ಕ್ರಾಂತಿಕಾರರ ವೈಶಿಷ್ಟ್ಯಗಳು !

ಚಂದ್ರಶೇಖರ ಆಜಾದ್

ಇವರು ಒಂದು ಜೇಬಿನಲ್ಲಿ ಭಗವದ್ಗೀತೆ ಹಾಗೂ ಇನ್ನೊಂದು ಜೇಬಿನಲ್ಲಿ ಬಂದೂಕನ್ನು ಇಟ್ಟುಕೊಳ್ಳುತ್ತಿದ್ದರು. ಒಮ್ಮೆ ಅವರ ಮಿತ್ರನು ಅವರಿಗೆ ‘ಬಂದೂಕು ಇಟ್ಟುಕೊಳ್ಳುವುದು ಶೋಭೆಯಲ್ಲ, ಯೋಗ್ಯವಲ್ಲ.’ ಎಂದು ಹೇಳಿದರು. ಆಗ ಆಜಾದ್ ‘ಕೃಷ್ಣನ ಮುಖದಲ್ಲಿ ಗೀತೆ ಹಾಗೂ ಕೈಯಲ್ಲಿ ಸುದರ್ಶನ ಚಕ್ರ ಶೋಭಿಸುತ್ತದೆ, ಆದರೆ ನನ್ನ ಕೈಯಲ್ಲಿ ಗೀತೆ ಹಾಗೂ ಬಂದೂಕು ಇದೆ, ಇದರಲ್ಲಿ ತಪ್ಪೇನಿದೆ?’ ಎಂದು ಕೇಳಿದರು.

ಕ್ರಾಂತಿಕಾರ ಬಟುಕೇಶ್ವರ ದತ್ತ !

ಲಾಹೋರ ಸಂಚಿನ ಖಟ್ಲೆಯಲ್ಲಿ ಭಗತಸಿಂಗ್, ರಾಜಗುರು ಹಾಗೂ ಸುಖದೇವಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಯಿತು. ಕ್ರಾಂತಿಕಾರ ಬಟುಕೇಶ್ವರ ದತ್ತಗೆ ಮಾತ್ರ ಗಲ್ಲು ನೀಡಿರಲಿಲ್ಲ. ಬಟುಕೇಶ್ವರದತ್ತ ಲಾಹೋರಿನ ಕಾರಾಗೃಹದಲ್ಲಿರುವಾಗ 'ಕ್ರಾಂತಿಕಾರರಿಗೆ ಗೌರವಯುತ ನಡೆವಳಿಕೆ ಸಿಗಲೆಂದು', ಮಾಡಲಾದ ೧೪೪ ದಿವಸಗಳ ಆಮರಣ ಉಪವಾಸದಲ್ಲಿ ಸಹಭಾಗಿಯಾಗಿದ್ದರು. ಇದೇ ಉಪವಾಸದಲ್ಲಿ ಕ್ರಾಂತಿಕಾರ ಜತೀನ್ ದಾಸರ ಮೃತ್ಯುವಾಯಿತು. ಬ್ರಿಟಿಷ ಪೋಲಿಸರು ಹಾಗೂ ಜೈಲಿನ ಅಧಿಕಾರಿಗಳು ಪ್ರಚಂಡ ಯಮಯಾತನೆ ಕೊಟ್ಟು ಥಳಿಸಿದರೂ ಬಟುಕೇಶ್ವರದತ್ತ ತಮ್ಮ ಸಹಕ್ರಾಂತಿಕಾರರ ಹೆಸರುಗಳನ್ನು ಹೇಳಲಿಲ್ಲ.

ಭಾಯಿ ಬಾಲಮುಕುಂದ

ಭಾಯಿ ಮತಿದಾಸರ ವಂಶಜರಾದ ಭಾಯಿ ಬಾಲಮುಕುಂದರು ಪಂಜಾಬ ಪ್ರಾಂತದಲ್ಲಿನ ಚಕವಾಲ ಎಂಬ ಊರಿನಲ್ಲಿ ಕ್ರಿ.ಶ ೧೮೮೫ ರಲ್ಲಿ ಜನಿಸಿದರು. ಇಸ್ಲಾಂ ಧರ್ಮ ಸ್ವೀಕರಿಸಲು ಒಪ್ಪದಿರುವುದರಿಂದ ಕ್ರೂರಕರ್ಮಿ ಔರಂಗಜೇಬನು ಗುರು ತೇಗಬಹಾದುರರ ಸಹಕಾರಿಯಾದ ಭಾಯಿ ಮತಿದಾಸರನ್ನು ಗರಗಸದಿಂದ ಉದ್ದವಾಗಿ ಸೀಳಿಹತ್ಯೆಗೈದಿದ್ದನು. ಬಾಲಮುಕುಂದನು ಪದವೀಧರನಾದ ನಂತರ ಭಾಯಿ ಪರಮಾನಂದರೆಂಬ ಸ್ವಂತ ಚಿಕ್ಕಪ್ಪನ ಮಗನ ಸಂಪರ್ಕಕ್ಕೆ ಬಂದು ಕಟುವಾದ ಕ್ರಾಂತಿಕಾರರಾದರು.

ತಾತ್ಯಾಸಾಹೇಬ ರಾಯರೀಕರ

ತಾತ್ಯಾಸಾಹೇಬರು ತಾರುಣ್ಯದಲ್ಲಿಯೇ ’ಆಂಗ್ಲರನ್ನು ಈ ದೇಶದಿಂದ ಹೊರಗೆ ಹಾಕದ ಹೊರತು ನಾನು ಯಾವುದೇ ಉಪಭೋಗವನ್ನು ಬೋಗಿಸುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿದ್ದರು. ಇಷ್ಟೇ ಏಕೆ ಹಾಲು, ತುಪ್ಪವನ್ನೂ ತ್ಯಜಿಸಿ ಅವರು ಕೇವಲ ನೆಲಗಡಲೆ ಹಾಗೂ ಬೆಲ್ಲದ ಆಹಾರದ ಮೇಲೆಯೇ ತಮ್ಮ ದಿನಗಳನ್ನು ಕಳೆದರು !’ ತಾತ್ಯಾಸಾಹೇಬರು ಯುವಕರ ಅಂತಃಕರಣವನ್ನು ಪ್ರೇರೆಪಿಸುವ ಕಾರ್ಯದೊಂದಿಗೆ ದೈವೀ ಶಕ್ತಿಯ ಸಹಾಯಪಡೆದು ತಮ್ಮ ಲೌಕಿಕ ಪ್ರಯತ್ನಗಳನ್ನು ಯಶಸ್ವಿಗೊಳಿಸುವ ಮಾರ್ಗಕ್ಕೆ ಒಯ್ಯಲು ಪ್ರಯತ್ನಿಸಿದರು.

ಭಾಯಿ ಪರಮಾನಂದ

‘ಭಾಯಿ ಪರಮಾನಂದರು ದೇಶಭಕ್ತ, ಕ್ರಾಂತಿಕಾರಿ ಸಮಾಜ ಸುಧಾರಕರು, ವಿಚಾರವಂತರು, ಹಿಂದೂ ಧರ್ಮಪ್ರಸಾರಕರು ಹಾಗೂ ಬಲಿದಾನಿಗಳಾಗಿದ್ದರು. ಅವರು ಹಿಂದೂ ಧರ್ಮದ ಪ್ರಸಾರಕ್ಕಾಗಿ ೧೯೦೫ ರಲ್ಲಿ ದಕ್ಷಿಣ ಅಫ್ರಿಕಾಗೆ ಹೋಗಿದ್ದರು.

ಭಾಗೋಜಿ ನಾಯಿಕ

ಕ್ರಾಂತಿಕಾರಿ ಭಾಗೋಜಿ ನಾಯಿಕ ಪೂರ್ವಾನಗರ ಜಿಲ್ಲೆಯ ಪೋಲಿಸ ದಳದಲ್ಲಿ ಕಾರ್ಯನಿರತರಾಗಿದ್ದರು. ಭಾಗೋಜಿಯು ಬ್ರಿಟಿಷರ ವಿರುದ್ಧದ ಹೋರಾಟದ ಕಥೆಗಳನ್ನು ಕೇಳಿದ್ದರು, ಹಾಗೂ ಸ್ವಂತ ಜನರ ವಿರುದ್ಧ ಕ್ರಮ ಕೈಗೊಳ್ಳುವುದು ಅವರ ಸ್ವಾಭಿಮಾನಿ ಮನಸ್ಸಿಗೆ ಒಪ್ಪಿಗೆಯಾಗಲಿಲ್ಲ. ಬ್ರಿಟಿಷ ಅಧಿಕಾರಿಗಳಿಗೆ ಭಾಗೋಜಿಯು ಕ್ರಾಂತಿಕಾರರಿಗೆ ಸಹಾಯ ಮಾಡುತ್ತಿರುವ ಬಗ್ಗೆ ಅನುಮಾನ ಬರತೊಡಗಿತು. ಅವರು ಅವನಿಗೆ ಒಂದು ವರ್ಷದ ಜೈಲುವಾಸವನ್ನು ವಿಧಿಸಿದರು. ಭಾಗೋಜಿಯು ತಮ್ಮ ಪರಿಸರದಯುವಕರಿಗೆ ಪ್ರಶಿಕ್ಷಣವನ್ನು ನೀಡಿ ಸಶಸ್ತ್ರ ಅಭಿಯಾನವನ್ನು ಆರಂಭಿಸಿದರು. ಅವರು ಸರಕಾರಿ ಕಚೇರಿಗಳನ್ನು ಸುಡುವುದು, ಸರಕಾರಿ ಖಜಾನೆಯನ್ನು ಕೊಳ್ಳೆಹೊಡೆಯುವುದು ಇಂತಹ ಕೃತ್ಯಗಳನ್ನು ಮಾಡತೊಡಗಿದರು. ೧೦.೮.೧೮೫೭ ರಂದು ಅವರು ದೊಡ್ಡ ದಾಳಿ ನಡೆಸಿದರು. ಅವರನ್ನು ಸದೆಬಡಿಯಲು ಸರಕಾರವು ನಗರದ ಪೋಲಿಸ ಪ್ರಮುಖ ಜೇಮ್ಸ್ ವಿಲ್ಲ್ಯೆಮ್ ಹೆನ್ರಿಯನ್ನು ಸಶಸ್ತ್ರ ಪಡೆಯೊಂದಿಗೆ ಕಳಿಸಿತು. ಅಕ್ಟೋಬರ ೪ ರಂದು ನಡೆದ ಸಂಘರ್ಷದಲ್ಲಿ ಭಾಗೋಜಿಯಿಂದ ಹೆನ್ರಿಯು ಕೊಲ್ಲಲ್ಪಟ್ಟನು; ಆದರೆ ೧೧.೧೧.೧೮೫೯ ರಂದು ನಡೆದ ಹೋರಾಟದಲ್ಲಿ ಭಾಗೋಜಿ ಹುತಾತ್ಮನಾದನು.

(ಆಧಾರ : ಕ್ರಾಂತಿಕಾರರ ವೈಶಿಷ್ಟ್ಯಗಳು)