವಸ್ಥಾನಗಳ ರಕ್ಷಣೆಗೆ ಕಟಿಬದ್ಧವಾಗಿ ಹೋರಾಡುತ್ತಿದೆ. ಎಲ್ಲ ದೇವಸ್ಥಾನಗಳನ್ನು ಸರಕಾರದಿಂದ ಮುಕ್ತಗೊಳಿಸುಲು, ಪ್ರತಿಯೊಬ್ಬ ಭಕ್ತರ ಯೋಗದಾನ ಅವಶ್ಯವಾಗಿದೆ ಎಂದು ಉಪಸ್ಥಿತರಿಗೆ ಕರೆ ನೀಡಿದರು.

ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಪಾಲಿಸುವ ಮೂಲಕ ದೇವಸ್ಥಾನದ ಆಚಾರ ಸಂಹಿತೆಗೆ ಕಟಿಬದ್ದರಾಗೋಣ – ಶ್ರೀ. ವಿಜಯ ರೇವಣಕರ್

ದೇವಸ್ಥಾನಗಳು ಕೇವಲ ದೇವರ ದರ್ಶನಕ್ಕೆ ಸೀಮಿತವಾಗದೆ, ಧರ್ಮ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ನೀಡುವ ಶ್ರದ್ಧ ಕೇಂದ್ರಗಳಾಗಿವೆ, ಆದ್ದರಿಂದ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಬೆಂಬಲಿಸೋಣ ಮತ್ತು ಪಾಲಿಸೋಣ, ಇದರ ಜೊತೆಗೆ ದೇವಸ್ಥಾನಗಳಲ್ಲಿ ನಿಯಮಿತವಾಗಿ ಧರ್ಮ ಶಿಕ್ಷಣ ನೀಡುವ ಮೂಲಕ ದೇವಸ್ಥಾನಗಳನ್ನು ಧಾರ್ಮಿಕ ಕೇಂದ್ರಗಳನ್ನಾಗಿ ಮಾಡಲು ಪ್ರಯತ್ನ ಮಾಡಬೇಕಿದೆ.ಮುಂದೆ ಮಾತನಾಡುತ್ತ ಇಂದಿನ ಯುವ ಪೀಳಿಗೆ ಲಾರ್ಡ್ ಮೆಖಾಲೆ ಶಿಕ್ಷಣ ಪದ್ಧತಿಯಿಂದ ಹೊರ ಬರಬೇಕಾಗಿದೆ, ಗುರುಕುಲ ಮಾಧ್ಯಮ ಶಿಕ್ಷಣ ಪಡೆದು ಸಂಸ್ಕಾರವಂತರಾಗಬೇಕು. ಎಂದು ಉಪಸ್ತಿತರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ದಾವಣಗೆರೆ, ಹರಿಹರ, ಚೆನ್ನಗಿರಿ, ಮಲೆಬೆನ್ನೂರು, ಹೊನ್ನಾಳಿ, ನ್ಯಾಮತಿ,ಚಿತ್ರದುರ್ಗ ಜಿಲ್ಲೆಯ 230 ಕ್ಕೂ ಹೆಚ್ಚು ದೇವಸ್ಥಾನಗಳ ವಿಶ್ವಸ್ಥರು, ಪುರೋಹಿತರು ಈ ಅಧಿವೇಶನದಲ್ಲಿ ಉಪಸ್ಥಿತರಿದ್ದರು

ಧರ್ಮಪ್ರೇಮಿಗಳ ಉಪಸ್ಥಿತಿ

Related News