Menu Close

ವಕ್ಫ್ ಆಸ್ತಿಗಳ ರಕ್ಷಣೆಗಾಗಿ 31.54 ಕೋಟಿ ರೂಪಾಯಿಗಳ ಬಿಡುಗಡೆ ಆದೇಶ ಕೂಡಲೇ ರದ್ದುಗೊಳಿಸಿ !

ವಕ್ಫ್ ಆಸ್ತಿಗಳ ರಕ್ಷಣೆಗಾಗಿ ರಾಜ್ಯ ಕಾಂಗ್ರೆಸ್ ಸರಕಾರದ ಆದೇಶಕ್ಕೆ ಹಿಂದೂ ಜನಜಾಗೃತಿ ಸಮಿತಿ ಖಂಡನೆ, ದೇವಸ್ಥಾನದ ಜಮೀನುಗಳ ರಕ್ಷಣೆಗಾಗಿ ಹಣ ಬಿಡುಗಡೆ ಮಾಡಲು ಒತ್ತಾಯ

ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರಕಾರ ವಕ್ಫ್ ಆಸ್ತಿಗಳ ರಕ್ಷಣೆಗಾಗಿ, ಬೇಲಿ ಮತ್ತು ಕಾಂಪೌಂಡ್ ಗಳನ್ನು ಅಳವಡಿಸಲು 31.54 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ’ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿಗೆ ಕರ್ನಾಟಕ ಸರಕಾರ ಕೇವಲ ಅಲ್ಪಸಂಖ್ಯಾತರ ಅಭಿವೃದ್ಧಿಯ ಹೆಸರಿನಲ್ಲಿ ಅಲ್ಪಸಂಖ್ಯಾತರಿಗಾಗಿ ಬಜೆಟ್ ಖಾಲಿ ಮಾಡುವ ಪ್ರಯತ್ನ ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ. ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 10,000 ಕೋಟಿ ರೂಪಾಯಿಗಳನ್ನು ಅಲ್ಪಸಂಖ್ಯಾತರಿಗೆ ನೀಡುತ್ತೇವೆಂದು ಘೋಷಣೆ ಮಾಡಿದರು, ಕಳೆದ ಡಿಸೆಂಬರ್ ತಿಂಗಳಿನಲ್ಲಿ ಅಲ್ಪಸಂಖ್ಯಾತರ ಕಾಲೋನಿಗಳ ನಿರ್ಮಾಣಕ್ಕಾಗಿ 1000 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಬಜೆಟ್ ನಲ್ಲಿ 60 ಕೋಟಿ ರೂಪಾಯಿಗಳನ್ನು ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನಕ್ಕಾಗಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಎಸ್.ಸಿ.ಎಸ್.ಟಿಯ 11,000 ಕೋಟಿ ಅನುದಾನವನ್ನು ತಮ್ಮ ಸ್ವಾರ್ಥಕ್ಕಾಗಿ, ಚುನಾವಣಾ ಆಶ್ವಾಸನೆಗಳನ್ನು ಈಡೇರಿಸಲು ಖರ್ಚು ಮಾಡಿದರು. ಅಲ್ಪಸಂಖ್ಯಾತರಿಗಾಗಿ ಚತುಷ್ಚಕ್ರ ವಾಹನಗಳ ಖರೀದಿಗಾಗಿ 3 ಲಕ್ಷ ರೂಪಾಯಿ ಸಬ್ಸಿಡಿ ನೀಡುವ ಯೋಜನೆಯನ್ನು ಮಾಡಿದರು. ಇದೀಗ 31.54 ಕೋಟಿ ರೂಪಾಯಿಗಳನ್ನು ವಕ್ಫ್ ಆಸ್ತಿಗಳ ರಕ್ಷಣೆಗಾಗಿ, ಬೇಲಿ ಮತ್ತು ಕಾಂಪೌಂಡ್ ಗಳನ್ನು ಅಳವಡಿಸಲು ಖರ್ಚು ಮಾಡುತ್ತಿರುವುದು ಅತ್ಯಂತ ಖಂಡನೀಯವಾಗಿದೆ. 2009 ರಲ್ಲಿ 4 ಲಕ್ಷ ಎಕರೆ ಇದ್ದ ವಕ್ಫ್ ಆಸ್ತಿ ಅನಧಿಕೃತವಾಗಿ ಖಾಸಗಿ ಹಾಗೂ ಸರಕಾರಿ ಆಸ್ತಿಗಳನ್ನು ವಕ್ಫ್ ಬೋರ್ಡ್ ಕಬಳಿಸಿ ಇಂದು ದೇಶದಲ್ಲಿ 8 ಲಕ್ಷದ 52 ಸಾವಿರ ಎಕರೆ ಜಾಮೀನನ್ನು ವಕ್ಫ್ ಬೋರ್ಡ್ ಅಕ್ರಮವಾಗಿ ಕಬಳಿಸಿದೆ. ವಿವಿಧ ನ್ಯಾಯಾಲಯಗಳಲ್ಲಿ ವಕ್ಫ್ ಬೋರ್ಡ್ ಅಕ್ರಮವಾಗಿ ಜಮೀನುಗಳನ್ನು ಕಬಳಿಸಿರುವ ಪ್ರಕರಣಗಳು ನಡೆಯುತ್ತಿರುವಾಗ ಕಾಂಪೌಂಡ್ ಅಳವಡಿಸಿದರೆ ನಾಳೆ ಆ ಜಾಗವೂ ಅಧಿಕೃತವಾಗುತ್ತದೆ, ಇದರಿಂದ ಸಮಸ್ಯೆ ನಿರ್ಮಾಣವಾಗಲಿದ್ದು, ಇದಕ್ಕೆ ಅವಕಾಶ ನೀಡಬಾರದು. ಈ ರೀತಿ ವಕ್ಫ್ ಬೋರ್ಡ್ ಅನಧಿಕೃತವಾಗಿ ಕಬಳಿಸಿರುವ ಆಸ್ತಿಗಳನ್ನು ಅಧಿಕೃತಗೊಳಿಸಲು ಬಿಡುಗಡೆಗೊಳಿಸಿರುವ ಹಣವನ್ನು ರಾಜ್ಯ ಕಾಂಗ್ರೆಸ್ ಸರಕಾರ ಕೂಡಲೇ ರದ್ದು ಮಾಡಬೇಕು, ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ ಸಾವಿರಾರು ಕೋಟಿ ರೂಪಾಯಿಗಳ ದೇವಸ್ಥಾನಗಳ ಜಮೀನುಗಳು ಅತಿಕ್ರಮಣವಾಗಿದೆ, ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ದೇವಸ್ಥಾನದ ಜಮೀನುಗಳು ಸಮೀಕ್ಷೆ ಮಾಡದೇ ಪಾಳುಬಿದ್ದಿದೆ. ಇದರ ರಕ್ಷಣೆಗಾಗಿ ಸರಕಾರ ಹಣ ಬಿಡುಗಡೆ ಮಾಡಬೇಕೆಂದು ಶ್ರೀ. ಮೋಹನ್ ಗೌಡ ಆಗ್ರಹಿಸಿದ್ದಾರೆ.

Related News