ದತ್ತನ ಆರತಿ

ತ್ರಿಗುಣಾತ್ಮಕ ತ್ರೈಮೂರ್ತಿ ದತ್ತ ಹಾ ಜಾಣಾ|
ತ್ರಿಗುಣೀ ಅವತಾರ ತ್ರೈಲೋಕ್ಯರಾಣಾ|
ನೇತಿ ನೇತಿ ಶಬ್ದ ನ ಯೇ ಅನುಮಾನಾ|
ಸುರವರ-ಮುನಿಜನ-ಯೋಗೀ-ಸಮಾಧಿ ನ ಯೆ ಧ್ಯಾನಾ||೧||

ಜಯ ದೇವ ಜಯ ದೇವ ಜಯ ಶ್ರೀಗುರುದತ್ತ|
ಆರತಿ ಓವಾಳಿತಾ ಹರಲೀ ಭವಚಿಂತಾ||…||

ಸಬಾಹ್ಯ ಅಭ್ಯಂತರೀ ತೂ ಏಕ ದತ್ತ|
ಅಭಾಗ್ಯಾಸೀ ಕೈಂಚೀ ಕಳೇಲ ಹೀ ಮಾತ|
ಪರಾಹೀ ಪರತಲೀ ತೇಥೇ ಕೈಂಚಾ ಹೇತ|
ಜನ್ಮಮರಣಾಚಾ ಪುರಲಾಸೇ ಅಂತ||೨||

ದತ್ತ ಯೇಊನಿಯಾ ಉಭಾ ಠಾಕಲಾ|
ಸದ್ಭಾವೇ ಸಾಷ್ಟಾಂಗೇ ಪ್ರಣಿಪಾತ ಕೇಲಾ|
ಪ್ರಸನ್ನ ಹೋಊನೀ ಆಶೀರ್ವಾದ ದಿಧಲಾ|
ಜನ್ಮಮರಣಾಚಾ ಫೇರಾ ಚುಕವಿಲಾ||೩||

ದತ್ತ ದತ್ತ ಐಸೆ ಲಾಗಲೇ ಧ್ಯಾನ|
ಹಾರಪಲೆ ಮನ ಝಾಲೇ ಉನ್ಮನ|
ಮೀತೂಪಣಾಚೀ ಝಾಲೀ ಬೋಳವಣ|
ಏಕಾ ಜನಾರ್ದನೀ ಶ್ರೀದತ್ತಧ್ಯಾನ||೪||
-ಸಂತ ಏಕನಾಥ
ಆಧಾರ
: ಸನಾತನ ನಿರ್ಮಿತ ಕಿರುಗ್ರಂಥ "ಆರತಿಸಂಗ್ರಹ".

ತ್ರಿಗುಣಾತ್ಮಕ ತ್ರೈಮೂರ್ತಿ ದತ್ತ ಹಾ ಜಾಣಾ (ದತ್ತನು (ಕಾರ್ಯಾನುರೂಪ) ತ್ರಿಗುಣಾತ್ಮಕನಾಗಿದ್ದಾನೆ, ತ್ರೈಮೂರ್ತಿಯಾಗಿದ್ದಾನೆ (ಬ್ರಹ್ಮಾ, ವಿಷ್ಣು ಮತ್ತು ಮಹೇಶ ಈ ಮೂವರಿಂದ ನಿರ್ಮಾಣವಾಗಿದ್ದಾನೆ) ಇದನ್ನು ಅರಿತುಕೊಳ್ಳಿರಿ)| (ಟಿಪ್ಪಣಿ ೨) (ಈ) ತ್ರಿಗುಣೀ ಅವತಾರ ತ್ರೈಲೋಕ್ಯರಾಣಾ (ತ್ರೈಲೋಕ್ಯದ ನಾಥ, ಸ್ವಾಮೀ ಆಗಿದ್ದಾನೆ.) ನೇತಿ ನೇತಿ ಶಬ್ದ ನ ಯೇ ಅನುಮಾನಾ (ವೇದಗಳು ಇವರ ಸ್ವರೂಪವನ್ನು ವರ್ಣಿಸಲು ಪ್ರಯತ್ನಿಸಿದವು; ಆದರೆ ಅವರಿಗೆ ಯಾವುದೇ ಅನುಮಾನ ಮಾಡಲು ಬರದಿದ್ದುದರಿಂದ ‘ನೇತಿ, ನೇತಿ’ ಅಂದರೆ ‘ಹೀಗೆ ಇಲ್ಲ, ಹೀಗೆ (ಯೂ) ಇಲ್ಲ’, ಎಂದಷ್ಟೇ ಹೇಳಲು ಸಾಧ್ಯವಾಯಿತು)| ಸುರವರ (ಶ್ರೇಷ್ಠ ದೇವ), ಮುನಿಜನ (ಮುನಿಜನ) (ಮತ್ತು) ಯೋಗೀ, ಸಮಾಧಿ ನ ಯೇ ಧ್ಯಾನಾ (ಇವರಿಗೆ ಸಮಾಧಿ ಅವಸ್ಥೆಯಲ್ಲಿಯೂ ಇವನ ರೂಪವು ಧ್ಯಾನದಲ್ಲಿ ಬರಲು ಸಾಧ್ಯವಿಲ್ಲ)||೧||

ಹೇ ಶ್ರೀಗುರುದೇವದತ್ತಾ, ನಿನಗೆ ಜಯಜಯಕಾರ! (ದತ್ತ ಗುರುತತ್ತ್ವದ ಕಾರ್ಯ ಮಾಡುತ್ತಿರುವುದರಿಂದ ಅವನಿಗೆ ‘ಶ್ರೀಗುರುದತ್ತ’, ‘ಶ್ರೀ ಗುರುದೇವದತ್ತ’ ಎಂದು ಸಂಬೋಧಿಸಲಾಗಿದೆ.)| ನಿನಗೆ ಆರತಿಯನ್ನು ಬೆಳಗುತ್ತಲೇ ನನ್ನ ಭವಚಿಂತೆ (ಸಂಸಾರಚಿಂತೆ, ಜನ್ಮಮರಣರೂಪಿ ಚಕ್ರದ ಬಗೆಗಿನ ಭಯ) ಹರಲೀ (ಸಂಪೂರ್ಣವಾಗಿ ನಷ್ಟವಾಯಿತು. ನಿನ್ನ ಕೃಪೆಯಿಂದ ನಾನು ಇವುಗಳಿಂದ ಮುಕ್ತನಾದೆ)||….||

ಹೇ ದತ್ತಾ, ಸಬಾಹ್ಯ ಅಭ್ಯಂತರೀ (ಒಳಗೆ-ಹೊರಗೆ ಸಂಪೂರ್ಣವಾಗಿ) ತೂ ಏಕ ದತ್ತ (ಕೇವಲ ೧೦೦ ಶೇ. ಗುರುತತ್ತ್ವರೂಪ, ಈಶ್ವರತತ್ತ್ವವಿರುವವನಾಗಿದ್ದೀ. ಇದಕ್ಕೆ ಶಾಸ್ತ್ರದಲ್ಲಿ ‘ಅಖಂಡೈಕರಸ (ಅಖಂಡ-ಏಕರಸ)’ ಎಂಬ ಸಂಜ್ಞೆ ಇದೆ.)| ಅಭಾಗ್ಯಾಸೀ (ಅಭಾಗ್ಯ, ದುರ್ದೈವೀ ಜನರಿಗೆ) ಕೈಂಚೀ ಕಳೇಲ ಹೀ ಮಾತ (ಈ ನಿನ್ನ ಮಾಹಾತ್ಮೆಯು ಹೇಗೆ ತಿಳಿಯುತ್ತದೆ?)| (ನಿನ್ನ ಸ್ವರೂಪವನ್ನು ವರ್ಣಿಸಲು ಹೋದ) ಪರಾಹೀ ಪರತಲೀ (ಪರಾವಾಣಿಯೂ ಪುನಃ ತಿರುಗಿತು), ತೇಥೇ ಕೈಂಚಾ ಹೇತ (ಅದರಲ್ಲಿ ಯಾವ ಉದ್ದೇಶ ಇರಬೇಕು? ದತ್ತನ ಸ್ವರೂಪವು ತುರ್ಯಾವಸ್ಥೆಯ ಆಚಗೆ ಇರುವುದರಿಂದ ಪರಾವಾಣಿಯೂ ಅಲ್ಲಿ ತಲುಪಲು ಸಾಧ್ಯವಿಲ್ಲ. ಇದರಿಂದ ಅದು ಏನೂ ಮಾತನಾಡದೇ ಪುನಃ ತಿರುಗಿತು) ಜನ್ಮಮರಣಾಚಾ ಪುರಲಾಸೇ ಅಂತ (ನಿನ್ನ ಸ್ವರೂಪವು ನಿತ್ಯ ಮತ್ತು ಅನಾದಿ-ಅನಂತವಾಗಿದೆ. ಅಲ್ಲಿ ಜನ್ಮಮರಣ ಶಬ್ದವೇ ಮುಗಿಯುತ್ತದೆ.)

( ಏಕನಾಥ ಮಹಾರಾಜರು ಹೇಳುತ್ತಾರೆ,) ನಾನು ಈ ಆರತಿಯನ್ನು ಹಾಡಿ ಗುಣಗಾನ ಮಾಡುತ್ತಿರುವಾಗ ದತ್ತ ಬಂದು ನನ್ನ ಮುಂದೆ ನಿಂತಿದ್ದ (ಪ್ರಕಟನಾಗಿದ್ದ)| ನಾನು ಅವನಿಗೆ ಸದ್ಭಾವದಿಂದ (ಭಾವಪೂರ್ವಕವಾಗಿ) ಸಾಷ್ಟಾಂಗ ನಮಸ್ಕಾರ ಮಾಡಿದೆ (ಅವನಿಗೆ ಕಾಯಾ-ವಾಚಾ-ಮನಸ್ಸಿನಿಂದ ಸಂಪೂರ್ಣವಾಗಿ ಶರಣು ಹೋದೆನು.)| ಅವನು ಪ್ರಸನ್ನನಾಗಿ ನನಗೆ ಆಶೀರ್ವದಿಸಿದನು (ನೀಡಿದನು)| (ಮತ್ತು) ಜನನಮರಣದ ಚಕ್ರದಿಂದ ತಪ್ಪಿಸಿದನು (ಜನ್ಮಮರಣದ ಚಕ್ರದಿಂದ ನನ್ನನ್ನು ಬಿಡುಗಡೆಗೊಳಿಸಿದನು. ನನಗೆ ಮೋಕ್ಷ ನೀಡಿದನು.)||೩||

ನನಗೆ (ದತ್ತನ ಕೃಪೆಯಿಂದ) ದತ್ತನ ಧ್ಯಾನ ತಗಲಿತು| ಆದ್ದರಿಂದ ನನ್ನ ಮನಸ್ಸು ನಷ್ಟವಾಯಿತು ಮತ್ತು ನನಗೆ ಉನ್ಮನೀ ಅವಸ್ಥೆ ಪ್ರಾಪ್ತವಾಯಿತು. (ಇದು ಜಾಗೃತಿ, ಸ್ವಪ್ನ, ಸುಷುಪ್ತೀ ಮತ್ತು ತುರ್ಯಾ ಈ ನಾಲ್ಕು ಅವಸ್ಥೆಗಳ ಆಚೆಗಿನ ಅವಸ್ಥೆಯಾಗಿದೆ. ಇದರಲ್ಲಿ ಸಾಧಕನು ಬ್ರಹ್ಮನ ಜಾಗದಲ್ಲಿ ಪೂರ್ಣವಾಗಿ ಲೀನನಾಗಿ ಮಾಯೆಯ ತೊಂದರೆಯಿಂದ ಮುಕ್ತನಾಗುತ್ತಾನೆ.)| ಮೀತೂಪಣಾಚೀ ಝಾಲೀ ಬೋಳವಣ (ಈ ಅದ್ವೈತಾವಸ್ಥೆಯು ಪ್ರಾಪ್ತವಾಗಿದ್ದರಿಂದ ನಾನು-ನೀನು ಎಂಬ ಬೇಧವು ಮುಗಿಯಿತು.)| ಏಕಾ ಜನಾರ್ದನೀ (ಏಕನಾಥ ಮಹಾರಾಜರು ಹೇಳುತ್ತಾರೆ, ಸದ್ಗುರು ಜನಾರ್ದನ ಸ್ವಾಮಿಯವರ ಕೃಪೆಯಿಂದ) ನಾನು ಶ್ರೀ ದತ್ತನ ಧ್ಯಾನವನ್ನು ಮಾಡುತ್ತಿದ್ದೇನೆ (ನಾನು ದತ್ತಮಯನಾಗಿದ್ದೇನೆ.)||೪||

ಟಿಪ್ಪಣಿ – ಶ್ರೀ ದತ್ತಾತ್ರೇಯರ ಜನ್ಮವು ಬ್ರಹ್ಮಾ, ವಿಷ್ಣು ಮತ್ತು ಮಹೇಶ ಇವರ ಅಂಶದಿಂದ ಆಗಿದೆ. ಈ ಮೂರು ದೇವರು ಉತ್ಪತ್ತಿ, ಸ್ಥಿತಿ ಮತ್ತು ಲಯದೊಂದಿಗೆ ಸಂಬಂಧಿಸಿರುವುದರಿಂದ, ಈ ದೇವರು ವಾಸ್ತವವಾಗಿ ತ್ರಿಗುಣಾತೀತರಾಗಿದ್ದರೂ ಕಾರ್ಯಕ್ಕನುಸಾರ ಗುಣಾಶ್ರಯೀಯಾಗಿದ್ದಾರೆ, ಅಂದರೆ ಅನುಕ್ರಮವಾಗಿ ರಜ, ಸತ್ತ್ವ ಮತ್ತು ತಮ ಈ ತ್ರಿಗುಣಗಳಿಗೆ ಅವರು ಆಶ್ರಯ ಕೊಡುತ್ತಾರೆ.