ಆಝಾದ ಹಿಂದ್ ಸೇನಾ !

ಆಝಾದ ಹಿಂದ್ ಸೇನೆ ಸ್ಥಾಪನೆಯ ದಿನದ ನಿಮಿತ್ತ…..

ಇಂದು ಆಝಾದ ಹಿಂದ್ ಸೇನೆ ಸ್ಥಾಪನೆಯ ದಿನವಾಗಿದೆ. ಬ್ರಿಟೀಶರ ವಿರುದ್ಧ ಹೋರಾಡುವ ಸಲುವಾಗಿ ನೇತಾಜಿಸುಭಾಷಚಂದ್ರಬೋಸ್ ಇವರು ೪೦ ಸಾವಿರ ಭಾರತೀಯ ಸ್ತ್ರೀ-ಪುರುಷರ ಸಹಭಾಗದಿಂದ 'ಆಝಾದ ಹಿಂದ್ಸೇನಾ'ನ್ನು ಸ್ಥಾಪಿಸಿದರು ಹಾಗೂ ‘ತುಮ್ ಮುಝೆಖೂನ್ ದೋ, ಮೈ ತುಮ್ಹೆ ಆಝಾದಿ ದೂಂಗಾ’ (ನೀವು ರಕ್ತಕೊಟ್ಟರೆ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ) ಎಂದುಆಹ್ವಾನಿಸಿದರು.

ಜಲಿಯಾನವಾಲಾಬಾಗ್ಹತ್ಯಾಕಾಂಡ

ಮತ್ತುಆದಾಯಇಲಾಖೆಯಿಂದಪದತ್ಯಾಗ

೨೩.೧.೧೮೮೭ ರಂದು ಕಟಕ ನಗರದಲ್ಲಿ ವಕೀಲ ಜಾನಕೀ ದಾಸ ಬೋಸ್ ಎಂಬವರ ಮನೆಯಲ್ಲಿಸುಭಾಷಚಂದ್ರಬೋಸ್ ಇವರ ಜನ್ಮವಾಯಿತು. ತಂದೆ-ತಾಯಿಯರ ಇಚ್ಛೆಯನ್ನು ಮನ್ನಿಸಿ ಸುಭಾಷ್ಚಂದ್ರ ಬೋಸ್ ೧೯೨೦ ರಲ್ಲಿ ಭಾರತೀಯಆದಾಯಸೇವೆಯ ಪರೀಕ್ಷೆಯನ್ನುಎದುರಿಸಿನಾಲ್ಕನೇ ಸ್ಥಾನದಲ್ಲಿ ಉತ್ತೀರ್ಣರಾದ ಮೇಲೆ ಆ ಸೇವೆಯನ್ನು ಸ್ವೀಕರಿಸಿದರು. ಆದರೆ ಭಾರತದಲ್ಲಿ ನಡೆಯುತ್ತಿರುವ ಘಟನೆಗಳಿಂದಾಗಿ, ವಿಶೇಷವಾಗಿ ಜಲಿಯಾನ್‌ವಾಲಾಬಾಗ್ಹತ್ಯಾಕಾಂಡದಂತಹ ಘಟನೆಗಳಿಂದಾಗಿ ಸುಭಾಷಚಂದ್ರಬೋಸ್ ಚಿಂತಾಕ್ರಾಂತರಾಗಿದ್ದರು. ಅವರು ೧೯೨೧ ರಲ್ಲಿ ಈ ಆದಾಯಸೇವೆಗೆ ತ್ಯಾಗಪತ್ರ ನೀಡಿದರು.

ಜರ್ಮನಿಗೆಪಯಣ ಮತ್ತು‘ರೆಡಿಯೋ’ ಸಂದೇಶಗಳು

ಬ್ರಿಟೀಶರು ಗೃಹಬಂಧನದಲ್ಲಿಟ್ಟಿದ್ದಸುಭಾಷಚಂದ್ರಬೋಸ್ ೨೬.೧.೧೯೪೧ ರಂದುಬ್ರಿಟಿಷರಕಣ್ಣು ತಪ್ಪಿಸಿ ಅದೃಶ್ಯರಾದರು. ಅವರುಕಾಬೂಲ,ಮಾಸ್ಕೋ ಮಾರ್ಗವಾಗಿಜರ್ಮನಿಯನ್ನುತಲುಪಿದರು. ಆಂಗ್ಲ, ಹಿಂದಿ, ಬಂಗಾಲಿ, ತೆಲುಗು, ಗುಜರಾತಿ ಮತ್ತುಪಶ್ತೊಇತ್ಯಾದಿ ಭಾಷೆಗಳಲ್ಲಿಅವರು ನಿಯಮಿತವಾಗಿ ‘ರೆಡಿಯೋ’ ಸಂದೇಶಗಳನ್ನು ಪ್ರಸಾರ ಮಾಡಿದರು. ದಕ್ಷಿಣ ಏಶಿಯಾದ ಜಪಾನಿನ ಆಕ್ರಮಣದ ನಂತರ ಒಂದುವರೆ ವರ್ಷಗಳಲ್ಲಿ ಅವರು ಜರ್ಮನಿಯನ್ನು ಬಿಟ್ಟರು. ಜರ್ಮನ್ ಮತ್ತು ಜಪಾನಿ ಹಡಗುಗಳಲ್ಲಿ ಪ್ರಯಾಣ ಮಾಡಿ ಅವರು ಮೆ ೧೯೪೩ ರಲ್ಲಿ ಟೊಕಿಯೋಗೆ ತಲುಪಿದರು.

‘ಆಝಾದ ಹಿಂದ್ ಸೇನಾ’ಸ್ಥಾಪನೆ

೪ ಜುಲೈಗೆ ಅವರು ಪೂರ್ವ ಏಶಿಯಾದ ಭಾರತೀಯ ಸ್ವಾತಂತ್ರ್ಯ ಹೋರಾಟದ ನೇತೃತ್ವವನ್ನು ಸ್ವೀಕರಿಸಿದರು. ಜಪಾನಿನ ಸಹಾಯದಿಂದ ಜುಲೈ ೫ ರಂದು ಅವರು ೪೦ ಸಾವಿರ ಭಾರತೀಯ ಸ್ತ್ರೀ-ಪುರುಷರ ಸಹಭಾಗದಿಂದ ‘ಆಝಾದ ಹಿಂದ್ಸೇನಾ’ಸ್ಥಾಪಿಸಿದರು. ಅಕ್ಟೊಬರ ೨೧ ರಂದು ಅವರು ಹಂಗಾಮಿ ಭಾರತೀಯ ಸರಕಾರವನ್ನು ಸ್ಥಾಪಿಸಿದರು. ‘ಆಝಾದ ಹಿಂದ್ಸೇನಾ'ಜಪಾನಿಸೈನ್ಯದ ಜೊತೆರಂಗೂನ (ಇಂದಿನಮಯನ್ಮಾರ್ನಲ್ಲಿರುವಪ್ರಾಂತ್ಯ)ಮಾರ್ಗದಲ್ಲಿ ಭಾರತದತ್ತ ಪ್ರಯಾಣ ಬೆಳೆಸಿದರು.೧೮.೩.೧೯೪೪ ರಂದುಸೇನೆ ಭಾರತದ ಭೂಮಿಯಲ್ಲಿ ಕಾಲೂರಿತು.‘ತುಮ್ ಮುಝೆ ಖೂನ್ ದೋ, ಮೈ ತುಮ್ಹೆ ಆಜಾದಿ ದೂಂಗಾ’ ಹಾಗೂ ‘ಚಲೋ ದೆಹಲಿ’ ಎಂಬುದು ಅವರ ಘೋಷಣೆಯಾಗಿತ್ತು. ‘ಜೈ ಹಿಂದ್’, ಇದು ಅವರ ಯುದ್ಧಘೋಷಣೆಯಾಗಿತ್ತು.’

(ಆಧಾರ: ದೈನಿಕ ‘ನವಪ್ರಭಾ’)

ಆಝಾದ ಹಿಂದ್ ಸೇನಾಅತ್ಯಂತ ಜನಪ್ರಿಯವಾಗುವುದು

೧೯೪೫ ರಲ್ಲಿ ಜರ್ಮನಿ ಮತ್ತು ಜಪಾನ ಇವುಗಳ ಪರಾಭವವಾಯಿತು. ಆಝಾದ ಹಿಂದ್ ಸೇನೆಯ ಸೈನಿಕರು ಸೆರೆಹಿಡಿಯಲ್ಪಟ್ಟರು. ಅವರ ಮೇಲೆ ೧೯೪೬ ರಲ್ಲಿ ಮೊಕದ್ದಮೆ ಹೂಡಲಾಯಿತು. ಆಗ ‘ಆಝಾದ ಹಿಂದ್ಸೇನಾ’ ಅತ್ಯಂತ ಜನಪ್ರಿಯವಾಯಿತು. ಸುಭಾಷಚಂದ್ರಬೋಸ್ ಇವರ ಛಾಯಾಚಿತ್ರ ಪ್ರತಿಯೊಂದು ಮನೆಯಲ್ಲಿ ಹಚ್ಚಲಾಯಿತು.

ಬ್ರಿಟೀಶ ಸೈನ್ಯದಲ್ಲಿ ಬಂಡಾಯ

೧೯೪೬ ರಲ್ಲಿ ‘ರೋಯಲ್ ಇಂಡಿಯನ್ನೇವಿ’ ಮತ್ತು ರೋಯಲ್ ಇಂಡಿಯನ್ ಎಅರ್ ಫೋರ‍್ಸ್ಸೈನಿಕರುಬಂಡಾಯ ಹೂಡಿದರು. ಬ್ರಿಟೀಶ್ ಸರಕಾರ ಮಾಡಿದ ಗುಪ್ತ ವಿಚಾರಣೆಯಲ್ಲಿ ಅವರಿಗೆ ತಿಳಿಯಿತೇನೆಂದರೆ, ಬ್ರಿಟೀಶ ಸರಕಾರದ ಹೆಚ್ಚಿನಂಶ ಭಾರತೀಯ ಸೈನಿಕರಿಗೆ ‘ಆಝಾದ ಹಿಂದ್ ಸೇನಾವಿಷಯದಲ್ಲಿ ಸಹಾನುಭೂತಿ ಇದೆ ಹಾಗೂ ಅವರ ವಿರುದ್ಧ ನಡೆಯುತ್ತಿರುವ ಮೊಕದ್ದಮೆಗೆ ಅವರ ವಿರೋಧವಿದೆ ಎಂದು. ಆಂಗ್ಲರುಯಾವ ಸೈನಿಕರ ಆಧಾರದಿಂದ ಭಾರತದಲ್ಲಿಆಡಳಿತ ನಡೆಸಲು ನೋಡುತ್ತಿದ್ದರೋ, ಅವರೇ ಈಗ ಸಹಕರಿಸುವುದಿಲ್ಲ, ಎಂದು ತಿಳಿದಾಗ ಬ್ರಿಟೀಶರಿಗೆ ಈಗ ಯಾವುದೇ ಪರ್ಯಾಯ ಉಳಿದಿರಲಿಲ್ಲ; ಆದ್ದರಿಂದ ಅವರು ತಮ್ಮ ತಟ್ಟೆಲೋಟಗಳನ್ನು ಎತ್ತಿಕೊಂಡು ಹೋಗುವ ಸಿದ್ಧತೆ ಮಾಡಿದರು.

– ಜಿತೇಂದ್ರ ಜೋಶಿ (ಅಭಯ ಭಾರತ, ಅಗಸ್ಟ್ ೧೫ ರಿಂದ ಸಪ್ಟೆಂಬರ್ ೧೧೧೪ ೨೦೦೯)