ದೇಶಭಕ್ತ ಹರನಾಮಸಿಂಗ್ ಸೈನಿ

ದೇಶಕ್ಕಾಗಿ ಕ್ರಾಂತಿಕಾರ್ಯವನ್ನು ಮಾಡಿದವರು ಅನೇಕ ಕ್ರಾಂತಿಕಾರಿಗಳಿದ್ದಾರೆ. ಅವರಲ್ಲಿ ಒಬ್ಬರಾದ ‘ಗದರ್ ಪಕ್ಷ’ ಖ್ಯಾತಿಯ ಹರನಾಮಸಿಂಗ್ ಸೈನಿ ಇವರ ಬಗ್ಗೆ ತಿಳಿದುಕೊಳ್ಳೋಣ.

೧. ಕೆನಡಾದಲ್ಲಿ ‘ದಿ ಹಿಂದೂಸ್ಥಾನ’ ಪತ್ರಿಕೆಯ ಮೂಲಕ ಬಾಂಬ್ ತಯಾರಿಕೆಯನ್ನು ಪ್ರಚಾರ ಮಾಡಿದ ಹರನಾಮಸಿಂಗ್

ಉದ್ಯೋಗ ನಿಮಿತ್ತ ಕೆನಡಾದಲ್ಲಿ ನೆಲೆಸಿದ ಹರನಾಮಸಿಂಗ್ ರವರು ‘ದಿ ಹಿಂದೂಸ್ಥಾನ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಅವರು ಅತ್ಯಂತ ಪ್ರಭಾವಶಾಲಿ ಲೇಖಕರಾಗಿದ್ದರು. ಈ ಪತ್ರಿಕೆಯನ್ನು ಓದಿದ ಕೆನಡಾದಲ್ಲಿದ್ದ ಅನೇಕ ಭಾರತೀಯರು ಪ್ರಭಾವಿತರಾದರು, ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ಮುಂದಾದರು. ಇದರಿಂದ ಕುಪಿತಗೊಂಡ ಕೆನಡಾದ ಸರಕಾರವು, ಹರನಾಮ ಸಿಂಗ್.ರವರ ಮೇಲೆ ‘ವಿಸ್ಫೋಟಕಗಳನ್ನು ತಯಾರಿಸುವುದು, ಅದನ್ನು ಕಲಿಸುವುದು, ವಿದ್ರೋಹದ ಪ್ರಚಾರ’ ಮುಂತಾದ ಆರೋಪಗಳನ್ನು ಹೊರಿಸಿ, ಅವರನ್ನು ೪೮ ಗಂಟೆಗಳೊಳಗೆ ಗಡಿಪಾರು ಮಾಡುವ ಆದೇಶವನ್ನು ಹೊರಡಿಸಿತ್ತು.

೨. ‘ಗದರ್’ನ್ನು ದೇಶ ವಿದೇಶಗಳಲ್ಲಿ ಪ್ರಚಾರ ಮಾಡಿದ ದೇಶಾಭಿಮಾನಿ ಹರನಾಮ ಸಿಂಗ್

ಹರನಾಮ ಸಿಂಗ್.ರವರು ಅಮೆರಿಕಾಗೆ ಪಯಣಿಸಿದರು. ಅಲ್ಲಿ ಮೊದಲನೇ ವಿಶ್ವ ಯುದ್ಧದ ಸಮಯದಲ್ಲಿ ಬ್ರಿಟನ್ ವಿರುದ್ಧ ಅಲೆಯಲ್ಲಿ ಎದ್ದ ಗದರ್ ಸಂಚಿನಲ್ಲಿ ಅವರು ಭಾಗವಹಿಸಿದರು. ಭಾರತೀಯ ರಾಜಕೀಯ ನಿರಾಶ್ರಿತರನ್ನು ಕರೆದೊಯ್ಯುತ್ತಿದ್ದ ‘ಕೊಮಗಾಟಾ ಮಾರೂ’ ಹಡಗನ್ನು ಕೆನಡಾ ದೇಶ ಭಾರತಕ್ಕೆ ಹಿಂದಿರುಗಲು ಆದೇಶ ನೀಡಿದಾಗ ಹರನಾಮ ಸಿಂಗರವರು ಅಮೆರಿಕಾವನ್ನು ತೊರೆದು ಸಾಯಾಂ (ಇಂದಿನ ಥೈಲ್ಯಾಂಡ್)ನಲ್ಲಿ ಗದರ್ ಬಗ್ಗೆ ಜನರಲ್ಲಿ ಜಾಗೃತಯಾಯನ್ನು ಮೂಡಿಸಿ ಅವರನ್ನು ಒಟ್ಟುಗೂಡಿಸಲು ಪ್ರಯತ್ನಿಸಿದರು.

೩. ಕ್ರಾಂತಿಕಾರ್ಯಕ್ಕಾಗಿ ಗಲ್ಲಿಗೇರಿಸುವ ಶಿಕ್ಷೆ

ಕ್ರಿ.ಶ. ೧೯೧೫ರಲ್ಲಿ ಸಿಂಗಾಪೂರ್.ನಲ್ಲಿ ದೊಡ್ಡ ಪ್ರಮಾಣದ ದಂಗೆಯೊಂದನ್ನು ದಮನಿಸಲಾಯಿತು, ತದನಂತರ ಅದರಲ್ಲಿ ಭಾಗವಹಿಸಿದ/ಪಾತ್ರವಹಿಸಿದವರನ್ನು ಹಿಡಿಯಲು ನಡೆದ ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳಲು ಅನೇಕ ಭಾರತೀಯ ಕ್ರಾಂತಿಕಾರಿ ನೇತಾರರು ಬ್ರಹ್ಮದೆಶಕ್ಕೆ (ಇಂದಿನ ಬರ್ಮಾ ದೇಶ) ತೆರಳಿದರು. ಹೀಗೆ ಹೋಗುತ್ತಿದ್ದ ಹರನಾಮ ಸಿಂಗ್.ರವರನ್ನು ಬ್ರಿಟಿಷರು ಹಿಡಿದರು. ಅವರ ವಿರುದ್ಧ ಖಟ್ಲೆ ನಡೆಸಿ ಅವರಿಗೆ ಮೃತ್ಯುದಂಡವನ್ನು ವಿಧಿಸಲಾಯಿತು. ಹರನಾಮ ಸಿಂಗ್.ರವರು ಇಷ್ಟರಲ್ಲಿ ಕಾರಾಗೃಹದಿಂದ ಪಲಾಯನಗೈದರು! ಆದರೂ ಅವರನ್ನು ಶೋಧಿಸಿದ ಸರಕಾರವು ಅವರನ್ನು ೧೯ ಅಕ್ಟೋಬರ್ ೧೯೧೬ ರಂದು ಗಲ್ಲಿಗೇರಿಸಿತು.  ಹರನಾಮ ಸಿಂಗ್ ಮತ್ತು ಅವರ ಮಿತ್ರರಾದ ಭಾಯಿ ಭಾಗಾಸಿಂಗ್, ಭಾಯಿ ಬಲವಂತ್ ಸಿಂಗ್ ಇವರು ದೇಶಕಾರ್ಯಕ್ಕಾಗಿ ಪ್ರಾಣವನ್ನು ಅರ್ಪಿಸಿ ಅಜರಾಮರರಾಗಿದ್ದಾರೆ.

Leave a Comment