ಕ್ರಾಂತಿಕಾರಿ ಜತೀಂದ್ರ ನಾಥ ದಾಸ್

ಆಂಗ್ಲರು ಭಾರತೀಯ ರಾಜಕೀಯ ಬಂದೀಗಳಿಗೆ ನೀಡುತ್ತಿದ್ದ ಯಾತನೆಗೆ ಅಂತ್ಯ ತರಲು ೬೧ ದಿನಗಳ ಕಠೋರ ಉಪವಾಸ ಯಜ್ನವನ್ನು ಮಾಡಿ ತನ್ನನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿದ ಕ್ರಾಂತಿಕಾರಿ ಜತೀಂದ್ರನಾಥ ದಾಸ್!

೧೩ ಸೆಪ್ಟೆಂಬರ್ ! ೧೯೨೧ರ ಈ ದಿನದಂದು, ಮಧ್ಯಾಹ್ನ ೧ ಗಂಟೆಗೆ ೬೧ ದಿನಗಳ ದೀರ್ಘ ಉಪವಾಸದ ನಂತರ ಜತೀಂದ್ರನಾಥ ದಾಸರು ತನ್ನ ದೇಹವನ್ನು ತ್ಯಜಿಸಿದರು. ಅವರನ್ನು ನೇತಾಜಿ ಸುಭಾಷಚಂದ್ರ ಬೋಸ್.ರವರ ಬಲಗೈ ಎಂದು ಕರೆಯುತ್ತಿದ್ದರು. ಆ ದಿನಗಳಲ್ಲಿ ಜತೀಂದ್ರ ನಾಥರು ೩ ಸಲ ಕಾರಗೃಹವಾಸವನ್ನು ಅನುಭವಿಸಿದವರು. ಅಲ್ಲಿಂದ ಬಿಡುಗಡೆಗೊಂಡ ನಂತರ ಅವರು ‘ದಕ್ಷಿಣ ಕಲ್ಕತ್ತಾ ತರುಣ ಸಮಿತಿಯನ್ನು’ ಸ್ಥಾಪಿಸಿದರು. ಪರಿಣಾಮವಾಗಿ ಬೆಂಗಾಲ್ ಆರ್ಡಿನನ್ಸ್ ದಂಡಸಂಹಿತೆಯ ಅನ್ವಯ ಅವರನ್ನು ಪುನಃ ಕಾರಾಗೃಹಕ್ಕೆ ತಳ್ಳಲಾಯಿತು! ಕಾರಾಗೃಹದಲ್ಲಿ ಬಂದೀಗಳಿಗೆ ಕೊಡುತ್ತಿದ್ದ ಪೀಡೆಯನ್ನು ವಿರೋಧಿಸಿ ಅವರು ೩೩ ದಿನಗಳ ಕಾಲ ಅನ್ನವನ್ನು ತ್ಯಜಿಸಿದ್ದರು, ತದನಂತರ ಅವರನ್ನು ಬಿಡುಗಡೆಗೊಳಿಸಲಾಯಿತು. ಆದರೆ ಲಾಹೋರ್ ಸಂಚಿನ ಪ್ರಕರಣದಲ್ಲಿ ಅವರನ್ನು ಸಿಲುಕಿಸಿ ಪುನಃ ಬಂಧಿಸಲಾಯಿತು. ಅಲ್ಲಿ ರಾಜಕೀಯ ಬಂದೀಗಳನ್ನು ನಿಕೃಷ್ಟವಾಗಿ ನೋಡಿಕೊಳ್ಳುತ್ತಿದ್ದರು ಎಂಬ ಕಾರಣಕ್ಕೆ, ಅದನ್ನು ವಿರೋಧಿಸಿ ದಾಸ್ ಉಪವಾಸವನ್ನು ಪ್ರಾರಂಭಿಸಿದರು.

ಅವರನ್ನು ಬಲಾತ್ಕಾರವಾಗಿ ನೀಡುತ್ತಿದ್ದ ಅನ್ನವನ್ನೂಗ್ರಹಿಸಿಕೊಳ್ಳಲಿಲ್ಲ. ಅದರಿಂದ ೭-೮ ಜನ ಅವರ ಮೇಲೆ ಹತ್ತಿ ಕುಳಿತುಕೊಳ್ಳುತ್ತಿದ್ದರು. ವೈದ್ಯರು ಅವರ ಮೂಗಿನಲ್ಲಿ ನಳಿಕೆಯನ್ನು ಹಾಕಿ ಅದರಿಂದ ಹಾಲು ಕುಡಿಸಲು ಪ್ರಯತ್ನಿಸುತ್ತಿದ್ದರು. ಜತೀಂದ್ರನಾಥ್ ಕೆಮ್ಮಿ ಆ ಹಾಲು ಶ್ವಾಸಕೊಶಗಳಲ್ಲಿ ಹೋಗಿ ಅವರು ಅಸ್ವಸ್ಥರಾದರು. ಇದರಿಂದ ಆ ವೈದ್ಯರಿಗೂ ಇನ್ನೊಮ್ಮೆ ಅವರ ಬಾಯಲ್ಲಿ ನಳಿಕೆಯನ್ನು ಹಾಕಿ ಬಲಪೂರ್ವಕ ಹಾಲು ಕುಡಿಸಲು ಆಗಲಿಲ್ಲ. ದಿನಗಳು ಕಳೆದಂತೆ ಜತೀಂದ್ರನಾಥರ ಆರೋಗ್ಯ ಕ್ಷೀಣಿಸುತ್ತಿತ್ತು. ಕೈ ಕಾಲು ನಡುಗುತ್ತಿತ್ತು, ಕಣ್ಣು ರೆಪ್ಪೆಗಳು ಒಂದೇ ಸಮನೆ ಬಡಿಯುತ್ತಿದ್ದವು. ಆಂಗ್ಲರು ಅವರನ್ನು ಹೊರಗಿನ ಚಿಕಿತ್ಸಾಲಯಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಅವರನ್ನು ಸುಳ್ಳು ಜಾಮೀನಿನ ಮೇಲೆ ಬಿಡುಗಡೆಗೊಳಿಸುವ ತಂತ್ರವನ್ನು ಮಾಡಿದರು, ಇದನ್ನು ಅರಿತ ಜತೀಂದ್ರನಾಥಅದಕ್ಕೆ ಒಪ್ಪಲಿಲ್ಲ. ಮಾತ್ರವಲ್ಲದೆ ಅವರೊಟ್ಟಿಗಿದ್ದ ಇತರ ಕ್ರಾಂತಿಕಾರಿಗಳು ‘ಅವರನ್ನು (ಜತೀಂದ್ರನಾಥರನ್ನು) ಕರೆದುಕೊಂಡು ಹೋಗುವುದಾದರೆ ನಮ್ಮ ಹೆಣಗಳನ್ನು ದಾಟಿ ಹೋಗಬೇಕು’ ಎಂದು ಆರಕ್ಷಕರಿಗೆ ಎಚ್ಚರಿಕೆಯನ್ನು ನೀಡಿದ್ದರು. ಈ ಗದ್ದಲದಲ್ಲಿ ಜತೀಂದ್ರನಾಥರು ಮೃತಪಟ್ಟರೆ ಎಂಬ ಭೀತಿಯಿಂದ ಬ್ರಿಟಿಶ್ ಅಧಿಕಾರಿಗಳು ಅಲ್ಲಿಂದ ಕಾಲ್ಕಿತ್ತರು.

ಭಾರತ ಮಾತೆಯ ತ್ಯಾಗೀ ಸುಪುತ್ರ !

ಇತರರು ಕಷ್ಟಗಳನ್ನು ಪಡಬಾರದು ಎಂದು ಪ್ರಾಣ ತ್ಯಜಿಸುವವ ! ರಾಜಕೀಯ ಬಂದೀಗಳ ಮೇಲಾಗುವ ದೌರ್ಜನ್ಯವನ್ನು ತಡೆಯಲು ಸ್ವತಃ ಅಗ್ನಿ ಪರೀಕ್ಷೆಯನ್ನು ಎದುರಿಸಿದ ಜತೀಂದ್ರ ! ಅವರ ಸ್ಮರಣೆ ಭಾರತೀಯರಿಗೆ ಅಖಂಡ ಸ್ಪೂರ್ತಿಯನ್ನು ನೀಡುತ್ತಲಿರುವುದು. ನಮ್ಮ ರಾಷ್ಟ್ರದ ಸ್ವಾತ್ರಂತ್ರ್ಯದ ಹೋಮಕುಂಡದಲ್ಲಿ ಇಂತಹ ಅನೇಕ ನರಶ್ರೇಷ್ಠರ ಆಹುತಿಯಾಗಿದೆ. ಈ ಮಾತನ್ನು ಎಲ್ಲರೂ ವಿಶೇಷವಾಗಿ ತರುಣರು ನೆನಪಿನಲ್ಲಿಟ್ಟುಕೊಳ್ಳಬೇಕ.

(ಆಧಾರ – ‘ಉಗವತಾ ದಿವಸ್’ : ಡಾ. ವಿ. ಮ. ಗೊಗಾಟೆ ಮತ್ತು saneguruji.net)