ಹೊಸ ವರ್ಷವನ್ನು ಡಿಸೆಂಬರ್ ೩೧ರಂದು ಆಚರಿಸದೆ, ಯುಗಾದಿಯಂದು ಆಚರಿಸಿ ಹಿಂದೂ ಸಂಸ್ಕೃತಿಯನ್ನು ಜೋಪಾನ ಮಾಡೋಣ !

ಮಿತ್ರರೇ, ಯಾವುದೇ ಕೃತಿಯನ್ನು ಮಾಡುವ ಮೊದಲು ಅದನ್ನು ಏಕೆ ಮಾಡಬೇಕು? ಅದರ ಹಿಂದಿನ ಶಾಸ್ತ್ರ, ಇತಿಹಾಸ ಏನು ಎಂದು ನಾವು ನೋಡುತ್ತೇವೆ. ಹಾಗಿದ್ದರೆ ಈಗ ಎಲ್ಲರೂ ಡಿಸೆಂಬರ್ ೩೨ರಂದು ಯಾಕೆ ಹೊಸ ವರ್ಷ ಆಚರಿಸುತ್ತಾರೆ? ಇದರ ಹಿಂದಿನ ಶಾಸ್ತ್ರ ಅಥವಾ ಇತಿಹಾಸವೇನು ಎಂದು ನಿಮಗೆ ಅನಿಸಿಲ್ಲವೇ? ಸರಿಯಾದ ಕಾರಣಗಳಿಲ್ಲದಿದ್ದರೂ ನಾವು ಪಾಶ್ಚಾತ್ತ್ಯರ ಅಂಧಾನುಕರಣೆ ಮಾಡುತ್ತಾ ಡಿಸೆಂಬರ್ ೩೧ ರಂದು ಹೊಸವರ್ಷ ಎಂದು ಆಚರಿಸುತ್ತೇವೆ.

ಈಗ ನಾವು ಹೊಸವರ್ಷವನ್ನು ಗ್ರೆಗೋರಿಯನ್ ಕಾಲಾನುಸಾರ ಜನವರಿ ೧ರಂದು ಆಚರಿಸುವ ಮತ್ತು ಹಿಂದೂ ಸಂಸ್ಕೃತಿಗನುಸಾರ ಚೈತ್ರ ಶುಕ್ಲ ಪ್ರತಿಪದೆಗೆ (ಉಗಾದಿಯಂದು) ಆಚರಿಸುವುದರ ವ್ಯತ್ಯಾಸವನ್ನು ನೋಡೋಣ.


ರಾತ್ರಿ ೧೨ಗಂಟೆಗೆ ಡಿಸ್ಕೋ, ಪಬ್ಬುಗಳ ಕರ್ಕಶ ಸದ್ದು, ಕುಡಿದು ಕುಣಿಯುವ ಹುಡುಗರೊಂದಿಗೆ ಹೊಸವರ್ಷವನ್ನು ಆಚರಿಸುವುದು ನಿಮಗೆ ಸರಿ ಅನಿಸುತ್ತದೆಯೇ? ಅದನ್ನು ನೋಡಿ ನಿಜವಾಗಲೂ ಹೊಸವರ್ಷವೆಂದು ನಮಗೆ ಅನಿಸುತ್ತದೆಯೇ? ನೀವೇ ಇದರ ಕುರಿತು ವಿಚಾರ ಮಾಡಿ. ನಮ್ಮ ದಿನದ ಆರಂಭವು ಕತ್ತಲು, ದುಃಖದಿಂದ ಆಗಬೇಕೆಂದು ನಿಮಗೆ ಅನಿಸುತ್ತದೆಯೇ? ಹಿಂದೂ ಸಂಸ್ಕೃತಿಗನುಸಾರ ದಿನದ ಆರಂಭವು ಬೆಳಗ್ಗೆ ಸೂರ್ಯೋದಯದೊಂದಿಗೆ ಆಗುತ್ತದೆ.

ನಮ್ಮ ಹಿಂದೂ ಸಂಸ್ಕೃತಿಯನುಸಾರ ನಾವು ಯುಗಾದಿಯಂದು ಏಕೆ ಹೊಸವರ್ಷ ಆಚರಿಸುತ್ತೇವೆ ಎಂದು ನಿಮಗೆ ತಿಳಿದಿದೆಯೇ? ಇದಕ್ಕೆ ಕಾರಣ ಬ್ರಹ್ಮದೇವರು ಇದೇ ದಿನದಂದು ಈ ಸೃಷ್ಟಿಯನ್ನು ನಿರ್ಮಿಸಿದರು. ಇತಿಹಾಸ ನೋಡಿದರೆ ಶ್ರೀರಾಮಚಂದ್ರನು ಇದೇ ದಿನದಂದು ವಾಲಿಯನ್ನುವಧಿಸಿದನು. ಜನರೂ ಸಹ ಈ ಶುಭದಿನವನ್ನು ಹೊಸವರ್ಷವೆಂದು ಮನೆಯ ಮುಂದೆ ಧ್ವಜವನ್ನು ಹಾರಿಸಿದರು. ಆದ್ದರಿಂದ ನಾವು ಈ ದಿನವನ್ನು ಹೊಸ ವರ್ಷವೆಂದು ಆಚರಿಸುತ್ತೇವೆ.

ಯುಗಾದಿಯಂದು ನಾವು ಬೆಳಗ್ಗೆ ಬೇಗ ಎದ್ದು ಅಭ್ಯಂಗಸ್ನಾನ ಮಾಡಿ ಮನೆಯ ಮುಂದೆ ರಂಗೋಲಿಯನ್ನು ಹಾಕುತ್ತೇವೆ. ಶಾಸ್ತ್ರೀಯ ಬಟ್ಟೆಗಳನ್ನು ಹಾಕಿ ಮನೆಯವರೆಲ್ಲ ಸೇರಿ ಭಜನೆಗಳನ್ನು ಹಾಡುತ್ತೇವೆ. ಶಂಖನಾದವನ್ನು ಮಾಡುತ್ತೇವೆ. ಈಗ ನೀವೆ ಹೇಳಿ ಹೊಸ ವರ್ಷವನ್ನು ನೀವು ಹೇಗೆ ಆಚರಿಸಲು ತಿರ್ಮಾನಿಸಿದ್ದೀರಿ?

ಮಕ್ಕಳೇ, ಹಿಂದೂ ಸಂಸ್ಕೃತಿಗನುಸಾರಆಚರಿಸಲ್ಪಡುವ ಹಬ್ಬಗಳ, ಇತರ ದಿನಗಳಿಗಿಂತ ವಿಭಿನ್ನ ಶಾಸ್ತ್ರೀಯ ಮತ್ತು ವೈಜ್ಞಾನಿಕ ಕಾರಣಗಳಿರುವುದರಿಂದ ನಮಗೆ ಈ ದಿನಗಳಂದು ದುಪ್ಪಟ್ಟು ಆನಂದ ಸಿಗುತ್ತದೆ. ಹಿಂದೂ ಸಂಸ್ಕೃತಿಯು ವಿಶ್ವಕ್ಕೇ ಆನಂದವನ್ನು ನೀಡುವ ಜೀವನಪದ್ಧತಿಯನ್ನು ನೀಡಿದೆ. ಹಾಗಾಗಿ ಇಂತಹ ಮಹಾನ್ ಸಂಸ್ಕೃತಿಯು ನಮಗೆ ತಿಳಿಸಿರುವಂತೆ ಯುಗಾದಿಯಂದೇ ಹೊಸವರ್ಷ ಆಚರಿಸೋಣ.

ನಾವೂ ಸಹ ಯುಗಾದಿಯಂದೇ ನಮ್ಮ ಸ್ನೇಹಿತರಿಗೆ ಹೊಸ ವರ್ಷದ ಶುಭಾಷಯವನ್ನು ನೀಡಿ, ಹಿಂದೂ ಸಂಸ್ಕೃತಿಯ ರಕ್ಷಣೆಯನ್ನು ಮಾಡೋಣ.

– ಶ್ರೀ. ರಾಜೇಂದ್ರ ಪಾವಸಕರ (ಗುರೂಜೀ), ಪನವೇಲ