ಸ್ವಾಮಿ ವಿವೇಕಾನಂದರ ಕ್ಷಾತ್ರಧರ್ಮ


ಕಬ್ಬಿಣದ ಬಾಹುಗಳು, ಗಟ್ಟಿಯಾದ ದೇಹ ಮತ್ತು ಅದರ ಅಂತರ್ಯದೊಳಗೆ ವಾಸಿಸುವ ವಜ್ರದಂತಹ ಮನಸ್ಸು ಇಂತಹ ಹಿಂದೂವು ಸ್ವಾಮಿ ವಿವೇಕಾನಂದರಿಗೆ ಬೇಕಾಗಿತ್ತು. ಕ್ಷಾತ್ರಧರ್ಮದ ಮಹತ್ವವನ್ನು ವಿವರಿಸುವಾಗ ಸ್ವಾಮಿ ವಿವೇಕಾನಂದರು, ‘ಬಾಹುಗಳು ಶಕ್ತಿಶಾಲಿಯಾಗುವುದರಿಂದ ಗೀತೆಯು ಇನ್ನೂ ಹೆಚ್ಚು ಉತ್ತಮವಾಗಿ ಅರ್ಥವಾಗುತ್ತದೆ. ನಮ್ಮ ಧರ್ಮೀಯರಲ್ಲಿ ರಕ್ತವು ತೇಜದಿಂದ ಕುದಿಯತೊಡಗಿತು ಎಂದರೆ ಭಗವಂತ ಶ್ರೀಕೃಷ್ಣನಂತಹ ಮಹಾಪುರುಷರ ವಿರಾಟ ಪ್ರಜ್ಞೆ ಮತ್ತು ಅಪೂರ್ವ ಸಾಮರ್ಥ್ಯಗಳು ಅರ್ಥವಾಗತೊಡಗುತ್ತವೆಎಂದಿದ್ದಾರೆ.

ಪ್ರತಿಯೊಬ್ಬರೂ ಗುರುಗೋವಿಂದ ಸಿಂಗರಾಗಬೇಕು!

ಗುರುಗೋವಿಂದ ಸಿಂಗರು ತಮ್ಮ ಬಾಂಧವರಿಗಾಗಿ ಅಪರಿಮಿತ ಕಷ್ಟಗಳನ್ನು ಸಹಿಸಿಕೊಂಡರು, ಅಂತಹದ್ದೇನಾದರೂ ನಮ್ಮ ಹಿಂದೂ ಬಾಂಧವರಿಗಾಗಿ ಸಹಿಸುವಂತಹ ತಯಾರಿಯು ನಿಮ್ಮಲ್ಲಿದ್ದರೆ ಮಾತ್ರ ನೀವು ಹಿಂದೂಗಳೆನ್ನಬಹುದು. ಹಿಂದೂ ಧರ್ಮಕ್ಕಾಗಿ ಗುರುಗೋವಿಂದ ಸಿಂಗರು ರಣರಂಗವನ್ನು ತಮ್ಮ ರಕ್ತದಿಂದ ಸಿಂಚನಗೊಳಿಸಿದರು. ತಮ್ಮ ಇಬ್ಬರು ಪುತ್ರರನ್ನು ರಣಾಂಗಣದಲ್ಲಿ ಬಲಿ ನೀಡಿದರು. ಒಂದು ವೇಳೆ ನಿಮ್ಮಲ್ಲಿ ಭರತಖಂಡದ ಹಿತವಾಗಬೇಕೆಂಬ ಇಚ್ಛೆಯಿದೆ ಎಂದಾದರೆ ಪ್ರತಿಯೊಬ್ಬ ಹಿಂದೂವು ಗುರುಗೋವಿಂದ ಸಿಂಗರಾಗಬೇಕು. – ಸ್ವಾಮಿ ವಿವೇಕಾನಂದರು

ಸರ್ವತೋಮುಖ ಕ್ರಾಂತಿಗಾಗಿ ಭಾರತೀಯ ಯುವಕರೇ, ಸಂಘಟಿತರಾಗಿರಿ!

ಭಾರತಮಾತೆಗೆ ಅವಳ ಸರ್ವಶ್ರೇಷ್ಠ ಮತ್ತು ಸರ್ವೋತ್ಕೃಷ್ಠವಾದ ಸಂತಾನದ ಬಲಿದಾನದ ಅವಶ್ಯಕತೆಯಿದೆ ಪೃಥ್ವಿಯಲ್ಲಿನ ಅತ್ಯಂತ ಪರಾಕ್ರಮೀ ಮತ್ತು ಸರ್ವಜನರು ಬಹುಜನಹಿತಾಯ ಬಹುಜನಸುಖಾಯ ಇದಕ್ಕಾಗಿ ಆತ್ಮಬಲಿದಾನ ಮಾಡಲೇಬೇಕಾಗುತ್ತದೆ. ಉತ್ಸಾಹೀ, ಶ್ರದ್ಧಾವಂತ ಮತ್ತು ನಿಷ್ಕಪಟರಾದ ಯುವಕರು ಸಿಕ್ಕರೆ ಅವರು ಇಡಿ ಜಗತ್ತಿನಲ್ಲಿ ಸರ್ವತೋಮುಖ ಕ್ರಾಂತಿ ಮಾಡಬಲ್ಲರು. ಹಿಂದೂಸ್ಥಾನಕ್ಕಾಗಿ ತಮ್ಮ ತನು, ಮನ ಮತ್ತು ಪ್ರಾಣ ಅರ್ಪಿಸಲು ಸಿದ್ಧರಿರುವ ಯುವಕರನ್ನು ಸಂಘಟಿಸಿರಿ. – ಸ್ವಾಮಿ ವಿವೇಕಾನಂದರು