
ಉಪಸ್ಥಿತಿ ಶಿಬಿರಾರ್ಥಿಗಳು
ಬೆಂಗಳೂರು : ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ಯುವಕರಲ್ಲಿ ಶೌರ್ಯ ಮತ್ತು ಪರಾಕ್ರಮ ಜಾಗೃತಿ ಮೂಡಿಸಲು ಅವರಲ್ಲಿ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮವನ್ನು ಜಾಗೃತಗೊಳಿಸಲು ಶೌರ್ಯಜಾಗೃತಿ ಶಿಬಿರವನ್ನು ಇಲ್ಲಿನ ವಿಜಯನಗರದಲ್ಲಿ ಆಯೋಜಿಸಲಾಗಿತ್ತು. ಎಲ್ಲಾ ಯುವಕರಿಗೆ ಸ್ವರಕ್ಷಣೆಯೊಂದಿಗೆ ರಾಷ್ಟ್ರರಕ್ಷಣೆ ಹಾಗೂ ಧರ್ಮರಕ್ಷಣೆಗಾಗಿ ಲಾಠಿ ತರಬೇತಿಯನ್ನು ನೀಡಲಾಯಿತು.
🚩@HinduJagrutiOrg ಯಿಂದ ಬೆಂಗಳೂರಿನಲ್ಲಿ ಹಿಂದೂ ಯುವಕರಿಗಾಗಿ ಉಚಿತವಾಗಿ `ಶೌರ್ಯ ತರಬೇತಿ ಶಿಬಿರ' ಸಂಪನ್ನ !
ಈ ಕುರಿತ ವರದಿ ಇಂದಿನ 'ಹೊಸ ದಿಗಂತ' ದಿನಪತ್ರಿಕೆಯಲ್ಲಿ ಪ್ರಕಾಶನವಾಗಿದೆ..🗞️
👉 ನಿಮ್ಮ ಪ್ರದೇಶದಲ್ಲಿಯೂ ಇಂತಹ ಶೌರ್ಯ ತರಬೇತಿ ಶಿಬಿರವನ್ನು ಆಯೋಜನೆಗಾಗಿ ಸಂಪರ್ಕಿಸಿ :
📲 7204082609🌐 https://t.co/EaA2mSg008 pic.twitter.com/FIM8agZU8P
— HJS Karnataka (@HJSKarnataka) January 20, 2025
ಭಾರತದಾದ್ಯಂತ ಕೆಲವು ವರ್ಷಗಳಿಂದ ಸಮಿತಿಯು ಯುವಕರಿಗೆ ಶೌರ್ಯ ಜಾಗೃತಿ ತರಬೇತಿ ಶಿಬಿರವನ್ನು ಆಯೋಜಿಸುತ್ತಿದ್ದು ಸಾವಿರಾರು ಹಿಂದೂ ಯುವಕರು ಇದರ ಲಾಭವನ್ನು ಪಡೆಯುತ್ತಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು, ಮಹಾರಾಣಾ ಪ್ರತಾಪ್ ಸಿಂಹ, ಶ್ರೀಕೃಷ್ಣ ದೇವರಾಯರಂತಹ ಮಹಾನ್ ಚೇತನಗಳು ತಮ್ಮ ಶೌರ್ಯ, ಸಾಹಸ, ಪರಾಕ್ರಮಗಳಿಂದ ಭಾರತವನ್ನು ದುಷ್ಟಶಕ್ತಿಗಳಿಂದ ರಕ್ಷಿಸಿ ಸದೃಢವಾಗಿ ಆಳ್ವಿಕೆಯನ್ನು ಮಾಡಿದ್ದರು. ಅವರೆಲ್ಲರ ಶೌರ್ಯ ಪರಾಕ್ರಮ ಇಂದಿನ ಪೀಳಿಗೆಗಳಿಗೆ ಆದರ್ಶಪ್ರಾಯವಾಗಿದೆ. ಭಾರತವನ್ನು ವಿಶ್ವಗುರುವನ್ನಾಗಿಸುವಲ್ಲಿ ಇಂದಿನ ಯುವಕರ ಪಾತ್ರ ಮಹತ್ವದ್ದಾಗಿದೆ. ಅವರನ್ನು ಸದೃಢವಾಗಿಸುವ ಜೊತೆಗೆ ಆತ್ಮಸ್ಥೈರ್ಯವನ್ನು ಜಾಗೃತಗೊಳಿಸುವ ಕಾರ್ಯವು ಇಂತಹ ತರಬೇತಿ ಶಿಬಿರಗಳಿಂದ ಸಾಧ್ಯವಾಗುತ್ತದೆ.
Today, a Shaurya Jagruti Camp was organized in Vijayanagar, Bengaluru by the Hindu Janajagruti Samiti to instill courage among Hindu youth and to awaken a sense of patriotism.
All the youths were given training in self-defense along with nation protection through lathi training. pic.twitter.com/ikIUahzHqu— 🚩Mohan Gowda🇮🇳 (@MohanGowda_HJS) January 19, 2025
ವೈಶಿಷ್ಟ ಪೂರ್ಣ
ಈ ಶಿಬಿರಕ್ಕಾಗಿ ಒಬ್ಬರು ಕೋಲಾರದಿಂದ ( 80 km) ಬೆಳಿಗ್ಗೆ ಬೇಗ ಹೊರಟು ಬಂದಿದ್ದರು ಮತ್ತು ಉಚಿತವಾಗಿ ಸಿಗುವ ಇಂತಹ ಶಿಬಿರಗಳಲ್ಲಿ ಭಾಗವಹಿಸಿ ನಮ್ಮಲ್ಲಿ ಕ್ಷಾತ್ರತೇಜವನ್ನು ಜಾಗೃತ ಮಾಡಿಕೊಳ್ಳಬೇಕು ಮತ್ತು ನಾವು ಬೇರೆ ಬೇರೆ ಹತ್ತಾರು ಜನರಿಗೆ ತರಬೇತಿ ನೀಡುತ್ತೇನೆ ಎಂದರು. ಮತ್ತೊಬ್ಬ ಧರ್ಮ ಪ್ರೇಮಿ ಹೀಗೆ ಹೇಳಿದರು ಏನೆಂದರೆ ಬಾಂಗ್ಲಾದೇಶದಲ್ಲಿ ಈ ಸ್ವಸಂರಕ್ಷಣೆ ತಿಳಿದಿದ್ದಿದ್ದರೆ ಅವರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಂಡು ತಮ್ಮ ಜೀವ ಉಳಿಸಿಕೊಳ್ಳುತ್ತಿದ್ದರು ಎಂದರು. ಮತ್ತೊಬ್ಬರು ಮೊದಲ ಬಾರಿ ಲಾಠಿಯ ಅಭ್ಯಾಸ ಮಾಡುವಾಗ ತನಗೆ ಕೈ ನೋವು ಬರುತ್ತಿತ್ತು ಆಗ ನಾನು ಮಾರುತಿಯ ನಾಮ ಜಪ ಮಾಡಿದೆ ತಕ್ಷಣ ನನಗೆ ಕೈ ನೋವು ಗುಣವಾಗಿ ಈ ಲಾಠಿ ತರಬೇತಿ ಕಲಿಯಲು ಸಾಧ್ಯವಾಯಿತು ಎಂದರು.



