ಲಾಲಾ ಲಾಜಪತ್ ರಾಯ್

ಲಾಲಾ ಲಾಜಪತ್ ರಾಯ್.ಯನ್ನು ‘ಪಂಜಾಬ್ ಕೇಸರಿ’ (ಸಿಂಹ) ಎಂದು ಕರೆಯುತ್ತಿದ್ದರು. ಅವರು ಕೇವಲ ಪಂಜಾಬಿನ ಕೇಸರಿ ಆಗಿರದೆ, ಸಂಪೂರ್ಣ ಭಾರತದ ಕೇಸರಿಯಾಗಿದ್ದರು. ಅವರು ಮಾತನಾಡಲು ನಿಂತರೆ, ಅವರ ಸ್ವರವು ಸಿಂಹದ ಗರ್ಜನೆಯಂತೆ ಎಲ್ಲೆಡೆ ಪ್ರತಿಧ್ವನಿಸುತ್ತಿತ್ತು. ಸಿಂಹವು ಗರ್ಜಿಸುವಾಗ ಇಡೀ ಅರಣ್ಯದ ಜೀವಿಗಳು ಹೇಗೆ ನಡುಗುತ್ತೆವೆಯೋ, ಅದೇ ರೀತಿ ಲಾಲಾ ಲಾಜಪತ ರಾಯರ ಮಾತಿನ ಶಕ್ತಿಗೆ ಆಂಗ್ಲ ಸರಕಾರವು ನಡುಗುತ್ತಿತ್ತು.

೧೯೨೮ ರಲ್ಲಿ ಸೈಮನ್ ಕಮಿಷನ್ ಭಾರತಕ್ಕೆ ಬಂತು. ಆಗ ಅಂದಿನ ಕಾಂಗ್ರೆಸ್ ಈ ಕಮಿಷನ್ ಬಹಿಷ್ಕರಿಸಲು ತೀರ್ಮಾನಿಸಿ ಒಂದು ಠರಾವು ಮಂಡಿಸಿತು. ಸೈಮನ್ ಕಮಿಷನ್ ಎಲ್ಲಿ ಹೋದರೂ ಅಲ್ಲಿ ಭಾರತೀಯರು ಸೇರಿ, ಸಭೆಗಳನ್ನು ಮೆರವಣಿಗೆಗಳನ್ನು ನಡೆಸಿ ಕಮಿಷನ್.ಗೆ ಬಹಿಷ್ಕಾರ ಹಾಕುತ್ತಿದ್ದರು. ೩೦ ಅಕ್ಟೋಬರ್ : ಈ ದಿನದಂದು ಕಮಿಷನ್ ಲಾಹೋರಿಗೆ ಬಂತು. ಕಮಿಶನಿನ ಬಹಿಷ್ಕಾರ ಮಾಡಲು ಸಹಸ್ರ ಸಂಖ್ಯೆಯಲ್ಲಿ ಜನರು ರೈಲು ನಿಲ್ದಾಣದಲ್ಲಿ ಕಾದು ಕುಳಿತ್ತಿದ್ದರು. ಈ ಜನಸ್ತೋಮದ ನೇತ್ರತ್ವವನ್ನು ಸ್ವತಃ ಲಾಲಾ ಲಾಜಪತ್ ರಾಯರು ವಹಿಸಿದ್ದರು. ಆಂಗ್ಲರ ಅಶ್ವಾರೂಢ ಕಾವಲು ಪಡೆ ಪ್ರತಿಭಟನಾ ಮೆರವಣಿಗೆಯ ಹಾದಿಯಲ್ಲಿ ಅಡ್ಡವಾಗಿ ನಿಂತಿತ್ತು. ಅವರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಮಾಡತೊಡಗಿದರು. ಕಾವಲು ಪಡೆಯ ಕಪ್ತಾನ ಸ್ಯಾಂಡರ್ಸ್.ನ ಆದೇಶದಂತೆ ಓರ್ವ ಆಂಗ್ಲ ಸಿಪಾಯಿಯು ಲಾಲಾರವರನ್ನು ಅಮಾನುಷವಾಗಿ ಥಳಿಸಿದನು. ಆ ಪ್ರಹಾರಕ್ಕೆ ಲಾಲಾ ಕುಸಿದುಬಿದ್ದರು. ಆಗ ಲಾಲಾರವರು ‘ನನ್ನ ಶರೀರದ ಮೇಲೆ ಬರುತ್ತಿರುವ ಪ್ರತಿಯೊಂದು ಬರೆ, ಆಂಗ್ಲ ಸರಕಾರದ ಶವಪೆಟ್ಟಿಗೆಯಲ್ಲಿ ಇನ್ನೊಂದು ಮೊಳೆಯಾಗಿದೆ!’ ಎಂದು ಉದ್ಗರಿಸಿದರು.

ಹೀಗೆ ಗರ್ಜಿಸುತ್ತಿರುವ ಸಿಂಹವು ಚಿರಂತನ ನಿದ್ರೆಯನ್ನು ಸೇರಿತು. ಭಾರತದ ಸ್ವಾತಂತ್ರ್ಯಕ್ಕಾಗಿ ಲಾಲಾಜಿ ನೀಡಿದ ಬಲಿದಾನವು ಅವಿಸ್ಮರಣೀಯವಾಗಿದೆ! ಇದರಿಂದ ಎಲ್ಲರೂ ಪ್ರೇರಣೆಯನ್ನು ಪಡೆಯೋಣ!

Leave a Comment