Menu Close

ಮುಂಬಯಿ ಶಾಲೆ ಅತಿರೇಕ: ಮೆಹಂದಿ ಹಾಕಿದ್ದಕ್ಕೇ ಹೆಣ್ಣುಮಕ್ಕಳಿಗೆ ತರಗತಿಯಿಂದ ಗೇಟ್‌ಪಾಸ್!

ಲಿಖಿತ ವಿವರಣೆ ಸಲ್ಲಿಸಲು ಶಾಲೆಗೆ ಶಿಕ್ಷಣ ಇಲಾಖೆ ಆದೇಶ

ಮುಂಬಯಿ – ಚೆಂಬೂರಿನಲ್ಲಿರುವ ಸೇಂಟ್ ಆಂಥೋನಿ ಎಂಬ ಹೆಣ್ಣುಮಕ್ಕಳ ಪ್ರತಿಷ್ಠಿತ ಶಾಲೆಯಲ್ಲಿ ದೀಪಾವಳಿ ರಜೆಯ ನಂತರ ಶಾಲೆ ಪುನಾರಂಭವಾದಾಗ ಕೆಲವು ವಿದ್ಯಾರ್ಥಿನಿಯರ ಕೈಯಲ್ಲಿ ಮೆಹಂದಿ ಇರುವುದು ಕಂಡುಬಂದಿದೆ. ಶಾಲಾ ಆಡಳಿತ ಮಂಡಳಿಯು ಅವರನ್ನು ತರಗತಿಯಲ್ಲಿ ಕೂರಲು ನಿರಾಕರಿಸಿತು. ‘ಮೆಹಂದಿ ತೆಗೆದ ಹೊರತು ತರಗತಿಗೆ ಪ್ರವೇಶ ನೀಡುವುದಿಲ್ಲ’ ಎಂದು ಶಾಲೆ ಹೇಳಿದೆ ಎಂದು ವಿದ್ಯಾರ್ಥಿನಿಯರ ಪಾಲಕರು ಆರೋಪಿಸಿದ್ದಾರೆ. ಶಿಕ್ಷಕರು ಹೊರಹಾಕಿದ್ದರಿಂದ ವಿದ್ಯಾರ್ಥಿನಿಯರು ಮಾನಸಿಕ ಒತ್ತಡದಲ್ಲಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉಪಶಿಕ್ಷಣಾಧಿಕಾರಿ ಮತ್ತು ಶಿಕ್ಷಣ ನಿರೀಕ್ಷಕ ಡಾ. ಮುಷ್ತಾಕ್ ಶೇಖ್ ಅವರು ಶಾಲೆಗೆ ಭೇಟಿ ನೀಡಿ ಸಂಪೂರ್ಣ ವಿಚಾರಣೆ ನಡೆಸಿದರು. ಶಿಕ್ಷಣ ಇಲಾಖೆಯು ಶಾಲೆಗೆ ನೇರವಾಗಿ ನೋಟೀಸ್ ಜಾರಿ ಮಾಡಿದೆ ಮತ್ತು ‘ಮೆಹಂದಿಯ ಕಾರಣದಿಂದ ತರಗತಿಯಲ್ಲಿ ಕೂರಲು ಅವಕಾಶ ನೀಡದಿರುವುದು ನಿಯಮಬಾಹಿರ ಮತ್ತು ವಿದ್ಯಾರ್ಥಿಗಳ ಹಕ್ಕುಗಳ ಮೇಲೆ ಮಾಡಿದ ಅನ್ಯಾಯವಾಗಿದೆ’ ಎಂದು ತಿಳಿಸಿ, ಶಾಲೆಗೆ ಲಿಖಿತ ವಿವರಣೆಯನ್ನು ಸಲ್ಲಿಸಲು ಆದೇಶ ನೀಡಲಾಗಿದೆ.

ಘಟನೆಯನ್ನು ನಿರಾಕರಿಸಿದ ಮುಖ್ಯೋಪಾಧ್ಯಾಯಿನಿ !

ಶಿಕ್ಷಕರು ಆರೋಪವನ್ನು ನಿರಾಕರಿಸಿದ್ದು, ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಮುಖ್ಯೋಪಾಧ್ಯಾಯಿನಿಯವರು, ಶಾಲೆಯಲ್ಲಿ ಇಂತಹ ಯಾವುದೇ ಪ್ರಸಂಗ ಸಂಭವಿಸಿಲ್ಲ. ವಿದ್ಯಾರ್ಥಿನಿಯರಿಗೆ ಕೇವಲ ಶಿಸ್ತಿನ ನಿಯಮಗಳನ್ನು ಪಾಲಿಸಲು ಹೇಳಲಾಯಿತು. ಶಿಕ್ಷಣ ಇಲಾಖೆಯ ನೋಟೀಸ್ ನಮಗೆ ಇನ್ನೂ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಮುಂದಿನ ಹಂತದಲ್ಲಿ ಪ್ರತಿಭಟನೆಯ ಎಚ್ಚರಿಕೆ!

‘ವಿದ್ಯಾರ್ಥಿನಿಯನ್ನು ಆಕೆಯ ಸಾಂಸ್ಕೃತಿಕ ಗುರುತಿನೊಂದಿಗೆ ಶಾಲೆಗೆ ಬರದಂತೆ ಒತ್ತಾಯಿಸಲು ಸಾಧ್ಯವಿಲ್ಲ. ಸಂವಿಧಾನವು ಎಲ್ಲರಿಗೂ ಸಮಾನ ಶಿಕ್ಷಣದ ಹಕ್ಕು ನೀಡಿದೆ. ನಮ್ಮ ಮನವಿಯ ನಂತರ ವಿದ್ಯಾರ್ಥಿನಿಯರನ್ನು ತರಗತಿಯಲ್ಲಿ ಕೂರಿಸಲಾಯಿತು. ಮುಂದಿನ ಹಂತದಲ್ಲಿ ನಾವು ನಮ್ಮದೇ ಆದ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಂಎನ್‌ಎಸ್ ಪ್ರಧಾನ ಕಾರ್ಯದರ್ಶಿ ಕರ್ಣ್ ದುನಬಳೆ ಎಚ್ಚರಿಕೆ ನೀಡಿದರು.

ಸಂಪಾದಕೀಯ ನಿಲುವು

‘ಜಾತ್ಯತೀತ’ ಎಂದು ಹೇಳಿಕೊಳ್ಳುವ ಭಾರತಕ್ಕೆ ಇದು ಶೋಭಿಸುವುದಿಲ್ಲ! ಇತರ ಧರ್ಮದ ವಿದ್ಯಾರ್ಥಿನಿಯರ ವಿಷಯದಲ್ಲಿ ಇಂತಹ ಪ್ರಯತ್ನ ಮಾಡಲು ಶಾಲೆಗೆ ಧೈರ್ಯ ಬರುತ್ತಿತ್ತೇ?
ಮೆಹಂದಿಯ ಕಾರಣಕ್ಕಾಗಿ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರಹಾಕಿದ ಶಿಕ್ಷಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು!

ಆಧಾರ : ಸನಾತನ ಪ್ರಭಾತ ಪತ್ರಿಕೆ

Read more on Anti Hindus