Menu Close

ರಾಜ್ಯದಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಮತಾಂತರದ ಮೇಲೆ ಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹ !

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದ ನಂತರ ಕ್ರೈಸ್ತ ಮಿಷನರಿಗಳು ಹೊಸ ಪದ್ದತಿಯಲ್ಲಿ ಮತಾಂತರವನ್ನು ಮಾಡುತ್ತಿದ್ದಾರೆ. ಕಳೆದ ಫೆಬ್ರವರಿ 1 ರಂದು ಬೇಗೂರಿನ ಪೋಸ್ಟ್ ಆಫೀಸ್ ಬಳಿ ಇಬ್ಬರು ಕ್ರೈಸ್ತ ಮಹಿಳೆಯರು ರಸ್ತೆ ಬದಿಯಲ್ಲಿ ನಿಂತು ಅಮಾಯಕ ಹಿಂದೂಗಳಿಗೆ ನಿಮಗೆ ಏನಾದರೂ ಸಮಸ್ಯೆಗಳಿದ್ದರೆ ಈ ವೆಬ್ ಸೈಟಿಗೆ ಭೇಟಿ ಕೊಡಿ, ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಿ ವಿಸಿಟಿಂಗ್ ಕಾರ್ಡ್ ಕೊಡುತ್ತಿರುವುದು ಗಮನಕ್ಕೆ ಬಂದಿತ್ತು. ಆ ವಿಸಿಟಿಂಗ್ ಕಾರ್ಡ್ ಅಲ್ಲಿ ಜೆ ಡಬ್ಲ್ಯೂ ಡಾಟ್ ಆರ್ಗ್ (JW.ORG) ಎಂಬ ಕ್ರೈಸ್ತ ಮಿಷನರಿ ವೆಬ್ಸೈಟ್ ಆಗಿದ್ದು ಅದರಲ್ಲಿ ನಮ್ಮ ಆರ್ಥಿಕ ಸಮಸ್ಯೆಗೆ ಸರಕಾರ ಪರಿಹಾರ ಕೊಡುವುದಿಲ್ಲ, ಸ್ವರ್ಗದಲ್ಲಿ ದೇವರ ಆಡಳಿತ ಇರುತ್ತದೆ, ಅಲ್ಲಿ ದೇವರ ರಾಜ್ಯ ಸ್ಥಾಪನೆಯಾಗಿದೆ, ಅದಕ್ಕೆ ಯೇಸು ನಾಯಕನಾಗಿದ್ದಾನೆ. ಅವನು ಎಲ್ಲಾ ಸುಳ್ಳು ಧರ್ಮಗಳನ್ನು ಅಂದರೆ ಸನಾತನ ಧರ್ಮವನ್ನು ನಾಶ ಮಾಡುತ್ತಾನೆ. ಅಷ್ಟೇ ಅಲ್ಲ, ಮಾನವರ ಸರಕಾರವನ್ನು ನಾಶ ಮಾಡುತ್ತಾನೆ, ದೇವರ ಮಾತನ್ನು ಕೇಳಿದವರ ನಾಶ ಮಾಡುತ್ತಾನೆ, ಯೇಸುವನ್ನು ನಂಬುವವರ ಖಾಯಿಲೆಗಳನ್ನು ಗುಣಪಡಿಸುತ್ತಾನೆ. ಅವನಿಗೆ ಮರಣ ಇರುವುದಿಲ್ಲ, ಎಲ್ಲರಿಗೂ ಕೆಲಸ ಮತ್ತು ಶಿಕ್ಷಣವನ್ನು ನೀಡುತ್ತಾನೆ, ಹಾಗೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ, ಅದಕ್ಕಾಗಿ ಸ್ವರ್ಗದ ದೇವರಾದ ಏಸುಕ್ರಿಸ್ತನ ಪ್ರಾರ್ಥನೆ ಮಾಡಿ ಎಂದು ಉಲ್ಲೇಖ ಇದೆ. ಇದೊಂದು ಹೊಸ ಪದ್ದತಿಯಲ್ಲಿ ಅಮಾಯಕರನ್ನು ಮತಾಂತರ ಮಾಡುವ ಕುತಂತ್ರವಾಗಿದ್ದು, ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡನೆ ಮಾಡುತ್ತದೆ.

ಏಸುವಿನ ರಾಜ್ಯವು ಬಡತನ, ರೋಗಗಳ ನಿರ್ಮೂಲನೆ ಮಾಡಿ ಕೆಲಸ ಮತ್ತು ಶಿಕ್ಷಣ ನೀಡುತ್ತದೆ ಎಂಬ ಬರಹಗಳಿರುವ ಜಾಲತಾಣದ ಪುಟಗಳು

ಕರ್ನಾಟಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಇರುವಾಗಲೂ ಈ ರೀತಿ ಅಮಾಯಕರ ಮತಾಂತರ ಮಾಡುವುದು ಗಂಭೀರ ಅಪರಾಧವಾಗಿದ್ದು, ಈ ಬಗ್ಗೆ ರಾಜ್ಯ ಸರಕಾರವು ತನಿಖೆ ಮಾಡಿ ಮತಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮವನ್ನು ಜಾರಿಗೊಳಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಆಗ್ರಹಿಸಿದ್ದಾರೆ.

Related News