ಮಂಗಲ ಪಾಂಡೆ :೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಮೊದಲನೆ ಕ್ರಾಂತಿವೀರ





ಸತ್ತ್ವಶೀಲ ಬ್ರಾಹ್ಮಣ ಸಿಪಾಯಿ

ಮಂಗಲ ಪಾಂಡೆ ಅಂದಿನ ಆಂಗ್ಲ ಸೇನೆಯ ೩೪ನೆಯ ಪಲಟಣಿಯಲ್ಲಿ ಬ್ರಾಹ್ಮಣ ಸಿಪಾಯಿಯಾಗಿದ್ದರು. ಅವರು ಕ್ರಾಂತಿಪಕ್ಷದ ಸದಸ್ಯರಾಗಿದ್ದರು. ಕೊಲಕಾತಾದಲ್ಲಿನ ಬರಾಕಪುರದಲ್ಲಿನ ೧೯ನೆಯ ಪಲಟಣಿಯಲ್ಲಿ ಆಂಗ್ಲ ಅಧಿಕಾರಿಗಳು ದನದ ಅಥವಾ ಹಂದಿಯ ಕೊಬ್ಬು (ಮೇದಸ್ಸು) ಹಚ್ಚಿದ ಹೊಸ ಗುಂಡುಗಳ ಪ್ರಯೋಗ ಮಾಡಲು ನಿರ್ಧರಿಸಿದರು. ಈ ಗುಂಡುಗಳು ಬಂದೂಕನಲ್ಲಿ ತುಂಬುವ ಮೊದಲು ಅವುಗಲ ಹೊದಿಕೆಯನ್ನು ಹಲ್ಲುಗಳಿಂದ ಕಡಿಯಬೇಕಾಗುತ್ತಿತ್ತು. ಇಂತಹ ಸಮಯದಲ್ಲಿ ಸಹಜವಾಗಿ ಗೋವಿನ ಅಥವಾ ಹಂದಿಯ ಕೊಬ್ಬು ಬಾಯಿಯಲ್ಲಿ ಹೋಗುತ್ತಿತ್ತು. ಅದರಿಂದಾಗಿ ಈ ಪಲಟಣಿಯಲ್ಲಿನ ಸಿಪಾಯಿಗಳು ಈ ಗುಂಡುಗಳನ್ನು ಸ್ವೀಕರಿಸುವುದನ್ನು ನಿರಾಕರಿಸಿದರು. ಇಷ್ಟೇ ಅಲ್ಲದೆ ಪ್ರತಿಕಾರಕ್ಕಾಗಿ ಅವರು ಶಸ್ತ್ರವನ್ನು ತೆಗೆದರು. ಆ ದಿನಗಳಲ್ಲಿ ಬ್ರಿಟಿಶ್ ಅಧಿಕಾರಿಗಳ ಸಂಖ್ಯೆಯು ಕಡಿಮೆಯಿದ್ದರಿಂದ ಬ್ರಿಟಿಶರು ಅ ಅವಮಾನವನ್ನು ನುಂಗಿದರು. ಅವರು ಬ್ರಹ್ಮದೇಶ (ಮ್ಯಾನಮಾರ)ದಿಂದ ಬಿಳಿ ಸೈನಿಕರ ಸಹಾಯವನ್ನು ತರಿಸಿ ಈ ಪಲಟಣಿಗೆ ನಿಶಸ್ತ್ರ ಮಾಡಿ ಸಿಪಾಯಿಗಳನ್ನು ಅವಮಾನಿಸಿ ಹೊರತಳ್ಳಲು ಇಚ್ಛಿಸಿದರು. ಇದನ್ನು ಬರಾಕಪುರನಲ್ಲಿ ಜಾರಿಗೆ ತರಲು ನಿರ್ಧರಿಸಿದರು ಕೂಡ. ತಮ್ಮ ಬಾಂಧವರ ಈ ಅವಮಾನದ ಕಲ್ಪನೆಯಿಂದ ಮಂಗಲ ಪಾಂಡೆಯು ಕುಪಿತಗೊಂಡು ಎನಾದರೂ ಮಾಡಬೆಕು ಎಂದು ತೀರ್ಮಾನಿಸಿದರು. ಸ್ವಧರ್ಮದಲ್ಲಿ ಪ್ರಾಣಕ್ಕಿಂತಲೂ ಹೆಚ್ಚು ನಿಷ್ಠೆಯನ್ನೀಡುವವರು, ಆಚರಣೆಯಿಂದ ಶೀಲವಮ್ತರು, ಕಾಣುವಲ್ಲಿ ತೇಜಸ್ವಿಯಾದಂತಹ ತರುಣ ಮಂಗಲ ಪಾಂಡೆಯ ಪವಿತ್ರ ರಕ್ತದಲ್ಲಿ ದೇಶಸ್ವಾತಂತ್ರ್ಯದ ‘ವಿದ್ಯುತ್ ಚೇತನೆ’ ಸಂಚರಿಸಿತು. ಎದುರಿನಲ್ಲಿ ಅನ್ಯಾಯ ನಡೆಯುತ್ತಿರುವಾಗ ಕ್ಷಾತ್ರವೀರರ ಖಡ್ಗಗಳು ಕತ್ತಿಯ ಒರೆಯಲ್ಲಿಯಾದರೂ ಹೇಗೆ ಇರುವವು ?

ಸಂಚಲನದ ಮೈದಾನದಲ್ಲಿ ಜಿಗಿತ !

೩೧ ಮೇ : ಒಟ್ಟಿಗೆ ಎಲ್ಲೆಡೆ ಕ್ರಾಂತಿಯುದ್ಧಕ್ಕೆ ಪ್ರಾರಂಭ ಮಾಡುವುದಕ್ಕೆ ಶ್ರೀಮಂತ ನಾನಾಸಾಹೇಬ ಪೇಶವೆ ಮುಂತಾದವರ ಯೋಜನೆಯಿತ್ತು. ಆದರೆ ೧೯ನೆಯ ಪಲಟಣಿಯಲ್ಲಿನ ಸ್ವದೇಶ ಬಂಧುಗಳ ತನ್ನೆದುರಿನಲ್ಲಿ ಅವಮಾನವಾಗುತ್ತಿರುವುದರ ವಿಷಯ ಮಂಗಲ ಪಾಂಡೆ ಇವರ ಅಂತಃಕರಣಕ್ಕೆ ಅಸಹನೀಯ ವೇದನೆಗಳನ್ನು ಮಾಡಲಾರಂಭಿಸಿತು. ತನ್ನ ಪಲಟಣವು ಇವತ್ತೇ ಉತ್ಥಾನ ಮಾಡಬೇಕೆಂದು ಹೇಳುತ್ತಾ ಮಂಗಲ ಪಾಂಡೆ ಇವರು ಅವರ ಬಂದೂಕು ತುಂಬಿಕೊಂಡರು. ಆ ದಿನ ರವಿವಾರ, ೨೯ ಮಾರ್ಚ ೧೮೫೭ ಆಗಿತ್ತು. ಸಂಚಲನದ ಮೈದಾನದಲ್ಲಿ ಮುಂದೆ ಹಾರಿ, ಬ್ರಿಟಿಶರು ಮಾಡುತ್ತಿರುವ ಅನ್ಯಾಯದ ವಿರುದ್ಧ ಸ್ವದೇಶಿ ಸೈನಿಕರಿಗೆ ಉತ್ತೇಜಿಸಲಾರಂಭಿಸಿದರು. ‘ಪುರುಷರೇ, ಏಳಿ!’ ಎಂದು ಗರ್ಜಿಸುತ್ತ ಅವರು ಸೈನಿಕರಿಗೆ, “ಈಗ ಹಿಂದೇಟು ಹಾಕದಿರಿ. ಬಂಧುಗಳೇ, ಆಕ್ರಮಿಸಿ ! ನಿಮಗೆ ನಿಮ್ಮ ಧರ್ಮದ ಆಣೆ !! ಎದ್ದೇಳಿ, ತಮ್ಮ ಸ್ವಾತಂತ್ರ್ಯಕ್ಕಾಗಿ ಶತ್ರುಗಳನ್ನು ನಾಶ ಮಾಡಿ !!!"

ಇದನ್ನು ನೋಡಿದ ಕೂಡಲೇ ಮೇಜರ್ ಹ್ಯೂಸನ್ ಎಂಬ ಆಂಗ್ಲ ಅಧಿಕಾರಿಯು ಅವರನ್ನು ಹಿಡಿಯುವ ಅಪ್ಪಣೆ ಮಾಡಿದನು; ಆದರೆ ಒಬ್ಬ ಸೈನಿಕನೂ ನಿಂತ ಸ್ಥಳದಿಂದ ಕದಲಲಿಲ್ಲ. ಬದಲು ಮಂಗಲ ಪಾಂಡೆ ಇವರ ಗುಂಡು ತಾಗಿ ಹ್ಯೂಸನ್ ಗಾಯಗೊಂಡನು. ಇದನ್ನು ನೋಡಿದಾಗ ಲೆಫ್ಟನಂಟ್ ಬಾ ಕುದುರೆಯನ್ನು ಕುಣಿಸುತ್ತಾ ಮಂಗಲನ ಮೇಲೆ ದಾಳಿ ಮಾಡತ್ತಾ ಬಂದನು. ಇಷ್ಟರಲ್ಲಿ ಮಂಗಲನ ಬಂದೂಕಿನಿಂದ ಬಂದಿದ ಗುಂಡು ಕುದುರೆಯ ಹೊಟ್ಟೆಯಲ್ಲಿ ನುಗ್ಗಿತು. ಕುದುರೆಯು ಲೆಫ್ಟನಂಟದೊಂದಿಗೆ ಭೂಮಿಯ ಮೇಲೆ ಅಡ್ಡ ಬಿದ್ದಿತು. ಮಂಗಲ ಪಾಂಡೆ ಇವರಿಗೆ ಬಂದೂಕಿನಿಂದ ಗುಂಡುಗಳನ್ನು ತುಂಬಿಸುವ ಅವಕಾಶ ದೊರೆಯುವ ಮೊದಲೇ ಲೆಫ್ಟನಂಟ್ ಬಾ ತನ್ನ ಪಿಸ್ತೂಲು ತೆಗೆದು ನಿಂತನು. ಮಂಗಲ ಪಾಂಡೆಯರು ಸ್ವಲ್ಪವೂ ಹೆದರದೆ ತನ್ನ ಖಡ್ಗವನ್ನು ಹೊರತೆಗೆದರು. ಬಾ ಪಿಸ್ತೂಲು ಹಾರಿಸಿದನು; ಆದರೆ ಮಂಗಲ ಪಾಂಡೆ ಇವರು ಅವನ ಗುರಿಯನ್ನು ತಪ್ಪಿಸಿದರು. ತನ್ನ ಖಡ್ಗದಿಂದ ಮಂಗಲ ಪಾಂಡೆ ಇವರು ಅವನಿಗೂ ಹೊರಳಾಡಿಸಿದನು. ಹ್ಯೂಸನ್ ಮತ್ತು ಬಾ ತಮ್ಮ ನಿವಾಸಸ್ಥಾನದೆಡೆಗೆ ಓಡಿ ಹೋದರು.

ದೇಶದ್ರೋಹಿ ಪಾಲಟು

ಇಷ್ಟರಲ್ಲಿ ಶೇಖ ಪಾಲಟು ಹೆಸರಿನ ಮುಸಲ್ಮಾನ ಸಿಪಾಯಿ ಮಂಗಲನ ದಿಕ್ಕಿಗೆ ಹೋಗಲಾರಂಭಿಸಿದನು. ಅವನು ತನ್ನ ಜೊತೆಯಲ್ಲಿದ್ದರಿಂದ ತನಗೆ ಸಹಾಯ ಮಾಡಲು ಬರುತ್ತಿರುವುದೆಂದು ಮಂಗಲ ಪಾಂಡೆಗೆ ಅನಿಸಿತು; ಆದರೆ ಹಾಗೆ ಆಗಲಿಲ್ಲ. ಶೇಖ ಪಾಲಟೂ ಮಂಗಲ ಪಾಂಡೆಗೆ ಹಿಂದಿನಿಂದ ಬಿಗಿತ ಹಾಕಿದನು. ಪಾಂಡೆ ಅವನ ಬಿಗಿತವನ್ನು ಬಿಡಿಸಿದರು. ದೇಶಿ ಸಿಪಾಹಿಯರೂ ಶೇಖನ ದಿಕ್ಕಿನಲ್ಲಿ ಕಲ್ಲು ಮತ್ತು ಪಾದರಕ್ಷೆಗಳನ್ನು ಬಿಸಾಡಲಾರಂಭಿಸಿದರು. ಜೀವದ ಭಯದಿಂದ ಶೇಖ ಪಾಲಟು ಓಡಿಹೋದನು. ಸ್ವಲ್ಪ ಸಮಯದಲ್ಲಿಯೇ ಕರ್ನಲ್ ವ್ಹಿಲರ್ ಆ ಸ್ಥಳಕ್ಕೆ ಬಂದನು. ಅವನು ಸೈನಿಕರಿಗೆ ಮಂಗಲ ಪಾಂಡೆಯರಿಗೆ ಹಿಡಯುವ ಅಪ್ಪಣೆ ನೀಡಿದನು. ಕರ್ನಲ್ ವ್ಹಿಲರನಿಗೆ ಸೈನಿಕರು ಸ್ಪಷ್ಟವಾಗಿ, “ನಾವು ಈ ಪವಿತ್ರ ಬ್ರಾಹ್ಮಣನ ಕೂದಲಿಗೂ ಕೈ ತಾಗಿಸಲಿಕ್ಕಿಲ್ಲ" ಎಂದು ಹೇಳಿದರು. ಹಿಂದೂಸ್ಥಾನದ ಭೂಮಿಯ ಮೇಲಿಂದ ಹರೆಯುವ ಬಿಳಿ ಅಧಿಕಾರಿಗಳ ರಕ್ತ ಮತ್ತು ಎದುರಿನ ಧರ್ಮಾಭಿಮಾನಿ ಸಿಪಾಯಿಯರನ್ನು ನೋಡಿ ಕರ್ನಲ್ ವ್ಹಿಲರ್ ಅವನ ಬಂಗಲೆಯೆಡೆಗೆ ಓಡಿ ಹೋದನು. ನಂತರ ಜನರಲ್ ಹಿಯರ್ಸ ಬಹಳಷ್ಟು ಯರೋಪಿಯನ್ ಸಿಪಾಯಿಗಳನ್ನು ತೆಗೆದುಕೊಂಡು ಮಂಗಲ ಪಾಂಡೆ ಇವರಮೆಲೆ ದಾಳಿ ಮಾಡುತ್ತಾ ಬಂದನು. ಅಷ್ಟರವರರೆಗೆ ಮಧ್ಯಾಹ್ನವಾಗಿತ್ತು. ಮಂಗಲ ಪಾಂಡೆ ದಣಿವಾಗಿದ್ದರು. ತಾನು ಫಿರಂಗಿಯರ ಕೈಯಲ್ಲಿ ದೊರೆಯುವೆನು ಎಂಬುದನ್ನು ನೋಡಿದಾಗಲೇ ಅವರು ಬಂದೂಕು ತನ್ನ ಎದೆಯೆಡೆಗೆ ಹಿಡಿದರು ಮತ್ತು ತನ್ನಮೇಲೆ ಗುಂಡು ಹಾರಿಸಿಕೊಂಡರು. ಮಂಗಲ ಪಾಂಡೆ ನೆಲದಮೇಲೆ ಕುಸಿದರು. ಅವರ ಎಚ್ಚರ ತಪ್ಪಿತು. ನಂತರವೇ ಬ್ರಿಟಿಶರು ಅವರನ್ನು ಹಿಡಿಯಲು ಸಾಧ್ಯವಾದರು. ಗಾಯಗೊಂಡಿದ್ದ ಮಂಗಲ ಪಾಂಡೆಯರಿಗೆ ಸೈನಿಕರ ದವಾಖಾನೆಯಲ್ಲಿ ಕೊಂಡೊಯ್ಯಲಾಯಿತು. ವಾರದೊಳಗೆ ಅವರಮೇಲೆ ಸೈನಿಕ ನ್ಯಾಯಾಲಯದಲ್ಲಿ ಖಟ್ಲೆ ನಡೆಸಲಾಯಿತು. ಸ್ವಧರ್ಮದ ಮೇಲೆ ಪ್ರಾಣಕ್ಕಿಂತ ನಿಷ್ಠೆವಿಡುವ ಈ ತರುಣ ಕ್ಷಾತ್ರವೀರನಿಗೆ ನ್ಯಾಯಾಲಯವು ಇತರ ಕಾರಸ್ಥಾನದವರ ಹೆಸರು ಕೇಳಿತು; ಆದರೆ ಮಂಗಲ ಪಾಂಡೆ ಇವರ ಮುಖದಿಂದ ಯಾರ ಹೆಸರೂ ಹೊರ ಬೀಳಲಿಲ್ಲ. ಪಾಂಡೆ ಇವರಿಗೆ ಗಲ್ಲಿಗೇರಿಸುವ ಶಿಕ್ಷೆಯನ್ನು ಕೇಳಿಸಲಾಯಿತು. ತನ್ನ ದೇಶಬಾಂಧವರ ಅವಮಾನಕ್ಕಾಗಿ ತನ್ನ ಜೀವವನ್ನು ನೀಡುವ ಈ ಕ್ರಾಂತಿಯ ಅಗ್ರದೂತನ ಬಗ್ಗೆ ಜನರ ಮನಸ್ಸಿನಲ್ಲಿ ಇಷ್ಟು ವಿಲಕ್ಷಣ ಶ್ರದ್ದೆ ನಿರ್ಮಾಣವಾಯಿತೆಂದರೆ ಸಂಪೂರ್ಣ ಬರಾಕಪುರದಲ್ಲಿ ಅವರಿಗೆ ಗಲ್ಲಿಗೇರಿಸಲು ಒಂದೂ ಕೊಲೆಗಡಕ ಸಿಗಲಿಲ್ಲ. ಕೊನೆಗೆ ಈ ಹೊಲಸು ಕೆಲಸಕ್ಕಾಗಿ ಕೊಲಕಾತಾದಿಂದ ನಾಲ್ಕು ಮನುಷ್ಯರನ್ನು ಕೇಳಿಕೊಳ್ಳಲಾಯಿತು.

ಮಂಗಲ ಪಾಂಡೆ ಯಾವ ತಂಡದ ಸೈನಿಕರಾಗಿದ್ದರು ಅದರ ಸುಭೇದಾರನಿಗೆ ಆಂಗ್ಲರು ಕೊಂದರು. ೧೯ ಮತ್ತು ೩೪ನೇಯ ಈ ಎರಡು ಪಲಟಣಿಗಳನ್ನು ಅವರು ಶಸ್ತ್ರವಿಹೀನ ಮಾಡಿ ರದ್ದುಗೊಳಿಸಿದರು. ಇದರ ಪರಿಣಾಮವು ವಿರುದ್ಧವಾಯಿತು. ಸಿಪಾಯಿಗಳು ಹೆದರಿಕೆ ಎನಿಸುವ ಬದಲು ನೂರಾರು ಸಿಪಾಯಿಯರು ತಾವಾಗಿ ದಾಸ್ಯತ್ವದ ಕುರುಹುಯಿರುವ ಅವರ ಸೈನಿಕ ಸಮವಸ್ತ್ರಗಳನ್ನು ಹರಿದು ಹಾಕಿದರು. ಈ ಪರದಾಸ್ಯದ ಶೃಂಖಲೆಗಳನ್ನು ಇನ್ನೂವರೆಗೆ ಇಟ್ಟಿದ್ದರ ಪಾಪಕ್ಷಾಲನಕ್ಕಾಗಿ ಅವರು ನಿಜವಾಗಿಯೂ ಭಾಗೀರಥದಲ್ಲಿ ಸ್ನಾನ ಮಾಡಿದರು.

ಸ್ವಾತಂತ್ರ್ಯಸೂರ್ಯಕ್ಕೆ ರಕ್ತದ ಅರ್ಘ್ಯ !

ಎಪ್ರಿಲ ೮ರಂದು ಬೆಳಗ್ಗೆ ಮಂಗಲ ಪಾಂಡೆ ಇವರಿಗೆ ನೇಣುಗಂಬದ ಹಲಗೆಯೆಡೆಗೆ ಕೊಂಡೊಯ್ಯಲಾಯಿತು. ಅವರಸುತ್ತಲೂ ಸೈನಿಕರ ಕಾವಲಿತ್ತು. ಮಂಗಲ ಪಾಂಡೆಯರು ನಿರ್ಭಯವಾಗಿ ಹಲಗೆಯಮೇಲೆ ಹತ್ತಿದರು. ‘ತಾನು ಯಾರದ್ದೂ ಹೆಸರು ಹೇಳುವುದಿಲ್ಲ’ ಎಂದು ಅವರು ಪುನಃ ಹೇಳಿದಾಗ ಅವರ ಕಾಲುಕೆಳಗಿನ ಆಧಾರವನ್ನು ತೆಗೆಯಲಾಯಿತು. ಮಾತೃಭೂಮಿಯ ಚರಣಗಳಲ್ಲಿ ತನ್ನ ರಕ್ತದ ಅರ್ಘ್ಯ ನೀಡಿ ಮಂಗಲ ಪಾಂಡೆಯರು ೧೮೫೭ನೇಯ ಕ್ರಾಂತಿಯುದ್ಧದಲ್ಲಿನ ಮೊದಲನೆಯ ಕ್ರಾಂತಿಕಾರಕವೆನಿಸಿದರು. ಅವರ ಹೆಸರಿನ ಪ್ರಭಾವ ಇಷ್ಟು ವಿಲಕ್ಷಣಯಿತ್ತೆಂದರೆ ಈ ಕ್ರಾಂತಿಯುದ್ಧದಲ್ಲಿನ ಎಲ್ಲ ಸೈನಿಕರಿಗೆ ಆಂಗ್ಲರು ‘ಪಾಂಡೆ’ ಇದೇ ಹೆಸರಿಂದ ಸಂಬೋಧಿಸಲಾರಂಭಿಸಿದರು.

೧೮೫೭ರ ಎಪ್ರಿಲ ೮ರಂದು ಬರಾಕಪುರದ ಕಾರಾಗೃಹದಲ್ಲಿ ಮಂಗಲ ಪಾಂಡೆ ಇವರ ಉಷ್ಣ ರಕ್ತವು ಹಿಂದಭೂಮಿಯಮೇಲೆ ಚೆಲ್ಲಿತು. ಅವರ ಈ ರಕ್ತಸಿಂಚನೆಯಿಂದ ದೇಶ ಮತ್ತು ಧರ್ಮಕ್ಕಾಗಿ ಬಲಿದಾನ ಮಾಡಲು ಅನೇಕ ದೇಶಭಕ್ತರು ಹುರುಪುಗೊಂಡಿದ್ದರು.

Leave a Comment