ರಾಜಮಾತೆ ಜಿಜಾಬಾಯಿ


ತಮ್ಮ ಮನಸ್ಸಿನಲ್ಲಿದ್ದ ಹಿಂದವೀ ಸ್ವರಾಜ್ಯದ ಸಂಕಲ್ಪನೆಯನ್ನು ಪ್ರತ್ಯಕ್ಷವಾಗಿ ಜಾರಿಗೆ ತರಲು ಛತ್ರಪತಿ ಶಿವಾಜಿಗೆ ಜ್ಞಾನ, ಚಾರಿತ್ರ್ಯ, ಚಾತುರ್ಯ, ಸಂಘಟನೆ ಹಾಗೂ ಪರಾಕ್ರಮ ಮುಂತಾದ ಸಾತ್ವಿಕ ಮತ್ತು ರಜೌಗುಣಗಳ ಅಮೃತಪಾನ ನೀಡುವ ರಾಜಮಾತೆ !

ಹಿಂದವೀ ಸ್ವರಾಜ್ಯದ ಸ್ಥಾಪನೆಯ ಹಾದಿಯಲ್ಲಿ ಅಡ್ಡ ಬರುವ ಹೇಡಿಗಳ ಜೊತೆ ಹೋರಾಡುವ ಧೈರ್ಯವು ಶಹಾಜಿಯ ಪುತ್ರ ಶಿವಾಜಿಗೆ ಸಿಕ್ಕಿದ್ದು ಕೇವಲ ಜಿಜಾಬಾಯಿಯು ಬಿತ್ತಿದ 'ಶೌರ್ಯದ' ಸಂಸ್ಕಾರಗಳಿಂದ .

ಸಿಂದಖೇಡ ಸಂಸ್ಥಾನದ ರಾಜರ (ಇಂದಿನ ಬುಲಢಾಣಾ ಜಿಲ್ಲೆಯ) ಸನ್ಮಾನನೀಯ ಸರದಾರರಾದ ಲಖೋಜಿ ಜಾಧವ ಹಾಗೂ ಮ್ಹಾಳಸಾಬಾಯಿ ದಂಪತಿಗೆ ಮಗಳಾಗಿ ಜಿಜಾಬಾಯಿ ಜನಿಸಿದರು. ಕರ್ತೃತ್ವವಂತ ತಂದೆಯ ಪರಾಕ್ರಮದ ಉದಾಹರಣೆಗಳನ್ನು ತೊಟ್ಟಿಲಲ್ಲಿರುವ ಜಿಜಾಬಾಯಿ ಬೆರಗಾಗಿ ಕೇಳುತ್ತಿದ್ದರು. ಆದರೆ ವಯಸ್ಸಿನ ಜೊತೆ ಪಾರತಂತ್ರ್ಯದ ಅರಿವೂ ಹೆಚ್ಚಾಯಿತು; ಅಸಹಾಯಕತೆ ಮತ್ತು ಅವಿಶ್ವಾಸ ಎಂಬ ರೋಗಗಳನ್ನು ಅವರು ಮನಸಾರೆ ತಿರಸ್ಕಾರ ಮಾಡಲುಮುಂದಾದರು.

ಗೊಂಬೆಗಳ ಆಟಿಕೆಯ ಸಂಸಾರದಲ್ಲಿ ಮುಳುಗಿರಬೇಕಾದ ಸಮಯದಲ್ಲಿ, ಜಿಜಾಬಾಯಿ ಕತ್ತಿಯನ್ನು ಬಿಗಿಯಾಗಿ ಹಿಡಿದು ಕತ್ತಿವರಸೆಯಲ್ಲಿ ಪರಿಣತಿ ಸಾಧಿಸುವುದರಲ್ಲಿ ಮಗ್ನರಾಗಿದ್ದರು. ಲಷ್ಕರಿನ ಪ್ರಶಿಕ್ಷಣವನ್ನು ಕಲಿಸುವಂತೆ ಲಾಖೋಜಿಯವರಲ್ಲಿ ಹಟ ಮಾಡಿದ ಜಿಜಾಬಾಯಿಗೆ ಶೂರ ವೀರರ ಕಥೆಗಳನ್ನು ಕೇಳಿ ಸ್ಪೂರ್ತಿ ಬರುತ್ತಿತ್ತು. ತಾಯಿ ಮ್ಹಾಳಸಾಬಾಯಿಯು ತನ್ನ ಮಗಳಿಗೆ ಇಂತಹ ಕಥೆಗನ್ನು ಹೇಳಿ ಅವಳ ಶೌರ್ಯವನ್ನು ಪ್ರೋತ್ಸಾಹಿಸುತ್ತಿದ್ದಳು.

ದೇಶದ ಅಂದಿನ ದುಸ್ಥಿತಿ !

ಜನರು ಗುಲಾಮರಾಗಬೇಕು, ಮುಸಲ್ಮಾನ ಸಾಮ್ರಾಜ್ಯದಲ್ಲಿ ಚಾಕರಿ ಮಾಡಬೇಕು ಹಾಗೂ ಸನ್ಮಾನವುಳ್ಳ, ಸಂಸ್ಥಾನಿಕರಾಗಬೇಕಿತ್ತು. ಸ್ವಜನರ ಮನೆಗಳನ್ನು ಲೂಟಿಮಾಡಿ ವೈರಿಯು ಎಷ್ಟು ಗಳಿಕೆ ಮಾಡಿದನೆಂಬ ಲೆಕ್ಕವನ್ನು ಜ್ಞಾನಿಗಳು ವೈರಿಗೇ ತಿಳಿಸಬೇಕಾಗುತ್ತಿತ್ತು. ಕಲಾವಿದರು ಸ್ವಜನರ ಅವಮಾನಗಳನ್ನೇ ಬಣ್ಣಿಸಿ – ಚಿತ್ರಿಸಿ ವೈರಿಯನ್ನು ಸಂತೋಷಗೊಲಿಸಬೇಕಾಗಿತ್ತು …. ಎಲ್ಲವು ಅವ್ಯಾಹತವಾಗಿ ನಡೆಯುತ್ತಿತ್ತು.

ಶತ್ರು ಸರದಾರರು ಅಕ್ಕ-ತಂಗಿಯರ ಮಾನಭಂಗ ಮಾಡುತ್ತಿದ್ದರು. ಹೆಣ್ಣು ಮಕ್ಕಳ ಹರಾಜು ನಡೆಯುತ್ತಿತ್ತು. 'ಸ್ವಾತಂತ್ರ್ಯ ಎಂದರೇನು' ಎಂಬುದನ್ನೇ ಮರೆತು ಹೋದ ಸಮಾಜವು ಮೂಕವಾಗಿ ಅತ್ಯಾಚಾರಗಳನ್ನು ಸಹಿಸುತ್ತಿತ್ತು. ಅನ್ನದಾತ ರೈತನ ಸ್ಥಿತಿಯು ಅತ್ಯಂತ ದಯನೀಯವಾಗಿತ್ತು. ಬೆಳೆಯುವವರು ಬ್ಹೊಗಿಸುವಂತಿಲ್ಲ, ಎಲ್ಲವೂ ಬಾದಶಾಹನ ಬೊಕ್ಕಸಕ್ಕೆ ಹೋಗಬೇಕಿತ್ತು! ಬೆವರು ಸುರಿಸಿ ಮೈ ಮುರಿದು ದುಡಿದರೂ ತುತ್ತು ಅನ್ನಕ್ಕೆ ಪರದಾಡುವ ಸ್ಥಿತಿ. ಸಮಾಜದ ಈ ದಯನೀಯ ಅವಸ್ಥೆಯು ಜಿಜಾಬಾಯಿಗೆ ಸಹಿಸಲು ಆಗಲಿಲ್ಲ. ಅವರಿಗೆ ಈ ಅನ್ಯಾಯ ಅತ್ಯಾಚಾರಗಳ ವಿರುದ್ಧ ಹೋರಾಡುವ ವೀರನ ನಿರೀಕ್ಷೆ ಇತ್ತು.

ಜಿಜಾಬಾಯಿ ವಿವಾಹವು ಶಹಾಜಿರಾಜಾ ಭೋಸಲೆಯ ಜೊತೆ ೧೬೦೫ ರಲ್ಲಿ ನೆರವೇರಿತು. ಎರಡು ತೇಜಸ್ವಿ ಜೀವಗಳು ಒಂದಾಗಿದ್ದವು. ಆದರೂ ಜಿಜಾಬಾಯಿ ಕನಸಿನ ಹಿಂದವೀ ಸಾಮ್ರಾಜ್ಯದ ಸೂರ್ಯ ಕಾಣುತ್ತಿರಲಿಲ್ಲ. ಕೊನೆಯಲ್ಲಿ ಅವರು ಭವಾನಿ ಮಾತೆಯಲ್ಲಿ ಹರಕೆಹೊತ್ತರು. ‘ತೇಜಸ್ವಿ, ಪರಾಕ್ರಮಿ, ಸ್ವರಾಜ್ಯ ಸ್ಥಾಪಿಸಲು ಸಾಮರ್ಥ್ಯವುಳ್ಳ ಪುತ್ರನನ್ನು ನನಗೆ ದಯಪಾಲಿಸು' ಎಂದು ಮೊರೆ ಇಟ್ಟರು. ಪರಾಕ್ರಮಿ ಶಹಾಜಿರಾಜರ ಕುಂದು ಕೊರತೆಗಳನ್ನು ಜಿಜಾಬಾಯಿ ಸಮೀಪದಲ್ಲಿದ್ದು ಅನುಭವಿಸುತ್ತಿದ್ದರು. ಅವರ ಆದಿಲ್ ಶಾಹ, ನಿಜಾಮಶಾಹ, ಮೋಘಲಮುಂತಾದ ಶಾಹಗಳ ವಿರುದ್ಧ ಪರಾಕ್ರಮಗಳನ್ನು ಪ್ರದರ್ಶಿಸಿಯೂ ಅವರಿಗಿದ್ದ ದ್ವಿತೀಯ ದರ್ಜೆಯ ಜಿಜಾಬಾಯಿಯ ಗಮನಕ್ಕೆ ಬರುತ್ತಿತ್ತು. ಅದು ಅಧಿಕಾರವಿದ್ದರೂ, ‘ಅಲ್ಲಿ’ ಸ್ಥಾನ ಮಾನವಿರಲಿಲ್ಲ, ಸ್ಥಿರತೆ ಇರಲಿಲ್ಲ, ರೈತರ ಕಲ್ಯಾಣವಿರಲಿಲ್ಲ, ಇವುಗಳ ಬಗ್ಗೆ ಜಿಜಾಬಾಯಿಗೆ ಅರಿವಾಗುತ್ತಿತ್ತು. ಮಗುವಿನ ಜನನಕ್ಕಿಂತ ಮೊದಲು ಮಗುವಿನ ಜೀವನದ ಧ್ಯೇಯವನ್ನು ನಿಶ್ಚಯಿಸುವ ತಾಯಂದಿರು ಈ ಸಮಾಜದಲ್ಲಿ ಎಷ್ಟಿರಬಹುದು, ಆ ದೇವರೇ ಬಲ್ಲನು! ಆದರೆ ಒಬ್ಬ ತಾಯಿ ಮಾತ್ರ ಆ ಅಚ್ಚರಿಯನ್ನು ಮಾಡಿದಳು ಹಾಗೂ ಶತಮಾನಗಳಿಂದ ಸ್ವರಾಜ್ಯದ ಮೇಲೆ ಅನ್ಯಾಯ ಮಾಡುತ್ತಿದ್ದ ದೈತ್ಯನ ಕೊನೆಯಾಯಿತು.

ಭವಾನಿ ಮಾತೆಗೆ (ಕುಲದೇವತೆ) ಜಿಜಾಬಾಯಿ ಈ ಬೇಡಿಕೆಯನ್ನು ಈಡೇರಿಸಲೇಬೇಕಾಯಿತು. ಏಕೆಂದರೆ ಯಾವ ದುಃಖವು ಜಿಜಾಬಾಯಿಗೆ ಇತ್ತೋ ಅದೇ ದುಃಖವು ಭವಾನಿ ಮಾತೆಯದಾಗಿತ್ತು. ಧರ್ಮ ಮುಳಗುತ್ತಿತ್ತು, ದೇವಸ್ಥಾನಗಳನ್ನು ಕೆದವುತ್ತೊದ್ದರು, ಮೂರ್ತಿ ಭಂಜನೆ ನಡೆಯುತ್ತಿತ್ತು. ಭವಾನಿ ಮಾತೆಗೂ ಒಬ್ಬ ಕರ್ತೃತ್ವವಂತ ಜೀವಕ್ಕೆ ಜನ್ಮ ನೀಡಲು ಸಮರ್ಥಳಾದ ತಾಯಿಯ ನಿರೀಕ್ಷೆ ಇತ್ತು. ಇಬ್ಬರ ಅವಶ್ಯಕತೆಯು ಒಂದೇ ಆಗಿತ್ತು, ಗುರಿ ಒಂದೇ ಆಗಿತ್ತು, ಕನಸು ಒಂದಾಗಿತ್ತು ! ಈ ಕನಸಿನ ಫಲಶ್ರುತಿಯಾಗಿ ಜಿಜಾಬಾಯಿ ಹೊಟ್ಟೆಯಲ್ಲಿ ಶಿವಾಜಿಯ ಜನನವಾಯಿತು. ಶಿವಾಜಿಯ ಜನ್ಮದೊಂದಿಗೆ ಹಿಂದವೀ ಸ್ವರಾಜ್ಯದ ಅಡಿಪಾಯ ಹಾಕಿದಂತೆ ಆಯಿತು.


ಜಿಜಾಬಾಯಿ ಶಿವಾಜಿಗೆ ಕಥೆಗಳನ್ನು ಹೇಳುವಾಗ ಪಾರತಂತ್ರ್ಯದಲ್ಲಿ ಆರಂಭಗೊಂಡು, ಸ್ವಾತಂತ್ರ್ಯದಲ್ಲಿ ಮುಗಿಯುವ ಕಥೆಗಳನ್ನು ಹೇಳುತ್ತಿದ್ದರು. ಸೀತೆಯ ಅಪಹರಣ ಮಾಡಿದ ದುಷ್ಟ ರಾವಣನನ್ನು ವಧಿಸಿದ ರಾಮನು ಎಷ್ಟು ಪರಾಕ್ರಮಿಯಾಗಿದ್ದನು, ಬಕಾಸುರನನ್ನು ವಧಿಸಿ ದುರ್ಬಲ ಜನರನ್ನು ಮುಕ್ತಗೊಳಿಸುವ ಭೀಮನು ಎಷ್ಟು ಪರಾಕ್ರಮಿಯಾಗಿದ್ದನು; ಹೀಗೆ ಪ್ರತಿಯೊಂದು ಕಥೆಯಲ್ಲಿ ಅವರು ಪರಾಕ್ರಮಿ ಪುರುಷನಿಗೆ ಭಗವಂತನ ಸ್ಥಾನವನ್ನು ನೀಡಿದರು. ಅಲ್ಲದೇ ಸ್ವಾತಂತ್ರ್ಯಕ್ಕೆ ಧ್ಯೇಯದ ಸ್ಥಾನ ನೀಡಿದರು.

‘ಪ್ರತಿಯೊಬ್ಬ ಪರಾಕ್ರಮಿ ಪುರುಷನ ಜೀವನದ ಧ್ಯೇಯ ಒಂದೇ ಇರುತ್ತದೆ – ಯಾರು ಪಾರತಂತ್ರ್ಯದಲ್ಲಿರುವರೋ ಅವರಿಗೆ ಸ್ವಾತಂತ್ರ್ಯವನ್ನು ಕೊಡಿಸುವುದು’, ಶಿವಾಜಿಗೆ ಜಿಜಾಬಾಯಿ ಕಲಿಸಿದ ಪಾಠವಿದು. ಹಾಗೂ ಅದರ ಜೊತೆಗೆ ‘ನಾವು ಅಂದರೆ ನಮ್ಮ ಸಮಾಜ, ನೀನು ಮತ್ತು ನಾನು – ಪಾರತಂತ್ರ್ಯದಲ್ಲಿದ್ದೇವೆ’, ಎಂದು ಪ್ರತಿಯೊಂದು ಕಥೆಯ ಕೊನೆಯಲ್ಲಿ ಆರಿವು ಮೂಡಿಸುತ್ತಿದ್ದರು. ಕರ್ತೃತ್ವವನ್ನು ಹೊಗಳುವ ಒಂದೇ ಒಂದು ಮಾರ್ಗವೆಂದರೆ ಸ್ವರಾಜ್ಯವನ್ನು ಸ್ಥಾಪಿಸಬೇಕು ಎಂಬುದು ಶಿವಾಜಿಯ ಧೋರಣೆಯಾಗಿರಲು, ಅದು ಜಿಜಾಬಾಯಿ ನೀಡಿದ ಸಂಸ್ಕಾರಗಳಿಂದಲೇ ಆಗಿತ್ತು.

ಶಿವಾಜಿಯ ಮನಸ್ಸಿನಲ್ಲಿ ಕರ್ತೃತ್ವದ ಕಿಡಿಯನ್ನು ಹಚ್ಚಿದ ಜಿಜಾಬಾಯಿ ಅವರಿಗೆ ರಾಜನೀತಿಯನ್ನು ಕೂಡ ಕಲಿಸಿದರು. ಸಮಾನ ನ್ಯಾಯವನ್ನು ನೀಡುವ ವೃತ್ತಿ ಹಾಗೂ ಅನ್ಯಾಯ ಮಾಡುವವರಿಗೆ ಕಠೋರ ಶಿಕ್ಷೆ ನೀಡುವ ಧೈರ್ಯವನ್ನು ನೀಡಿದರು. ಶಿವಾಜಿಯ ಶಸ್ತ್ರಾಸ್ತ್ರಗಳ ಪ್ರಶಿಕ್ಷಣದತ್ತ ಸ್ವತಃ ಸೂಕ್ಷ್ಮ ಗಮನ ನೀಡಿದರು. ಶಹಾಜಿರಾಜರ ಬಂಧನ ಹಾಗೂ ಬಂಧಮುಕ್ತಿ, ಅಫಜ್ಲಖಾನನ ತೊಂದರೆ, ಆಗ್ರಾದಿಂದ ಮುಕ್ತಿ ಹೀಗೆ ಅನೇಕ ಪ್ರಸಂಗಗಳಲ್ಲಿ ಶಿವಾಜಿಗೆ ಜಿಜಾಬಾಯಿಯ ಮಾರ್ಗದರ್ಶನ ಲಭಿಸಿತು. ಶಿವಾಜಿಯವರು ಮಹತ್ವವಾದ ಅಭಿಯಾನದಲ್ಲಿದ್ದಾಗ, ಜಿಜಾಬಾಯಿಯೇ ರಾಜ್ಯದ ಕಾರ್ಯಭಾರದತ್ತ ಗಮನ ನೀಡುತ್ತಿದ್ದರು.

ಮಕ್ಕಳು ತಾಯಿಯಿಂದ ಸದಾಚಾರ ಹಾಗೂ ಪ್ರೇಮವನ್ನು, ತಂದೆಯಿಂದ ಕರ್ತೃತ್ವದ ಪಾಠವನ್ನು ಕಲಿಯುತ್ತಾರೆ. ಆದರೆ ಜಿಜಾಬಾಯಿ ಅದಕ್ಕೆ ಅಪವಾದವಾಗಿದ್ದರು! ಶಹಾಜಿರಾಜರ ಅನುಪಸ್ಥಿತಿಯಲ್ಲಿ ಅವರು ಎರಡೂ ಭೂಮಿಕೆಗಳನ್ನು ಸಮರ್ಥವಾಗಿ ನಿರ್ವಹಿಸಿದರು.

ಬಾಲ್ಯದ ಸುಸಂಸ್ಕಾರಗಳ ಬಲದಲ್ಲಿ ಛತ್ರಪತಿ ಶಿವಾಜಿ ಸಾವಿರ ವರ್ಷಗಳ ಗುಲಾಮಗಿರಿಯನ್ನು ಮುರಿದು ಹಾಕಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಪುತ್ರನ ಕರ್ತೃತ್ವದ ಮೇಲೆ ಕಾಲಕ್ಕೆ ತಕ್ಕಂತೆ ಮಾಯೆಯ, ಪ್ರೋತ್ಸಾಹಕರ, ಮಾರ್ಗದರ್ಶನ ನೀಡುತ್ತ ಅವನು ಸಿಂಹಾಸನ ಏರುವವರೆಗೂ ಜಿಜಾಬಾಯಿ ಹೋರಾಡುತ್ತಿದ್ದರು. ರಾಯಗಡದ ಮೇಲೆ ಶಿವರಾಜ್ಯಾಭಿಷೇಕದ ಹನ್ನೆರಡು ದಿವಸಗಳ ನಂತರ ೧೭ ಜೂನ ೧೬೭೪ ರಂದು ಅವರು ಸ್ವತಂತ್ರ ಹಿಂದವೀ ಸ್ವರಾಜ್ಯದಲ್ಲಿ ಕೊನೆಯುಸಿರು ಎಳೆದರು. ರಾಯಗಡದ ಮಡಿಲಲ್ಲಿ ಪಾಚಾಡ ಎಂಬ ಊರಲ್ಲಿ ಜಿಜಾಬಾಯಿಯವರ ಸಮಾಧಿಯಿದೆ.

Leave a Comment