ಸ್ವಭಾವದೋಷಗಳನ್ನು ನಿವಾರಿಸಲು ಏನು ಮಾಡುವಿರಿ?

ನಿಮ್ಮಲ್ಲಿನ ಸ್ವಭಾವದೋಷಗಳ ಪಟ್ಟಿಯನ್ನು ತಯಾರಿಸಿರಿ !

ಪ್ರತಿಯೊಬ್ಬ ವ್ಯಕ್ತಿಯಲ್ಲಿ ಯಾವುದಾದರೂ ದೋಷಗಳು ಇದ್ದೇ ಇರುತ್ತವೆ. ಮಕ್ಕಳೇ, ನಿಮ್ಮ ಶಾಲೆಯಲ್ಲಿ, ಪಕ್ಕದ ಮನೆಯಲ್ಲಿ, ಮಿತ್ರ-ಮಂಡಳಿಯಲ್ಲಿ ಒಂದೂ ದೋಷವಿಲ್ಲದವರು ಯಾರಾದರೂ ಇದ್ದಾರೆಯೇ ? ಯಾರೂ ಇಲ್ಲ ಅಲ್ಲವೇ ! ಕೇವಲ ಈಶ್ವರನಲ್ಲಿ ಮಾತ್ರ ಒಂದೂ ದೋಷವಿಲ್ಲ; ಏಕೆಂದರೆ ಅವನು ಸರ್ವಗುಣಸಂಪನ್ನನಾಗಿದ್ದಾನೆ. ಸತತವಾಗಿ ಆನಂದದಲ್ಲಿರುವುದು, ಈಶ್ವರನ ಸ್ವಭಾವವಾಗಿದೆ. ಅವನಂತೆ ಆನಂದದಲ್ಲಿರಲು ಯಾವ ದೋಷಗಳನ್ನು ನಿವಾರಿಸುವುದು ಮತ್ತು ಯಾವ ಗುಣಗಳನ್ನು ವೃದ್ಧಿಸುವುದು ಆವಶ್ಯಕವಾಗಿದೆ, ಎಂಬುದನ್ನು ನೋಡೋಣ. ಮುಂದೆ ಕೆಲವು ದೋಷ ಮತ್ತು ಅವುಗಳಿಗೆ ವಿರುದ್ಧವಾಗಿರುವ ಗುಣಗಳ ಪಟ್ಟಿಯನ್ನು ಕೊಡಲಾಗಿದೆ.

ಮಕ್ಕಳೇ, ಮೇಲಿನ ದೋಷಗಳಲ್ಲಿನ ಕೆಲವು ದೋಷಗಳು ನಿಮ್ಮಲ್ಲಿವೆ, ಎಂದು ನಿಮಗೆ ಅನಿಸುತ್ತದೆಯಲ್ಲವೇ ! ಹಾಗಾದರೆ ಇದನ್ನು ಮಾಡಿರಿ

೧. ಮೇಲಿನ ಪಟ್ಟಿಯಲ್ಲಿನ ಯಾವ ದೋಷಗಳು ನಿಮ್ಮಲ್ಲಿವೆಯೋ, ಅವುಗಳ ಒಂದು ಪಟ್ಟಿಯನ್ನು ಮಾಡಿರಿ.

೨. ಮೇಲಿನ ಪಟ್ಟಿಯಲ್ಲಿರುವ ದೋಷಗಳಲ್ಲದೇ ಇತರ ದೋಷಗಳು ನಿಮ್ಮಲ್ಲಿದ್ದರೆ, ಅವುಗಳನ್ನೂ ನಿಮ್ಮ ಪಟ್ಟಿಯಲ್ಲಿ ಬರೆಯಿರಿ.

೩.ತಂದೆ ತಾಯಿ, ಸಹೋದರ ಸಹೋದರಿಯರಿಗೆ, ಮಿತ್ರರಿಗೆ ನೀವು ಮಾಡಿದ ಪಟ್ಟಿಯಲ್ಲಿನ ದೋಷಗಳನ್ನು ತೋರಿಸಿ ಅವಲ್ಲದೇ, ಇತರ ದೋಷಗಳಿದ್ದರೆ, ಅವುಗಳನ್ನು ಹೇಳಲು ಅವರಿಗೆ ವಿನಂತಿಸಿರಿ.