ಮಕ್ಕಳೇ, ನಿಮ್ಮಲ್ಲಿರುವ ರಾಷ್ಟ್ರಪ್ರೇಮವನ್ನು ಹೆಚ್ಚಿಸಿರಿ !

ಮಕ್ಕಳೇ, ಕುಟುಂಬದ ಓರ್ವ ಸದಸ್ಯನಾಗಿ ಚಿಕ್ಕ ಪುಟ್ಟ ಕೆಲಸಗಳನ್ನು ನೀವು ಮಾಡುತ್ತೀರಲ್ಲವೇ? ಅದರಂತೆಯೇ ನೀವು ಯಾವ ದೇಶದಲ್ಲಿರುತ್ತೀರೋ ಆ ದೇಶದ ಪ್ರತಿಯೂ ಬಹಳಷ್ಟು ಕರ್ತವ್ಯಗಳು ನಿಮಗಿವೆ. ಈ ಕರ್ತವ್ಯಗಳನ್ನು ನಿಭಾಯಿಸಬೇಕಿದ್ದರೆ ಮೊದಲಿಗೆ ನಿಮ್ಮಲ್ಲಿರುವ ರಾಷ್ಟ್ರಾಭಿಮಾನವನ್ನು ಹೆಚ್ಚಿಸಬೇಕು.

ಮಕ್ಕಳೇ, ತಮ್ಮಲ್ಲಿ ರಾಷ್ಟ್ರಪ್ರೇಮ ಹಾಗೂ ರಾಷ್ಟ್ರಾಭಿಮಾನವನ್ನು ನಿರ್ಮಾಣವಾಗುವ ಉದ್ದೇಶದಿಂದ ವಿವಿಧ ದೇಶಭಕ್ತಿ ಗೀತೆಗಳನ್ನು ಹಾಡಲು ಕಲಿಯಿರಿ !

ಅ. ದೇಶದ ಸ್ವಾತಂತ್ರ್ಯಕ್ಕಾಗಿ ಗಲ್ಲಿಗೇರಿದ ಕ್ರಾಂತಿಕಾರರ ಬಾಯಲ್ಲಿ ಯಾವಾಗಲೂ ‘ವಂದೇ ಮಾತರಂ‘ ಹಾಡು ಇರುತ್ತಿತ್ತು. ಆದುದರಿಂದ ‘ವಂದೇ ಮಾತರಂ‘ ಹಾಡುವಾಗ ಕ್ರಾಂತಿಕಾರರ ಬಲಿದಾನದ ನೆನಪಾಗುತ್ತದೆ. ಮಕ್ಕಳೆಲ್ಲರೂ ಈ ಗೀತೆಯ ಎಲ್ಲ ಚರಣಗಳನ್ನು ಕಂಠಪಾಠ ಮಾಡಿ ಆ ಗೀತೆಯನ್ನು ಸರಾಗವಾಗಿ ಹಾಡಲು ಕಲಿಯಬೇಕು.

ಆ. ‘ಜಯ ಭಾರತ ಜನನಿಯ ತನುಜಾತೆ', 'ಭಾರತಾಂಬೆ ನನ್ನ ತಾಯಿ' ಮುಂತಾದ ಧ್ವನಿಚಿತ್ರಮುದ್ರಿಕೆ(ಸಿ.ಡಿ) / ಧ್ವನಿಸುರುಳಿಗಳಲ್ಲಿರುವ ದೇಶಭಕ್ತಿ ಗೀತೆಗಳನ್ನು ಕೇಳಬೇಕು ಹಾಗೂ ಕಂಠಪಾಠ ಮಾಡಿ ಹೇಳಬೇಕು.
ಶಾಲೆಯಲ್ಲಿ ಅಥವಾ ಇತರ ಸ್ಥಳಗಳಲ್ಲಿ ಸಾಮೂಹಿಕ ಗೀತೆಯ ಸ್ಫರ್ಧೆಯಿರುವಾಗ ‘ವಂದೇ ಮಾತರಂ‘ ಹಾಗೂ ಇತರ ದೇಶಭಕ್ತಿಗೀತೆಯ ಸಾಮೂಹಿಕ ಗೀತೆಗಳನ್ನು ಸಾದರಪಡಿಸಬಹುದು. ದೇಶಭಕ್ತಿಗೀತೆಯನ್ನು ಒಟ್ಟಾಗಿ ಹೇಳುವುದರಿಂದ ಮಕ್ಕಳಲ್ಲಿ ಸಾಂಘಿಕ ಭಾವ ನಿರ್ಮಾಣವಾಗುತ್ತದೆ. ಇಂತಹ ಅನೇಕ ಗೀತೆಗಳು www.Balsanskar.com ನ ಈ ಕೆಳಗಿನ ಮಾರ್ಗಿಕೆಯಲ್ಲಿ (ಲಿಂಕನಲ್ಲಿ) ನೀಡಲಾಗಿದೆ.
https://hindujagruti.org/hinduism-for-kids-kannada/cid_39.html

ಐತಿಹಾಸಿಕ ಹಾಡು

ಛತ್ರಪತಿ ಶಿವಾಜಿ ಮಹಾರಾಜರೊಂದಿಗೆ ಇತರ ಶೂರರ ಸ್ಫೂರ್ತಿದಾಯಕ ಚರಿತ್ರೆಯ ಮಾಹಿತಿಯು ದೊರೆಯಲು ಹಾಗೂ ಅವರ ಪರಾಕ್ರಮಿ ಇತಿಹಾಸವನ್ನು ಸ್ಮರಿಸಲು ಐತಿಹಾಸಿಕ ಹಾಡುಗಳನ್ನು ಹಾಡಲು ಕಲಿಯಬೇಕು. ಇಂತಹ ಹಾಡುಗಳಿಂದ ಕ್ಷಾತ್ರವೃತ್ತಿಯು ನಿರ್ಮಾಣವಾಗಿ ರಾಷ್ಟ್ರಭಕ್ತಿಯ ಸಂಸ್ಕಾರವೂ ನಿರ್ಮಾಣವಾಗುತ್ತದೆ.

ರಾಷ್ಟ್ರ, ಧರ್ಮ ಹಾಗೂ ಸಾಧನೆಯ ವಿಷಯದ ಕವಿತೆಗಳು

ದೈನಿಕ ಹಾಗೂ ಸಾಪ್ತಾಹಿಕ ‘ಸನಾತನ ಪ್ರಭಾತ‘ದಲ್ಲಿ ರಾಷ್ಟ್ರ, ಧರ್ಮ ವಿಷಯದಲ್ಲಿ ಅನೇಕ ಕವಿತೆಗಳು ಪ್ರಸಾರವಾಗುತ್ತವೆ. ಈ ಕವಿತೆಗಳನ್ನು ಸ್ಪೂರ್ತಿದಾಯಕ ಧಾಟಿಯಲ್ಲಿ ಹಾಡಬೇಕು. ಇದರಿಂದ ಮಕ್ಕಳಿಗೆ ಹಾಗೂ ಇತರರಿಗೆ ರಾಷ್ಟ್ರ ಹಾಗೂ ಧರ್ಮಕ್ಕಾಗಿ ಏನಾದರೂ ಮಾಡಲು ಪ್ರೇರಣೆ ದೊರೆಯುತ್ತದೆ.

ರಾಷ್ಟ್ರಭಕ್ತಿ ಗೀತೆಗಳನ್ನು ಹಾಡುವುದರಿಂದ ಜನಮಾನಸದ ಮೇಲಾಗುವ ಪರಿಣಾಮ

೧. ದೇಶಭಕ್ತಿಗೀತೆ, ಕ್ಷಾತ್ರಗೀತೆ, ಐತಿಹಾಸಿಕ ಗೀತೆಗಳನ್ನು ಕಲಿಯುತ್ತ ಹಾಗೂ ಹಾಡುತ್ತಿರುವಾಗ ಅದರ ಅರ್ಥವನ್ನು ತಿಳಿದುಕೊಳ್ಳಬೇಕು.

೨. ಸ್ಪರ್ಧೆ, ಸ್ನೇಹ ಸಮ್ಮೇಳನ ಹಾಗೂ ಇತರ ಕಾರ್ಯಕ್ರಮಗಳಲ್ಲಿ ದೇಶಭಕ್ತಿಯನ್ನು ಹೆಚ್ಚಿಸುವ ಗೀತೆಗಳನ್ನು ಹೇಳುವುದು, ಅಂತೆಯೇ ಅದಕ್ಕಾಗಿ ಇತರರನ್ನೂ ಪ್ರವೃತ್ತಗೊಳಿಸುವುದು ರಾಷ್ಟ್ರಭಕ್ತಿಯ ಲಕ್ಷಣವೇ ಆಗಿದೆ.

ಮಕ್ಕಳೇ, ಎಲ್ಲ ಹಾಡಿನ ಸ್ಪರ್ಧೆಗಳು, ಶಾಲೆಯ ಸ್ನೇಹಸಮ್ಮೇಳನ ಅಥವಾ ಇತರ ಕಾರ್ಯಕ್ರಮಗಳಲ್ಲಿ ದೇಶಭಕ್ತಿಗೀತೆ ಅಥವಾ ಐತಿಹಾಸಿಕ ಗೀತೆಗಳನ್ನು ಹೇಳಬಹುದು.

ಸಾರ್ವಜನಿಕ ಸ್ಥಳಗಳಲ್ಲಿ ದೇಶಭಕ್ತಿಯನ್ನು ಹೆಚ್ಚಿಸುವ ಗೀತೆಗಳನ್ನು ಸಾದರಪಡಿಸುವುದರಿಂದ ನಿಮ್ಮ ರಾಷ್ಟ್ರಾಭಿಮಾನ ಹಾಗೂ ಧರ್ಮಾಭಿಮಾನವು ಹೆಚ್ಚುತ್ತದೆ ಹಾಗೂ ವೃತ್ತಿಯು ಸಾತ್ವಿಕವಾಗುವುದಲ್ಲದೆ ಸಮಾಜದ ಮುಂದೆ ನೈತಿಕತೆಯಿಲ್ಲದ ನಟ ನಟಿಯರ ಆದರ್ಶವನ್ನಿಡುವುದಕ್ಕಿಂತಲೂ ರಾಷ್ಟ್ರಪುರುಷರ ಹಾಗೂ ಕ್ರಾಂತಿಕಾರರ ಆದರ್ಶವಿಟ್ಟಂತೆ ಆಗುತ್ತದೆ.