ವಿಠೋಬನ ಆರತಿ

ಯುಗೇ ಅಠ್ಠಾವೀಸ ವಿಟೇವರೀ ಉಭಾ|
ವಾಮಾಂಗೀ ರಖುಮಾಈ ದಿಸೇ ದಿವ್ಯ ಶೋಭಾ|
ಪುಂಡಲಿಕಾಚೇ ಭೇಟೀ ಪರಬ್ರಹ್ಮ ಆಲೇ ಗಾ|
ಚರಣೀ ವಾಹೇ ಭೀಮಾ ಉದ್ಧರೀ ಜಗಾ||೧||

ಜಯ ದೇವ ಜಯ ದೇವ ಜಯ ಪಾಂಡುರಂಗಾ|
ರಖುಮಾಈವಲ್ಲಭಾ, ರಾಈಚ್ಯಾ ವಲ್ಲಭಾ ಪಾವೇ
ಜಯ ದೇವ ಜಯ ದೇವ||….||

ತುಳಸೀಮಾಳಾ ಗಳಾ ಕರ ಠೇವುನೀ ಕಟೀ|
ಕಾಸೇ ಪೀತಾಂಬರ ಕಸ್ತುರೀ ಲಲ್ಲಾಟೀ|
ದೇವ ಸುರವರ ನಿತ್ಯಾ ಯೇತೀ ಭೇಟೀ|
ಗರುಡ ಹನುಮಂತ ಪುಢೇ ಉಭೇ ರಹಾತೀ||೨||

ಧನ್ಯ ವೇಣೂನಾದ ಅನುಕ್ಷೇತ್ರಪಾಳಾ|
ಸುವರ್ಣಾಚೀ ಕಮಳೇ ವನಮಾಳಾ ಗಳಾ|
ರಾಈ ರಖುಮಾಬಾಈ ರಾಣೀಯಾ ಸಕಳಾ|
ಓವಾಳಿತೀ ರಾಜಾ ವಿಠೋಬಾ ಸಾವಳಾ||೩||

ಓವಾಳೂ ಆರತ್ಯಾ ಕುರ್ವಂಡ್ಯಾ ಯೇತೀ|
ಚಂದ್ರಭಾಗೇಮಾಜೀ ಸೋಡುನಿಯಾ ದೇತೀ|
ದಿಂಡ್ಯಾ ಪತಾಕಾ ವೈಷ್ಣವ ನಾಚತೀ|
ಪಂಢರೀಚಾ ಮಹಿಮಾ ವರ್ಣಾವಾ ಕಿತೀ||೪||

ಆಷಾಢೀ ಕಾರ್ತಿಕೀ ಭಕ್ತಜನ ಯೇತೀ|
ಚಂದ್ರಭಾಗೇಮಧ್ಯೇ ಸ್ನಾನ ಜೇ ಕರಿತೀ|
ದರ್ಶನಹೇಳಾಮಾತ್ರೆ ತಯಾ ಹೋಯ ಮುಕ್ತಿ|
ಕೇಶವಾಸೀ ನಾಮದೇವ ಭಾವೇ ಓವಾಳಿತೀ||೫||
– ಸಂತ ನಾಮದೇವ
ಆಧಾರ
: ಸನಾತನ ನಿರ್ಮಿತ ಕಿರುಗ್ರಂಥ "ಆರತಿಸಂಗ್ರಹ".

ವಿಠ್ಠಲ ಇಪ್ಪತ್ತೆಂಟು ಯುಗಗಳಿಂದ ಪಂಢರಪುರದಲ್ಲಿ ಇಟ್ಟಿಗೆಯ ಮೇಲೆ ನಿಂತಿದ್ದಾನೆ| (ಟಿಪ್ಪಣಿ ೩) (ಅವನ) ವಾಮಾಂಗೀ (ಎಡಬದಿಗೆ) ರಖುಮಾಈ (ರುಕ್ಮಿಣೀ) (ನಿಂತಿದ್ದು) ದಿಸೇ ದಿವ್ಯ ಶೋಭಾ (ಅವನ ರೂಪವು ಅತ್ಯಂತ ಶೋಭಾಯಮಾನವಾಗಿದೆ)| ಪರಬ್ರಹ್ಮ (ವಿಠ್ಠಲ) ಪುಂಡಲೀಕನಿಗೋಸ್ಕರ (ಪುಂಡಲೀಕನ ನೆವದಿಂದ ಎಲ್ಲ ಭಕ್ತರಿಗಾಗಿ) ಪಂಢರಿಗೆ ಬಂದು ನೆಲೆಸಿದ್ದಾರೆ. ಅವನ ಚರಣದಲ್ಲಿ ಭೀಮಾ (ಚಂದ್ರಭಾಗಾ) ಹರಿಯುತ್ತಿದ್ದು ಅವಳೂ ಭಕ್ತಜನರನ್ನು ಉದ್ಧರಿಸುತ್ತಿದ್ದಾಳೆ||೧||

ಹೇ ದೇವಾ ಪಾಂಡುರಂಗಾ, ನಿನಗೆ ಜಯಜಯಕಾರ! ಹೇ ರಖುಮಾಈ ಮತ್ತು ರಾಈ ಇವರ ವಲ್ಲಭಾ (ಪತಿ), (ಹೇ) ಜಿವಲಗಾ (ಪ್ರಾಣಕ್ಕಿಂತ ಪ್ರಿಯನಾಗಿರುವ) (ನನಗೆ) ……… (ಪ್ರಸನ್ನನಾಗು, ಎಂದು ನಿನ್ನ ಚರಣಗಳಲ್ಲಿ ಪ್ರಾರ್ಥನೆ!) (ದೇವರ ಪತ್ನಿ ಅಂದರೆ ಅವರ ಶಕ್ತಿ. ಇವು ತಾರಕ ಮತ್ತು ಮಾರಕ ಹೀಗೆ ಎರಡು ಪ್ರಕಾರದ್ದಾಗಿರುತ್ತವೆ. ವಿಠ್ಠಲನು ಉತ್ಪತ್ತಿ, ಸ್ಥಿತಿ ಮತ್ತು ಲಯ ಇವುಗಳ ಪೈಕಿ ಸ್ಥಿತಿಯ ದೇವತೆಯಾಗಿರುವುದರಿಂದ ಅವನ ಇಬ್ಬರೂ ಶಕ್ತಿ, ಅಂದರೆ ಪತ್ನಿಯರು, ಉತ್ಪತ್ತಿ ಮತ್ತು ಸ್ಥಿತಿ ಇವುಗಳೊಂದಿಗೆ ಸಂಬಂಧಿಸಿವೆ)||….||

ವಿಠ್ಠಲನು ತುಳಸಿಯ ಮಾಲೆಯನ್ನು ಕೊರಳಯಲ್ಲಿ ಹಾಕಿಕೊಂಡಿದ್ದಾನೆ ಮತ್ತು ಎರಡೂ ಕರ (ಕೈ) ಸೊಂಟದ ಮೇಲೆ ಇಟ್ಟಿದ್ದಾನೆ| ಕಚ್ಚೆ (ಸೊಂಟಕ್ಕೆ) ಪಿತಾಂಬರವನ್ನು ಧರಿಸಿದ್ದು ಹಣೆಯ ಮೇಲೆ ಕಸ್ತೂರಿಯ ತಿಲಕವನ್ನು ಹಚ್ಚಲಾಗಿದೆ| (ವಿಠ್ಠಲನ ರೂಪದಲ್ಲಿರುವ ಪರಬ್ರಹ್ಮನ) ಭೇಟಿಗಾಗಿ ದೇವ ಸುರವರ (ಶ್ರೇಷ್ಠ ದೇವದೇವತೆಗಳು) ಪ್ರತಿನಿತ್ಯ ಬರುತ್ತಿರುತ್ತಾರೆ| ಗರುಡ ಮತ್ತು ಹನುಮಂತ ಯಾವಾಗಲೂ ಕೈಜೋಡಿಸಿ ಅವರಮುಂದೆ ನಿಂತಿರುತ್ತಾರೆ||೨||

ಹೇ ಅನುಕ್ಷೇತ್ರಪಾಳಾ (ಪಂಢರಪೂರ ಕ್ಷೇತ್ರವನ್ನು ಪಾಲಿಸುವ ವಿಠ್ಠಲಾ), ಧನ್ಯ ವೇಣೂನಾದ (ನಿನ್ನ ವೇಣುನಾದದಿಂದ (ಕೊಳಲಿನ ಸ್ವರದಿಂದ) ಎಲ್ಲ ಭಕ್ತಗಣಗಳು ಧನ್ಯ ಧನ್ಯರಾಗುತ್ತಾರೆ.)| ವಿಠ್ಠಲನ ಕೊರಳಲ್ಲಿ ಸುವರ್ಣದ ಕಮಲ ಮತ್ತು ವನಮಾಲೆ (ತುಳಸಿ ಮತ್ತು ಹೂವುಗಳ ಮಾಲೆ) ಗಳಿವೆ| ರಾಈ ರಖುಮಾಬಾಈ ರಾಣಿಯ …….. (ರಾಈ ಮತ್ತು ರಖುಮಾಈ ಇವರೊಂದಿಗೆ ಇತರ ಎಲ್ಲ ರಾಣಿಯರು)| (ಹೀಗೆ ಈ ಭಕ್ತರ ಹೃದಯಸಿಂಹಾಸನದ ಮೇಲೆ ರಾಜ್ಯಮಾಡುವ) ……….. ವಿಠ್ಠಲರಾಜನಿಗೆ ಆರತಿಯನ್ನು ಬೆಳಗುತ್ತಾರೆ||೩||

ಓವಾಳೂ ಆರತ್ಯಾ (ಪಾಂಡುರಂಗನಿಗೆ ಆರತಿಯನ್ನು ಮಾಡುವ ಸಲುವಾಗಿ) ಕುರ್ವಾಡ್ಯಾ ಯೇತಿ (ಭಕ್ತಗಣರು ಕುರ್ವಾಡ್ಯಾ, ಅಂದರೆ ದೀಪವನ್ನು ಹಚ್ಚಿದ ಸಣ್ಣ ಸಣ್ಣ ದೀಪಗಳನ್ನು ಹಿಡಿದು ಬರುತ್ತಾರೆ). ಆರತಿಯನ್ನು ಬೆಳಗಿ ಚಂದ್ರಭಾಗದಲ್ಲಿ ಬಿಟ್ಟು ಹೋಗುತ್ತಾರೆ. ದಿಂಡ್ಯಾ ಪತಾಕಾ ವೈಷ್ಣವ ನಾಚತಿ (ಪತಾಕೆ, (ಧ್ವಜವನ್ನು) ಹಿಡಿದ ವೈಷ್ಣವ (ವಿಠ್ಠಲಭಕ್ತ) ದೇಹದ ಪರಿವೆಯನ್ನು ಬಿಟ್ಟು ನರ್ತಿಸುತ್ತಾನೆ). ಯಾ ಪಂಡರೀಚಾ ಮಹಿಮಾ ಕಿತಿ ಮ್ಹಣೂನ ವರ್ಣಾವಾ? (ಇದನ್ನು ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯ).||೪||

(ಹೇ ಪಾಂಡುರಂಗಾ,) ಪ್ರತೀವರ್ಷ ಆಷಾಢ ಮತ್ತು ಕಾರ್ತಿಕೀ ಏಕಾದಶಿಯಂದು ನಿನ್ನ ದರ್ಶನಕ್ಕಾಗಿ ಪಂಢರಪುರಕ್ಕೆ ಬಂದು ಚಂದ್ರಭಾಗಾದಲ್ಲಿ ಭಕ್ತಿಭಾವದಿಂದ ಸ್ನಾನ ಮಾಡುವವರಿಗೆ, ದರ್ಶನಮಾತ್ರದಿಂದಲೇ (ಕೇವಲ ನಿನ್ನ ಕೃಪಾಕಟಾಕ್ಷದಿಂದ) ಅವರಿಗೆ ಮುಕ್ತಿ ದೊರೆಯುತ್ತದೆ. (ಅಷ್ಟು ಅದಕ್ಕೆ ಸಾಮರ್ಥ್ಯವಿದೆ, ಮಹಿಮೆಯಿದೆ!) ಹೇ ಕೇಶವಾ, ನಿನಗೆ ನಾಮದೇವನು ಭಾವಪೂರ್ಣವಾಗಿ (ಆರತಿ) ಬೆಳಗುತ್ತಿದ್ದೇವೆ. (ನಿನ್ನ ಕೃಪೆ ಇರಲಿ, ಎಂದು ನಿನ್ನ ಚರಣಗಳಲ್ಲಿ ಪ್ರಾರ್ಥನೆ!)||೫||

ಟಿಪ್ಪಣಿ – ಸತ್ಯ (ಕೃತ), ತ್ರೇತಾ, ದ್ವಾಪರ ಮತ್ತು ಕಲಿಯುಗಗಳ ೧೨ ಸಾವಿರ ದಿವ್ಯವರ್ಷಗಳನ್ನು ಪರಿಗಣಿಸಲಾಗಿದೆ. ಇದಕ್ಕೇ ಚತುರ್ಯುಗ, ಮಹಾಯುಗ ಅಥವಾ ದಿವ್ಯಯುಗ ಎಂಬ ಸಂಜ್ಞೆಯಿದೆ. ಹೀಗೆ ಒಂದು ಸಾವಿರ ಚತುರ್ಯುಗವೆಂದರೆ ಬ್ರಹ್ಮದೇವನ ಒಂದು ಯುಗವಾಗಿದೆ. ಅದನ್ನು ಕಲ್ಪವೆಂದೂ ಹೇಳುತ್ತಾರೆ. ಆ ಕಾಲಾವಧಿಯಲ್ಲಿ ಒಟ್ಟು ಹದಿನಾಲ್ಕು ಮನುಗಳಿರುತ್ತವೆ; ಅಂದರೆ ಸುಮಾರು ೭೧ ಚತುರ್ಯುಗಗಳು ಪ್ರತಿಯೊಂದು ಮನುವಿನ ಕಾಲಖಂಡವಾಗಿರುತ್ತದೆ. ಅದಕ್ಕೆ ಮನ್ವಂತರವೆಂಬ ಹೆಸರಿದೆ. ಬ್ರಹ್ಮದೇವನ ಆಯುಷ್ಯವು ೧೦೦ ಬ್ರಾಹ್ಮವರ್ಷಗಳಷ್ಟಿವೆ. ಅದರಲ್ಲಿನ ೫೦ ಬ್ರಾಹ್ಮವರ್ಷಗಳು ಮುಗಿದು ೫೧ ನೇ ವರ್ಷದಲ್ಲಿನ ಮೊದಲನೇ ಶ್ವೇತವಾರಾಹ ಹೆಸರಿನ ಕಲ್ಪವು ಸದ್ಯ ನಡೆಯುತ್ತಿದೆ. ಅದರ ಪ್ರಾರಂಭದಲ್ಲಿ ಸೃಷ್ಟಿಯು ಪುನಃ ಉತ್ಪನ್ನವಾಯಿತು. ಅಂದಿನಿಂದ ಇಂದಿನವರೆಗೆ ಆರು ಮನ್ವಂತರಗಳು ಪೂರ್ಣವಾಗಿದ್ದು, ಈಗ ಏಳನೇ ವೈವಸ್ವತ ಮನ್ವಂತರ ನಡೆಯುತ್ತಿದೆ. ವೈವಸ್ವತ ಮನ್ವಂತರದಿಂದ ಒಟ್ಟು ಯುಗಗಳನ್ನು ಕೇಳಿದರೆ, ಈಗಿನ ಕಲಿಯುಗವು ೨೮ನೇ ಯುಗವಾಗಿದೆ. ವಿಠ್ಠಲನು ಇಪ್ಪತ್ತೆಂಟು ಯುಗಗಳಿಂದ ಇದ್ದಾನೆ, ಅಂದರೆ ವೈವಸ್ವತ ಮನುವಿನಿಂದ ಇದ್ದಾನೆ.