ಡಾ. ಹೆಡಗೆವಾರ

ಡಾ. ಹೆಡಗೆವಾರ : ಒಂದು ಅಸಾಮಾನ್ಯ ವ್ಯಕ್ತಿತ್ವ

ರಾಷ್ಟ್ರೀಯ ಸ್ವಯಂಸೇವಕ ಸಂಘದಪ್ರಥಮ ಸರಸಂಘಚಾಲಕ ಡಾ. ಹೆಡಗೆವಾರರ ಪ್ರತಿಯೊಂದು ಕಾರ್ಯವು'ಸಮಾಜದ ಅಭ್ಯುದಯಕ್ಕಾಗಿ ಅಸಂಖ್ಯ ಜನರನ್ನು ತಯಾರಿಸಬೇಕು'ಎಂಬ ಧ್ಯೇಯದಿಂದ ನಡೆಯುತ್ತಿತ್ತು. ಅದರಲ್ಲಿ ಅವರ ವ್ಯಕ್ತಿಗತವಾದ ಯಾವುದೇ ಅಭಿಲಾಷೆ ಇರಲಿಲ್ಲ. 'ತ್ಯಾಗ', 'ಆತ್ಮಸಮರ್ಪಣೆ', 'ಸ್ವಾರ್ಥದ ಹೋಮಹವನ';ಇಂತಹ ಶಬ್ದಗಳನ್ನು ಉಪಯೋಗಿಸಲು ಮೂಲವಾಗಿ 'ನಾನು', 'ನನ್ನದೆಂಬುವುದು' ಜೀವಂತವಾಗಿರಬೇಕು; ಆದರೆ ಡಾ. ಹೆಡಗೆವಾರರು ಹಿಂದೂ ಸಮಾಜದ ಜೀವನದೊಂದಿಗೆ ಏಕರೂಪವಾಗಿದ್ದರು. ಅವರ ಜೀವನದ ಅಸಂಖ್ಯ ಗುಣಗಳನ್ನು ವಿವರಿಸಲು ಶಬ್ದಗಳು ಸಾಲದು;ಇದೇ ಕೊರತೆಯಿಂದಅವರ ವ್ಯಕ್ತಿತ್ವದ ದಿವ್ಯತ್ವವನ್ನು ಮಂಡಿಸಲು ಸಾಧ್ಯವಿಲ್ಲ. 'ಡಾ. ಹೆಡಗೆವಾರರ ಜೀವನವು 'ಮೇಲಿನಿಂದ ಶಾಂತವಾಗಿತ್ತು, ಆದರೆ ಅಂತರಂಗದಲ್ಲಿ ಜ್ವಲಂತವಾಗಿತ್ತು'. ಇದುಹೇಳುವುದಕ್ಕಿಂತಪ್ರತ್ಯಕ್ಷ ಅನುಭವಿಸುವಂತಹದಾಗಿತ್ತು’. ಎಂದು ಹೇಳಬಹುದು.

ಡಾ. ಹೆಡಗೆವಾರ :ಸಾತ್ತ್ವಿಕ ಹಾಗೂ ಆಸ್ತಿಕ

ಡಾ. ಹೆಡಗೆವಾರರ ವ್ಯಕ್ತಿತ್ವ ಮೂಲತಃ ಸಾತ್ತ್ವಿಕ ಹಾಗೂ ಆಸ್ತಿಕವಾಗಿತ್ತು. ಅವರಿಗೆ ದೇವರ ಅಧಿಷ್ಠಾನದ ಮೇಲೆ ಅಪಾರ ಶ್ರದ್ಧೆಯಿತ್ತು. ‘ಶ್ರೀ’ ಮತ್ತು ‘ಓಂ’ ಬರೆಯದೇ ಅವರು ಪತ್ರ ಅಥವಾ ದಿನಚರಿಯನ್ನು ಬರೆಯಲು ಆರಂಭಿಸಿದ್ದು ಕಂಡು ಬರುವುದಿಲ್ಲ.

ಸಂಘಕಾರ್ಯದ ಬಗೆಗಿನ ಡಾ. ಹೆಡಗೆವಾರರದೃಷ್ಟೀಕೋನ

‘ಸಂಘ ಕಾರ್ಯವು ಈಶ್ವರೀ ಕಾರ್ಯವಾಗಿದೆ’, ಎಂಬ ಧೃಢ ಶ್ರದ್ಧೆಯು ಅವರ ಮಾತು ಹಾಗೂ ಪತ್ರಗಳಲ್ಲಿ ಬಲವಾಗಿ ಮೂಡಿಬರುತ್ತಿತ್ತು. ’ನಾವು ಪರಮೇಶ್ವರನ ಕೈಗೊಂಬೆಗಳಾಗಿದ್ದು ಅವನ ಸೂತ್ರದಂತೆ ಈ ಎಲ್ಲ ಕಾರ್ಯಗಳು ನಮ್ಮಿಂದ ನಡೆಯುತ್ತಿವೆ’, ಎಂಬಧೃಡ ನಂಬಿಕೆ ಅವರಲ್ಲಿತ್ತು. ‘ಸಂಘ ಕಾರ್ಯವು ಈಶ್ವರೀ ಕಾರ್ಯ ಎಂದು ಹೇಳುವಾಗ ರಾಷ್ಟ್ರೀಯ ಸ್ವಯಂಸೇವಕ ಸಂಘದವು ಸಜ್ಜನರ ಸಂರಕ್ಷಣೆಯಈಶ್ವರೀ ಕಾರ್ಯವನ್ನೇ ಮಾಡುತ್ತಿದೆ’, ಎಂಬ ಅರ್ಥವೂ ಅವರ ಅಭಿಪ್ರಾಯದಲ್ಲಿತ್ತು. ಅದೇ ರೀತಿ 'ದಾಸಬೋಧ'ದ ಮನೋಗತವನ್ನು ತಿಳಿದುಕೊಂಡು ಅದನ್ನು ಪ್ರಯತ್ನಪೂರ್ವಕವಾಗಿ ಆಚರಣೆಯಲ್ಲಿ ತರುವ ಡಾಕ್ಟರ, ‘ಕಾಯಕವೇ ಕೈಲಾಸ’ ಎಂಬಂತೆ‘ಸಂಘಕಾರ್ಯವು ಈಶ್ವರೀ ಕಾರ್ಯ’ಎಂದು ಹೇಳುತ್ತಿರುವುದು ಸಹಜ ಎನಿಸುತ್ತದೆ.

ಸಾರ್ವಜನಿಕ ಸಂಪರ್ಕ ವೈಶಿಷ್ಟ್ಯಗಳು

ಸಾರ್ವಜನಿಕ ಸಂಪರ್ಕವು ಡಾಕ್ಟರರ ಸ್ವಭಾವವಾಗಿತ್ತು ಹಾಗೂ ಅದರಿಂದ ಅವರ ಕಾರ್ಯಗಳು ಸಹಜವಾಗಿ ನೆರವೇರುತ್ತಿದ್ದವು. ಅವರ ಕಾರ್ಯದಲ್ಲಿ ಓರ್ವ ವಿತರಕನನಾಟಕೀಯತೆಯ ಅಂಶವಿರಲಿಲ್ಲ. ಅವರು ಜನರೊಂದಿಗೆ ವ್ಯವಹರಿಸುವಲ್ಲಿಸಹಜತೆ ಹಾಗೂ ಆಕರ್ಷಣೆಯ ಅಪೂರ್ವ ಸಂಗಮವಿತ್ತು.ನಾಲ್ಕು ಹಿಂದೂಗಳು ಒಟ್ಟಾದರೆ, ಅದೊಂದು ಅಂತಿಮ ಯಾತ್ರೆಯೇ ಇರಬೇಕು!’ಎಂದುಹಿಂದೂ ಸಮಾಜದ ಬಗ್ಗೆ ಒಂದು ಕಲ್ಪನೆನಿರ್ಮಾಣವಾಗಿದ್ದ ಸಮಯದಲ್ಲಿ,ಡಾಕ್ಟರರು ಅದೇ ಸಮಾಜದಲ್ಲಿ ಸಹಸ್ರಾರು ಯುವಕರನ್ನು ಒಗ್ಗೂಡಿಸಿ, ಹಿಂದೂರಾಷ್ಟ್ರ ಸ್ಥಾಪನೆಗಾಗಿ ಒಂದು ದೇಶವ್ಯಾಪಿ ಸಂಘಟನೆಯನ್ನು (ರಾಷ್ಟ್ರೀಯ ಸ್ವಯಂಸೇವಕ ಸಂಘದ) ಹದಿನೈದು ವರ್ಷಗಳಲ್ಲಿ ಕಟ್ಟಿ ತೋರಿಸಿದರು. ಇದು ಅವರ ಅಸಾಧಾರಣ ವ್ಯಕ್ತಿತ್ವದ ಉದಾಹರಣೆಯಾಗಿದೆ.

(ಅಧಾರ: ಸಾಪ್ತಾಹಿಕ ಸನಾತನ ಪ್ರಭಾತ ೨೦೦೬, ಸಂಚಿಕೆ ೨೯)