ಶ್ರೀ ದುರ್ಗಾದೇವಿಯ ಆರತಿ


ದುರ್ಗೇ ದುರ್ಘಟ ಭಾರೀ ತುಜವಿಣ ಸಂಸಾರೀ|

ಅನಾಥನಾಥೇ ಅಂಬೇ ಕರುಣಾ ವಿಸ್ತಾರೀ|
ವಾರೀ ವಾರೀ ಜನ್ಮಮರಣಾತೇ ವಾರೀ|
ಹಾರೀ ಪಡಲೋ ಆತಾ ಸಂಕಟ ನಿವಾರೀ||||

ಜಯ ದೇವೀ ಜಯ ದೇವೀ ಮಹಿಷಾಸುರಮಥನೀ|
ಸುರವರಈಶ್ವರ-ವರದೇ ತಾರಕ ಸಂಜೀವನೀ|
ಜಯ ದೇವಿ ಜಯ ದೇವಿ||…..||

ತ್ರಿಭುವನಭುವನೀ ಪಹಾತಾ ತುಜಐಸೀ ನಾಹೀ|
ಚಾರೀ ಶ್ರಮಲೇ ಪರಂತು ನ ಬೋಲವೇ ಕಾಹೀ|
ಸಾಹೀ ವಿವಾದ ಕರಿತಾ ಪಡಲೇ ಪ್ರವಾಹೀ|
ತೇ ತೂ ಭಕ್ತಾಲಾಗೀ ಪಾವಸೀ ಲವಲಾಹೀ||೨||

ಪ್ರಸನ್ನವದನೇ ಪ್ರಸನ್ನ ಹೋಸೀ ನಿಜದಾಸಾಂ|
ಕ್ಲೇಶಾಂಪಾಸುನೀ ಸೋಡವೀ ತೋಡೀ ಭವಪಾಶಾ|
ಅಂಬೇ ತುಝವಾಚೂನ ಕೋಣ ಪುರವೀಲ ಆಶಾ|
ನರಹರಿ ತಲ್ಲೀನ ಝಾಲಾ ಪದಪಂಕಜಲೇಶಾ ||೩||
– ಸಂತ ನರಹರಿ
ಆಧಾರ
: ಸನಾತನ ನಿರ್ಮಿತ ಕಿರುಗ್ರಂಥ "ಆರತಿಸಂಗ್ರಹ".

ಹೇ ದುರ್ಗಾದೇವೀ, ದುರ್ಘಟ ಭಾರೀ (ದಾಟಿ ಹೋಗಲು ಕಠಿಣ) ಇಂತಹ ಈ ಸಂಸಾರದಲ್ಲಿ ನಿನ್ನ ವಿನಃ (ನಿನ್ನನ್ನು ಬಿಟ್ಟು), ಹೇ ಅನಾಥನಾಥೇ (ಅನಾಥರ ನಾಥೇ) ಅಮ್ಮ, (ನಮ್ಮ ಮೇಲೆ) ಕರುಣಾ ವಿಸ್ತಾರೀ (ತಮ್ಮ ಕರುಣೆಯ (ಕೃಪೆಯ) ಛತ್ರವನ್ನು ಯಾರು ಹರಡುತ್ತಾರೆ? ನೀನೊಬ್ಬಳೇ ಆಗಿರುವಿ.) (ನಮಗೆ) ಜನ್ಮಮರಣಾತೇ (ಜನ್ಮ ಮೃತ್ಯುವಿನ ಚಕ್ರದಿಂದ) ವಾರೀ (ಬಿಡಿಸು)| ಹಾರೀ ಪಡಲೋ (ಸೋತಿದ್ದೇವೆ, ನಾವು ನಿನಗೆ ಶರಣು ಬಂದಿದ್ದೇವೆ). ಆತಾ (ನಮ್ಮ ಮೇಲಿನ ಈ) ಸಂಕಟ (ನೀನು ನಿನ್ನ ಕೃಪೆಯಿಂದ) ನಿವಾರೀ (ನಿವಾರಿಸು).||೧||

ಹೇ ಮಹಿಷಾಸುರಮಥನೀ (ಮಹಿಷಾಸುರನನ್ನು ನಾಶಗೊಳಿಸುವ) ದೇವೀ, ನಿನಗೆ ಜಯಜಯಕಾರ! ಸುರವರಈಶ್ವರ-ವರದೇ (ದೇವಶ್ರೇಷ್ಠರಿಗೂ ವರವನ್ನು (ಅಭಯ) ನೀಡುವ), ತಾರಕ (ಅವರನ್ನು ರಕ್ಷಿಸುವ), ಸಂಜೀವನೀ (ಅವರಿಗೆ ಸಂಜೀವನಿಯನ್ನು ನೀಡುವ ಮಾತೆ), ನಿನಗೆ ಜಯಜಯಕಾರ! (ದೇವಿಯು ಈಶ್ವರನ ಶಕ್ತಿಯಾಗಿರುವುದರಿಂದ ಅವಳೇ ಕಾರ್ಯ ಮಾಡುತ್ತಿರುತ್ತಾಳೆ. ಈ ಶಿವ ಮತ್ತು ಶಕ್ತಿಯ ಸಂದರ್ಭದಲ್ಲಿ ಅನಾದೀಸಿದ್ಧವಾಗಿದೆ. ತಮ್ಮ ಕೈಗಳು ತಮ್ಮನ್ನು ರಕ್ಷಿಸುತ್ತವೆ, ಅದರಂತೆ ಶಕ್ತಿಯು ದೇವರನ್ನು ರಕ್ಷಿಸುತ್ತಾಳೆ.)||….||

(ಹೇ ಮಾತೇ,) ತ್ರಿಭುವನಭುವನೀ ಪಹಾತಾ (ಸ್ವರ್ಗ, ಮೃತ್ಯುಲೋಕ ಮತ್ತು ಪಾತಾಳ ಈ ಮೂರೂ ತ್ರಿಭುವನಗಳಲ್ಲಿ ನೋಡಿದರೆ) ತುಜಐಸೀ ನಾಹೀ (ನಿನ್ನಂತೆಯೇ ಇನ್ನೊಬ್ಬರಿಲ್ಲ. ನೀನು ಏಕಮೇವಾದ್ವಿತೀಯಳಾಗಿರುವಿ.)| ಚಾರೀ (ನಾಲ್ಕೂ ವೇದಗಳು) ಶ್ರಮಲೇ (ನಿನ್ನ ಸ್ವರೂಪವನ್ನು ವರ್ಣಿಸಲು ಪ್ರಯತ್ನಿಸಿ ಸೋತವು), ಪರಂತು ನ ಬೋಲವೇ ಕಾಹೀ (ಅವರಿಗೆ ಅದು ಸಾಧ್ಯವಾಗಲಿಲ್ಲ). (ಒಂದು ವಸ್ತುವನ್ನು ವರ್ಣಿಸುವಾಗ ಅದೇ ಥರದ ಇನ್ನೊಂದು ವಿಷಯದ ಉದಾಹರಣೆಯನ್ನು ನೀಡಲಾಗುತ್ತದೆ, ಆದರೆ ಈಶ್ವರನು ಏಕಮೇವಾದ್ವಿತೀಯನಾಗಿರುವುದರಿಂದ, ಅವನಂತೆ ಇತರ ಯಾರೂ ಇಲ್ಲದಿರುವುದರಿಂದ ವೇದಗಳು ‘ನೇತಿ, ನೇತಿ’ ಎಂದು ನಿಂತಿವೆ. ನೇತಿ ಅಂದರೆ ‘ನ ಇತಿ’, ಅದರೆ ‘ಹೀಗೆ, ಇಷ್ಟೇ ಅಲ್ಲ’.)| ಸಾಹೀ (ಸಂಖ್ಯಾಶಾಸ್ತ್ರ, ನ್ಯಾಯ, ವೈಶೇಷಿಕ, ಯೋಗ, ಪೂರ್ವಮೀಮಾಂಸೆ ಮತ್ತು ಉತ್ತರಮೀಮಾಂಸೆ ಈ ಆರು ದರ್ಶನಗಳು) ವಿವಾದ ಕರತಾ ಪಡಲೇ ಪ್ರವಾಹೀ (ಈ ವಿವಾದದ ಪ್ರವಾಹದಲ್ಲಿ ಹರಿದು ಹೋದವು, ಅಂದರೆ ಅವರಿಗೂ ನಿನ್ನ ಸ್ವರೂಪವನ್ನು ವರ್ಣಿಸಲು ಸಾಧ್ಯವಾಗಲಿಲ್ಲ)| ತೇ ತೂ (ಆದರೆ ಹೀಗೆ ನೀನು) ಭಕ್ತಾಲಾಗೀ ಪಾವಸೀ ಲವಲಾಹೀ (ತನ್ನ ಭಕ್ತರಿಗೆ ಮಾತ್ರ ತತ್‌ಕ್ಷಣ ಒಲಿಯುತ್ತೀ). (ಈಶ್ವರನು ಕೇವಲ ಅನುಭೂತಿಯ ವಿಷಯವಾಗಿದ್ದಾನೆ. ಅನುಭೂತಿಯಿಂದಲೇ ಅವನ ನಿಜಸ್ವರೂಪವು ತಿಳಿಯುತ್ತದೆ. ಭಕ್ತರಿಗೆ ಈಶ್ವರನ ಸಾಕ್ಷಾತ್ಕಾರವಾಗುತ್ತಿರುವುದರಿಂದ ಅವರಿಗೆ ಈಶ್ವರನ ನಿಜಸ್ವರೂಪದ ಜ್ಞಾನವಾಗುತ್ತದೆ.||೨||

(ಹೇ) ಪ್ರಸನ್ನವದನೇ (ಪ್ರಸನ್ನಮುಖವನ್ನು ಹೊಂದಿರುವ) (ಮಾತೇ), ಪ್ರಸನ್ನ ಹೋಸೀ ನಿಜದಾಸಾಂ (ನೀನು ನಿನ್ನ ದಾಸರಿಗೆ ಪ್ರಸನ್ನಳಾಗುತ್ತೀ.)| ಕ್ಲೇಶಾಂಪಾಸುನೀ ಸೋಡವೀ (ಅವರನ್ನು ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಹೀಗೆ ತ್ರಿವಿಧ ಕ್ಲೇಶಗಳಿಂದ ಬಿಡಿಸುತ್ತೀ), ತೋಡೀ ಭವಪಾಶಾ (ಈ ಸಂಸಾರದ ಪಾಶದಿಂದ, ಜನ್ಮಮರಣದ ಚಕ್ರದಿಂದ ಅವರನ್ನು ಮುಕ್ತಗೊಳಿಸುತ್ತೀ.)| ಅಂಬೇ (ಹೇ ಅಮ್ಮಾ), ತುಝವಾಚೂನ ಕೋಣ ಪುರವೀಲ ಆಶಾ (ನಿನ್ನನ್ನು ಬಿಟ್ಟು ನಮ್ಮ ಆಸೆಯನ್ನು ಯಾರು ಈಡೇರಿಸುತ್ತಾರೆ? (ಪೂರ್ಣಗೊಳಿಸುತ್ತಾರೆ?))| ಪದಪಂಕಜಲೇಶ (ನಿನ್ನ ಚರಣಕಮಲಗಳ (ಕೇವಲ) ಅಂಶಮಾತ್ರ ಕೃಪೆಯಿಂದ) ನರಹರಿ (ಆರತಿಯನ್ನು ಬರೆಯುವ ಸಂತರು) ತಲ್ಲೀನ ಝಾಲಾ (ನಿನ್ನ ಭಕ್ತಿಯಲ್ಲಿ ತಲ್ಲೀನ, ಮಗ್ನನಾಗಿದ್ದಾನೆ.)||೩||