ಶ್ರೀ ರಾಮನ ಆರತಿ


ಉತ್ಕಟ ಸಾಧುನೀ ಶಿಳಾ ಸೇತೂ ಬಾಂಧೋನಿ|

ಲಿಂಗದೇಹ ಲಂಕಾಪುರೀ ವಿಧ್ವಂಸೂನೀ|
ಕಾಮಕ್ರೋಧಾದಿಕ ರಾಕ್ಷಸ ಮರ್ದೂನೀ|
ದೇಹ ಅಹಂಭಾವ ರಾವಣ ನಿವಟೋನೀ||೧||

ಜಯ ದೇವ ಜಯ ದೇವ ನಿಜಬೋಧಾ ರಾಮಾ|
ಪರಮಾರ್ಥೇ ಆರತೀ, ಸದ್ಭಾವೇ ಆರತೀ,|
ಪರಿಪೂರ್ಣಕಾಮಾ||….||

ಪ್ರಥಮ ಸೀತಾಶೋಧಾ ಹನುಮಂತ ಗೇಲಾ|
ಲಂಕಾ ದಹನ ಕರುನೀ ಅಖಯಾ ಮಾರಿಲಾ|
ಮಾರಿಲಾ ಜಂಬುಮಾಳೀ ಭುವನೀ ತ್ರಹಾಟಿಲಾ|
ಆನಂದಾಚೀ ಗುಢೀ ಘೇವುನಿಯಾ ಆಲಾ ||೨||

ನಿಜಬಳೇ ನಿಜ ಶಕ್ತಿ ಸೋಡವಿಲೀ ಸೀತಾ|
ಮ್ಹಣುನೀ ಯೇಣೇ ಝಾಲೇ ಅಯೋಧ್ಯೇ ರಘುನಾಥಾ|

ಆನಂದೇ ಓಸಂಡೇ ವೈರಾಗ್ಯ ಭರತಾ|
ಆರತಿ ಘೇವುನೀ ಆಲೀ ಕೌಸಲ್ಯಾಮಾತಾ ||೩||

ಅನಾಹತಧ್ವನಿ ಗರ್ಜತೀ ಅಪಾರ|
ಅಠರಾ ಪದ್ಮೇ ವಾನರ ಕರಿತೀ ಭುಭುಃಕಾರ|
ಅಯೋಧ್ಯೇಸೀ ಆಲೇ ದಶರಥಕುಮಾರ|
ನಗರೀಂ ಹೋತ ಆಹೇ ಆನಂದ ಥೋರ ||೪||

ಸಹಜಸಿಂಹಾಸನೀ ರಾಜಾ ರಘುವೀರ|
ಸೋಹಂಭಾವೇ ತಯಾ ಪೂಜಾ ಉಪಚಾರ|
ಸಹಜಾಂಚೀ ಆರತೀ ವಾದ್ಯಾಂಚಾ ಗಜರ|
ಮಾಧವದಾಸ ಸ್ವಾಮೀ ಆಠವ ನಾ ವಿಸರ ||೫||
– ಸಂತ ಮಾಧವದಾಸ

ಪಾಠಭೇದ
: ಕೆಲವು ಕಡೆಗಳಲ್ಲಿ ಶ್ರೀರಾಮನ ಆರತಿಯಲ್ಲಿ ಪ್ರಥಮವಾಗಿ ಮುಂದಿನ ಪಂಕ್ತಿ ಮತ್ತು ನಂತರ ಉಳಿದ ಪಂಕ್ತಿಗಳನ್ನು ಹೇಳಲಾಗುತ್ತದೆ.
ಸ್ವಸ್ವರೂಪೋನ್ಮುಖಬುದ್ಧಿ ವೈದೇಹೀ ನೇಲೀ|

ದೇಹಾತ್ಮಕಾಭಿಮಾನೇ ದಶಗ್ರೀವೇ ಹರಿಲೀ|
ಶಬ್ದರೂಪ ಮಾರುತೀನೇ ಸಚ್ಛುದ್ಧಿ ಆಣಿಲೀ|
ತವ ಚರಣಾಂಬುಜೀ ಯೇಊನ ವಾರ್ತಾ ಶೃತ ಕೇಲೀ|
ಜಯ ದೇವ ಜಯ ದೇವ ನಿಜಬೋಧಾ ರಾಮಾ||೧||

ಆಧಾರ : ಸನಾತನ ನಿರ್ಮಿತ ಕಿರುಗ್ರಂಥ "ಆರತಿಸಂಗ್ರಹ".

(ಮೊದಲನೇ ಪಂಕ್ತಿಯು ಆತ್ಮಾರಾಮನ ರೂಪಕವಾಗಿದೆ.) ಉತ್ಕಟ ಸಾಧುನೀ ಶಿಳಾ ಸೇತೂ ಬಾಂಧೋನೀ (ನಾಮಜಪರೂಪಿ ಶಿಲೆಯ ಸೇತುವೆಯನ್ನು ಕಟ್ಟಿ, ಅಂದರೆ ಉತ್ಕಟತೆಯಿಂದ, ಭಾವಪೂರ್ಣವಾಗಿ ಅಖಂಡ ನಾಮಜಪ ಮಾಡಿ)| ಲಿಂಗದೇಹ ಲಂಕಾಪುರೀ (ಲಿಂಗದೇಹವೆಂಬ ಲಂಕಾನಗರವನ್ನು) ವಿಧ್ವಂಸೂನೀ (ವಿಧ್ವಂಸಗೊಳಿಸಿ)| ಕಾಮ-ಕ್ರೋಧಾಧಿಕ (ಕಾಮ-ಕ್ರೋಧ ಮೊದಲಾದ ಷಡ್ರಿಪುರೂಪಿ) ರಾಕ್ಷಸ ಮರ್ದೂನೀ (ರಾಕ್ಷಸರನ್ನು ನಾಶಗೊಳಿಸಿ)| ದೇಹ ಅಹಂಭಾವ (ನಾವು ಬ್ರಹ್ಮನಿಂದ ಬೇರೆಯಾಗಿದ್ದೇವೆ, ದೇಹವೇ ನಿಜವಾದದ್ದು, ಎಂದು ನಮಗೆ ಅವಿದ್ಯೆಯಿಂದಾಗಿ ಅನಿಸುತ್ತದೆ. ಇದಕ್ಕೆ ಅಹಂಭಾವ ಎಂಬ ಸಂಜ್ಞೆ ಇದೆ.) ರಾವಣ ನಿವಟೋನೀ (ಈ ಅಹಂಭಾವರೂಪಿ ರಾವಣನ ನಾಶವಾಗುತ್ತದೆ. ಅವಿದ್ಯೆಯು ಇಲ್ಲದಂತಾಗುತ್ತದೆ ಮತ್ತು ಸಾಧಕನಿಗೆ ನಿಜ (ಆತ್ಮ) ಬೋಧ (ಆತ್ಮಜ್ಞಾನ) ವಾಗುತ್ತದೆ. ಪರಮಾತ್ಮನಿಗೆ ಆತ್ಮಾರಾಮ ಎಂದೂ ಹೇಳುತ್ತಾರೆ.)||೧||

(ಹೇ) ನಿಜಬೋಧಾ ರಾಮಾ (ಆತ್ಮಬೋಧರೂಪ ಆತ್ಮಾರಾಮಾ), ನಿನಗೆ ಜಯಜಯಕಾರ!| ಪರಮಾರ್ಥೇ ಆರತೀ, ಸದ್ಭಾವೇ ಆರತೀ (ನಾನು ಪರಮಾರ್ಥದ ಪ್ರಾಪ್ತಿಗಾಗಿ, ನಿನಗೆ ಭಾವಪೂರ್ಣವಾಗಿ ಆರತಿಯನ್ನು ಬೆಳಗುತ್ತೇನೆ), ಪರಿಪೂರ್ಣಕಾಮಾ (ನೀನು ಎಲ್ಲ ಕಾಮನೆಗಳನ್ನು ಪೂರ್ಣಗೊಳಿಸುವವನಾಗಿದ್ದೀ. ಆತ್ಮಜ್ಞಾನವಾದರೆ ಎಲ್ಲ ಕಾಮನೆಗಳೂ ನಷ್ಟವಾಗುತ್ತದೆ.!)||….||

(ಮುಂದಿನ ಎರಡು ಪಂಕ್ತಿಗಳು ದಶರಥಪುತ್ರನಾದ ರಾಮನ ವರ್ಣನೆಯಾಗಿದೆ.)
ಪ್ರಥಮ ಸೀತಾಶೋಧಾ ಹನುಮಂತ ಗೇಲಾ (ಸೀತೆಯನ್ನು ಹುಡುಕಲು (ಸೀತೆಯ ಶೋಧಕ್ಕಾಗಿ) ಮೊಟ್ಟಮೊದಲು ಮಾರುತಿಯು ಸಮುದ್ರವನ್ನು ದಾಟಿ (ಲಂಕೆಗೆ) ಹೋದನು.) ಲಂಕಾ ದಹನ ಕರೂನೀ ಅಖಯಾ ಮಾರಿಲಾ (ಅಶೋಕವನವನ್ನು ವಿಧ್ವಂಸಗೊಳಿಸಿದ್ದರಿಂದ ರಾವಣನು ಮಾರುತಿಯನ್ನು ಹಿಡಿಯುವುದಕ್ಕಾಗಿ ತನ್ನ ಮಗನಾದ ಅಖಯಾನನ್ನು ಕಳಿಸಿದನ, ಆದರೆ ಮಾರುತಿಯು ಅವನನ್ನು ವಧಿಸಿದನು. ಕೊನೆಗೆ ರಾವಣನು ಇಂದ್ರಜಿತನ ಮುಖಾಂತರ ಮಾರುತಿಯನ್ನು ಹಿಡಿದು ಸೇವಕರ ಮೂಲಕ ಅವನ ಬಾಲಕ್ಕೆ ಬೆಂಕೆ ಹಚ್ಚಿಸಿದನು. ಮಾರುತಿಯು ರಾವಣನನ್ನು ದಂಡಿಸಲು ಉರಿಯುತ್ತಿರುವ ಬಾಲದಿಂದ ಲಂಕೆಯನ್ನೇ ಸುಟ್ಟುಬಿಟ್ಟನು.)| ಮಾರಿಲಾ ಜಂಬುಮಾಳೀ (ಅನಂತರ ಸೈನ್ಯದೊಂದಿಗೆ ನಡೆದು ಬರುವ ಪ್ರಧಾನಪುತ್ರನಾದ ಜಂಬುಮಾಳಿಯನ್ನೂ ಅವನು ವಧಿಸಿದನು ಮತ್ತು) ಭುವನೀ ತ್ರಾಹಾಟಿಲಾ (ಭುವನದಲ್ಲಿ, ಆಕಾಶದಲ್ಲಿ ಸಂಚರಿಸಿ ಈ ವಿಧ್ವಂಸವನ್ನು ಸ್ವತಃ ನೋಡಿದನು)| (ಅನಂತರ ಅವನು ಬಾಲವನ್ನು ನೀರಿನಲ್ಲಿ ಮುಳುಗಿಸಿ ನಂದಿಸಿದನು ಮತ್ತು) ಆನಂದಾಚೀ ಗುಢೀ (ಸೀತೆಯನ್ನು ಹುಡುಕಿದ ಆನಂದದ ವಾರ್ತೆ) ಘೇಊನಿಯಾ ಆಲಾ (ಹೇಳುವುದಕ್ಕಾಗಿ ಅವನು ಪ್ರಭು ರಾಮಚಂದ್ರನ ಕಡೆಗೆ ಬಂದನು)||೨||

(ರಾವಣನನ್ನು ಅವನ ಸೇನಾಸಮೇತವಾಗಿ ವಧಿಸಿ ರಾಮನು) ನಿಜಬಳೇ (ಸ್ವಬಲದ ಮೇಲೆ), ನಿಜಶಕ್ತಿ (ತನ್ನ ಶಕ್ತಿ, ಅರ್ಧಾಂಗಿ) ಸೀತಾ (ರಾವಣನ ಬಂಧನದಿಂದ ಬಿಡಿಸಿದನು) ಸೋಡವಿಲೀ| ಮ್ಹಣುನೀ ಯೇಣೇ ಝಾಲೇ ಅಯೋಧ್ಯೇ ರಘುನಾಥಾ (ಆದ್ದರಿಂದ ರಘುಕುಲದ ನಾಥನಿಗೆ (ರಾಮನಿಗೆ) ಅಯೋಧ್ಯೆಗೆ ಹಿಂದಿರುಗಲು ಸಹಾಯವಾಯಿತು)| ವೈರಾಗ್ಯ ಭರತಾ (ರಾವಣನನ್ನು ನಾಶಗೊಳಿಸುವುದಕ್ಕಾಗಿಯೇ ಪ್ರಭು ರಾಮನ ಅವತಾರವಾಗಿತ್ತು. ಜೀವಿತಕಾರ್ಯವನ್ನು ಪೂರ್ಣಗೊಳಿಸಿದ್ದರಿಂದ ಅವನಿಗೆ ವೈರಾಗ್ಯ ಬಂದಿತು.) ಆನಂದೇ ಓಸಂಡೇ (ಅಂದರೆ ಅವನು ಮೂಲಸ್ವರೂಪಕ್ಕೆ ಪ್ರಾಪ್ತನಾದ.)| ಆರತಿ ಘೇಊನೀ ಆಲೀ ಕೌಸಲ್ಯಾಮಾತಾ (ರಾವಣವಧೆಯ ನಂತರ ರಾಮ, ಲಕ್ಷ್ಮಣ ಮತ್ತು ಸೀತೆ ವನವಾಸದ ಕಾಲಾವಧಿಯನ್ನು ಪೂರ್ಣಗೊಳಿಸಿ ಅಯೋಧ್ಯೆಗೆ ಬಂದ ನಂತರ ಅವರನ್ನು ಸ್ವಾಗತಿಸಲು ಕೌಸಲ್ಯಾಮಾತೆ ಆರತಿಯನ್ನು ತಂದಳು.)||೩||

ಅನಾಹತಧ್ವನಿ ಗರ್ಜತೀ ಅಪಾರ (ರಾಮನ ವಿಜಯದ ನಂತರ ಎಲ್ಲ ಚರಾಚರಸೃಷ್ಟಿ ಮತ್ತು ದೇವದೇವತೆಗಳು ಆನಂದಿತರಾದರು. ವಿಜಯದ ಪ್ರೀತ್ಯರ್ಥ ಮೇಘನಾದ (ಮೋಡಗಳ ಅಬ್ಬರ), ಹಾಗೆಯೇ ಘಂಟೆ, ಶಂಖ, ನಗಾರಿ ಮುಂತಾದ ವಾದ್ಯಗಳ ಅಪಾರವಾದ ನಾದವು ಆಗಲಾರಂಭಿಸಿತು. ಮೇಘನಾದದಂತಹ ನಾದವು ಸ್ವರ್ಗದ ದೇವತೆಗಳಿಂದ ಆಗುತ್ತಿದ್ದುದರಿಂದ ಅಲ್ಲಿ ಅನಾಹತಧ್ವನಿ ಎಂದು ಹೇಳಲಾಗಿದೆ.)| ಅಠರಾ ಪದ್ಮೇ (೧೮೦ ಲಕ್ಷ ಕೋಟಿ) ವಾನರರು ಆನಂದದಿಂದ ಭುಭುಃಕಾರ ಮಾಡಲಾರಂಭಿಸಿದರು. (ಈ ಎಲ್ಲ ವಾನರರೆಂದರೆ ರಾಮನಿಗೆ ಅವನ ಈಶ್ವರೀ ಕಾರ್ಯದಲ್ಲಿ ಸಹಾಯ ಮಾಡಲು ಅವತರಿಸಿದ ದೇವರೇ ಆಗಿದ್ದರು.)| ಅಯೋಧ್ಯೇಸೀ ಆಲೇ ದಶರಥಕುಮಾರ (ರಾವಣನ ಮೇಲೆ ವಿಜಯ ಸಾಧಿಸಿ ಮತ್ತು ವನವಾಸವನ್ನು ಪೂರ್ಣಗೊಳಿಸಿ ದಶರಥಕುಮಾರರಾದ ರಾಮ-ಲಕ್ಷ್ಮಣರು ಮತ್ತು ಸೀತಾಸಹಿತವಾಗಿ ಅಯೋಧ್ಯೆಗೆ ಪುನಃ ಬಂದರು.)| ಆದ್ದರಿಂದ ಎಲ್ಲ ನಾಗರಿಕರಿಗೆ ಅಪಾರವಾದ ಆನಂದವಾಯಿತು||೪||

ಸಹಜ ಸಿಂಹಾಸನೀ ರಾಜಾ ರಘುವೀರ (ಪರಬ್ರಹ್ಮನೊಂದಿಗೆ ಪೂರ್ಣವಾಗಿ ಏಕರೂಪವಾಗಿದ್ದೂ, ದೇಹಪ್ರಾರಬ್ಧಾನುಸಾರವಾಗಿ ಎಲ್ಲ ಕ್ರಿಯೆಗಳನ್ನು ಮಾಡುವುದಕ್ಕೆ ‘ಸಹಜಾವಸ್ಥೆ’ ಎಂದು ಹೇಳುತ್ತಾರೆ. ರಾಜಾ ರಘುವೀರನು ಇದೇ ಸಹಜಾವಸ್ಥೆಯಲ್ಲಿ ಸಿಂಹಾಸನದ ಮೇಲೆ ವಿರಾಜಮಾನನಾಗಿದ್ದಾನೆ. ರಾಮನ ಈಶ್ವರತ್ವವು ಯಾವಾಗಲೂ ಹೇಗೆ ಸ್ಥಿರವಾಗಿತ್ತೆಂಬುದು ಸೀತೆಯ ಶೋಧಪ್ರಸಂಗದಲ್ಲಿ ಪಾರ್ವತೀ ಮಾತೆಯು ತೆಗೆದುಕೊಂಡ ಪರೀಕ್ಷೆಯಿಂದ ಕಂಡು ಬರುತ್ತದೆ.) ಸೋಹಂಭಾವೇ ತಯಾ ಪೂಜಾ ಉಪಚಾರ (ಶಿವೋ ಭೂತ್ವಾ ಶಿವಂ ಯಜೇತ್| ಅಂದರೆ ಶಿವಸ್ವರೂಪವಾಗಿ ಶಿವನನ್ನು ಪೂಜಿಸಬೇಕು ಈ ರೀತಿಯಲ್ಲಿ ಪ್ರಭು ಶ್ರೀರಾಮಚಂದ್ರನ ಸೋಹಂಭಾವದಿಂದ (ಅವನು ಮತ್ತು ತಾನು ಒಂದೇ ಆಗಿದ್ದೇವೆ, ಎಂಬ ಭಾವದಿಂದ) ಪೂಜಿಸಬೇಕು| ಸಹಜಾಂಚೀ ಆರತೀ ವಾದ್ಯಾಂಚಾ ಗಜರ (ಸಹಜಾವಸ್ಥೆಯಲ್ಲಿರುವ ಪ್ರಭು ಶ್ರೀರಾಮಚಂದ್ರನಿಗೆ ವಸಿಷ್ಠ ಮೊದಲಾದ ಮುನಿಗಳು ಆರತಿ ಮಾಡಿದರು ಮತ್ತು ಮಂಗಳವಾದ್ಯಗಳನ್ನು ಮೊಳಗಿಸಿದರು.)| ಮಾಧವದಾಸ ಸ್ವಾಮೀ ಆಠವ ನಾ ವಿಸರ (ಮಾಧವದಾಸರು ಹೇಳುತ್ತಾರೆ, ಹೇ ಸ್ವಾಮಿ, ತಾವು ನನ್ನನ್ನು ಎಂದಿಗೂ ಮರೆಯದಿರಿ(ನನ್ನ ಮೇಲೆ ತಮ್ಮ ಕೃಪೆಯು ನಿರಂತರವಾಗಿರಲಿ), ಇದೇ ತಮ್ಮ ಚರಣಗಳಲ್ಲಿ ಪ್ರಾರ್ಥನೆ!)||೫||