ಹನುಮಂತನ ಆರತಿ

ಸತ್ರಾಣೇ ಉಡ್ಡಾಣೇ ಹುಂಕಾರ ವದನೀಂ|
ಕರಿ ಡಳಮಳ ಭೂಮಂಡಳ ಸಿಂಧೂಜಳ ಗಗನೀಂ|
ಕಡಾಡಿಲೇಂ ಬ್ರಹ್ಮಾಂಡ ಧೋಕಾ ತ್ರಿಭುವನೀಂ|
ಸುರವರ, ನರ, ನಿಶಾಚರ ತ್ಯಾ ಝಾಲ್ಯಾ ಪಳಣೀ||೧||

ಜಯ ದೇವ ಜಯ ದೇವ ಜಯ ಜಯ ಹನುಮಂತಾ|
ತುಮಚೇನಿ ಪ್ರತಾಪೇ ನ ಭಿಯೇ ಕೃತಾಂತಾ ||……||

ದುಮದುಮಿಲೇ ಪಾತಾಳ ಉಠಲಾ ಪಡಶಬ್ದ|
ಧಗಧಗಿಲಾ ಧರಣೀಧರ ಮಾನಿಲಾ ಖೇದ|
ಕಡಾಡಿಲೇ ಪರ್ವತ ಉಡಗಣ ಉಚ್ಛೇದ|
ರಾಮೀಂ ರಾಮದಾಸಾ ಶಕ್ತೀಚಾ ಶೋಧ ||೨||
– ಸಮರ್ಥ ರಾಮದಾಸಸ್ವಾಮಿ

ಪಾಠಭೇದ: ಸುರವರ, ನಿಶಾಚರ
ಆಧಾರ : ಸನಾತನ ನಿರ್ಮಿತ ಕಿರುಗ್ರಂಥ "ಆರತಿಸಂಗ್ರಹ".

(ಯಾವಾಗ ಹನುಮಂತನು) ಸತ್ರಾಣೇ (ಆವೇಶದಿಂದ) ಉಡ್ಡಾಣೇ (ಹಾರಿ) ಹುಂಕಾರ ವದನೀಂ (ಮುಖದಿಂದ ದೊಡ್ಡದಾಗಿ ಹೂಂಕಾರ (‘ಹುಂ’ ಎಂಬ ಶಬ್ದ) ಮಾಡುತ್ತಾ ಶತ್ರುವಿನ ಮೇಲೇರಿ ಹೋಗುತ್ತಾನೆಯೋ)| ಕರಿ ಡಳಮಳ ಭೂಮಂಡಳ (ಆಗ ಅವನ ಬಿರುಗಾಳಿಯಂತಹ ವೇಗದಿಂದಾಗಿ ಇಡೀ ಭೂಮಂಡಲ (ಧರಣಿ) ಹೊಯ್ದಾಡತೊಡಗುತ್ತದೆ), ಸಿಂಧೂಜಳ ಗಗನೀಂ (ಸಮುದ್ರದ ನೀರು ಗಗನದವರೆಗೆ ಸಿಡಿಯುತ್ತದೆ.)| ಕಡಾಡಿಲೇಂ ಬ್ರಹ್ಮಾಂಡ (ಸಂಪೂರ್ಣ ಬ್ರಹ್ಮಾಂಡ ನಡುಗುತ್ತದೆ ಮತ್ತು) ಧೋಕಾ ತ್ರಿಭುವನೀಂ (ಸ್ವರ್ಗ, ಮೃತ್ಯುಲೋಕ ಮತ್ತು ಪಾತಾಳ ಈ ತ್ರಿಭುವನಗಳಿಗೆ ಗಂಡಾತರ ಉಂಟಾಗುತ್ತದೆ)| ಸುರವರ, ನರ, ನಿಶಾಚರ (ಇವುಗಳಿಂದಾಗಿ ಅಲ್ಲಿರುವ ದೇವಗಣ, ಮನುಷ್ಯ ಮತ್ತು ನಿಶಾಚರ) ತ್ಯಾ ಝಾಲ್ಯಾ ಪಳಣೀ ( ಅವರು ಭಯದಿಂದ ಹೌಹಾರಿ ಓಡಿಬಿಡುತ್ತಾರೆ.)||೧||

ಹೇ ದೇವಾ ಹನುಮಂತಾ, ನಿನಗೆ ಜಯಜಯಕಾರ! ತುಮಚೇನಿ ಪ್ರತಾಪೇ (ನಿಮ್ಮ ಈ ಪ್ರತಾಪದಿಂದಾಗಿ, ನಿಮ್ಮ ಕೃಪೆಯು ಇರುವಾಗ) ನ ಭಿಯೇ ಕೃತಾಂತಾ (ಕೃತಾಂತಕ್ಕೂ (ಪ್ರತ್ಯಕ್ಷ ಮೃತ್ಯುವಿಗೂ) ಹೆದರಬೇಕಾಗಿಲ್ಲ. ನಾವು, ನಿನ್ನ ಭಕ್ತರು ಪೂರ್ಣ ನಿರ್ಭಯರಾಗುತ್ತೇವೆ!)||….||

ದುಮದುಮಿಲೇ ಪಾತಾಳ (ಹನುಮಂತನ ಈ ಹುಂಕಾರವು ಸಂಪೂರ್ಣ ಪಾತಾಳದಲ್ಲಿ ನಿನಾದವಾಯಿತು ಮತ್ತು) ಉಠಲಾ ಪಡಶಬ್ದ (ಅದರ ಪ್ರತಿಧ್ವನಿಯು ಎಲ್ಲೆಡೆ ಹರಡಿತು)| ಧಗಧಗಿಲಾ ಧರಣೀಧರ ಮಾನಿಲಾ ಖೇದ (ನಿನ್ನ ಈ ಸಾಮರ್ಥ್ಯವನ್ನು ನೋಡಿ ತನ್ನ ತಲೆಯ ಮೇಲೆ ಪೃಥ್ವಿಯನ್ನು ತೂಗಿಸುವ ಶೇಷನಿಗೂ ಮನಸ್ಸಿನಲ್ಲಿ ಅಸಮಧಾನ ಮತ್ತು ಕೆಟ್ಟದೆನಿಸಿತು)| ಕಡಾಡಿಲೇ ಪರ್ವತ (ಸಂಪೂರ್ಣ ಪರ್ವತ ನಡುಗಲು ಪ್ರಾರಂಭವಾಗುತ್ತದೆ.), ಉಡುಗಣ ಉಚ್ಛೇದ (ತಾರೆಗಳ, ನಕ್ಷತ್ರಲೋಕದ ನಾಶವಾಗುವ ಸಮಯವು ಉದ್ಭವಿಸಿತು)| ರಾಮೀಂ (ರಾಮನೊಂದಿಗೆ ಏಕರೂಪವಾದ ಮಾರುತಿಯ ಜಾಗದಲ್ಲಿ) ರಾಮದಾಸ ಶಕ್ತೀಚಾ ಶೋಧ (ರಾಮದಾಸಸ್ವಾಮಿಯವರು ಶಕ್ತಿಯನ್ನು ಹುಡುಕಿದರು ಅಂದರೆ ಸ್ತೋತ್ರವು ದೊರೆಯಿತು.)||೨||