ಶ್ರೀಕೃಷ್ಣನ ಆರತಿ

ಓವಾಳೂಂ ಆರತೀ ಮದನಗೋಪಾಳಾ|
ಶ್ಯಾಮಸುಂದರ ಗಳಾಂ ವೈಜಯಂತೀಮಾಳಾ||….||

ಚರಣಕಮಲ ಜ್ಯಾಚೇಂ ಅತಿ ಸುಕುಮಾರ|
ಧ್ವಜವಜ್ರಾಂಕುಶ (ಟಿಪ್ಪಣಿ ೧) ಬ್ರೀದಾಚಾ ತೋಡರ||೧||

ನಾಭಿಕಮಳ ಜ್ಯಾಂಚೇಂ ಬ್ರಹ್ಮಯಾಚೇಂ ಸ್ಥಾನ|
ಹೃದಯೀಂ ಪದಕ ಶೋಭೇ ಶ್ರೀವತ್ಸಲಾಂಛನ||೨||

ಮುಖಕಮಲ ಪಾಹತಾಂ ಸುಖಾಚಿಯಾ ಕೋಟೀ|
ವೇಧಲೇ ಮಾನಸ ಹಾರಪಲೀ ದೃಷ್ಟೀ||೩||

ಜಡಿತಮುಗುಟ ಜ್ಯಾಚಾ ದೈದೀಪ್ಯಮಾನ|
ತೇಣೇಂ ತೇಜೇಂ ಕೋಂದಲೇಂ ಅವಘೇಂ ತ್ರಿಭುವನ||೪||

ಏಕಾ ಜನಾರ್ದನೀಂ ದೇಖಿಯೆಲೇಂ ರೂಪ|
ಪಾಹತಾಂ ಅವಘೇಂ ಝಾಲೇ ತದ್ರೂಪ||೫||
– ಸಂತ ಏಕನಾಥ

ಟಿಪ್ಪಣಿ – ಸಂತ ಏಕನಾಥ ಮಹಾರಾಜ ವಿರಚಿತ ಮೂಲ ಆರತಿಯಲ್ಲಿ ‘ಧ್ವಜವಜ್ರಾಂಕುಶರೇಖಾ ಚರಣೀಂ’ ಎಂದು ಇದೆ. ಆರತಿಯನ್ನು ಲಯದಲ್ಲಿ ಹೇಳಲು ಬರಬೇಕೆಂಬುವುದಕ್ಕಾಗಿ ‘ಧ್ವಜವಜ್ರಾಂಕುಶರೇಖಾ ಚರಣೀಂ’ ಎಂಬುದರ ಬದಲಿಗೆ ‘ಧ್ವಜವಜ್ರಾಂಕುಶ’ ಎಂದು ಶಬ್ದರಚನೆಯನ್ನು ಮಾಡಲಾಗಿದೆ. ಆರತಿಯನ್ನು ಲಯದಲ್ಲಿ ಹೇಳುವುದರಿಂದ ಭಾವಜಾಗೃತಿಯಾಗಲು ಸಹಾಯವಾಗುತ್ತದೆ. ಇಲ್ಲಿ ಭಾವಜಾಗೃತಿಯ ಉದ್ದೇಶವಿರುವುದರಿಂದ ಹೀಗೆ ಮಾಡಲಾಗಿದೆ.ನಾಥ ಮಹಾರಾಜ ವಿರಚಿತ ಮೂಲ ಆರತಿಯಲ್ಲಿ ‘ಧ್ವಜವಜ್ರಾಂಕುಶರೇಖಾ ಚರಣೀಂ’ ಎಂದು ಇದೆ. ಆರತಿಯನ್ನು ಲಯದಲ್ಲಿ ಹೇಳಲು ಬರಬೇಕೆಂಬುವುದಕ್ಕಾಗಿ ‘ಧ್ವಜವಜ್ರಾಂಕುಶರೇಖಾ ಚರಣೀಂ’ ಎಂಬುದರ ಬದಲಿಗೆ ‘ಧ್ವಜವಜ್ರಾಂಕುಶ’ ಎಂದು ಶಬ್ದರಚನೆಯನ್ನು ಮಾಡಲಾಗಿದೆ. ಆರತಿಯನ್ನು ಲಯದಲ್ಲಿ ಹೇಳುವುದರಿಂದ ಭಾವಜಾಗೃತಿಯಾಗಲು ಸಹಾಯವಾಗುತ್ತದೆ. ಇಲ್ಲಿ ಭಾವಜಾಗೃತಿಯ ಉದ್ದೇಶವಿರುವುದರಿಂದ ಹೀಗೆ ಮಾಡಲಾಗಿದೆ.

ಆಧಾರ : ಸನಾತನ ನಿರ್ಮಿತ ಕಿರುಗ್ರಂಥ "ಆರತಿಸಂಗ್ರಹ".

ಮದನಗೋಪಾಳ (ಹೇ ಮನ್ಮಥನಂಥ ಅಲೌಕಿಕ ಸೌಂದರ್ಯವನ್ನು ಹೊಂದಿರುವ, ಗೋವುಗಳನು ಪಾಲಿಸುವ, ಶ್ರೀಕೃಷ್ಣ), ಓವಾಳೂಂ ಆರತಿ (ನಿನಗೆ (ನಾನು) ಆರತಿಯನ್ನು ಬೆಳಗುತ್ತಿದ್ದೇನೆ.)| ಶ್ಯಾಮಸುಂದರ (ನಿನ್ನ ಶ್ಯಾಮವರ್ಣವು ಮನೋಹರವಾಗಿದ್ದು) ಗಳಾಂ ವೈಜಯಂತೀ ಮಾಳಾ (ನೀನು ಕೊರಳಲ್ಲಿ ವೈಜಯಂತಿಮಾಲೆಯನ್ನು ಧರಿಸಿರುವಿ. ‘ಈ ಮಾಲೆಯಲ್ಲಿ ಪೃಥ್ವೀ, ಆಪ, ತೇಜ, ವಾಯು ಮತ್ತು ಆಕಾಶ ಈ ತತ್ತ್ವಗಳೊಂದಿಗೆ ದರ್ಶಕವೆಂದು ನೀಲಿ, ಮುತ್ತು, ಮಾಣಿಕ್ಯ, ಪುಷ್ಯರಾಜ ಮತ್ತು ವಜ್ರ ಈ ರತ್ನಗಳಿರುತ್ತವೆ’, ಎಂದು ಶ್ರೀ ಜ್ಞಾನೇಶ್ವರಿಯಲ್ಲಿ ಹೇಳಲಾಗಿದೆ.)||….||

ಚರಣಕಮಲ ಜ್ಯಾಚೇಂ ಅತಿ ಸುಕುಮಾರ (ಯಾರ ಕಮಲರೂಪಿ ಚರಣವು ಅತ್ಯಂತ ಕೋಮಲವಾಗಿದೆ.)| ಧ್ವಜವಜ್ರಾಂಕುಶರೇಖೆಯು ಚರಣದಲ್ಲಿ (ಯಾರ ಚರಣದಲ್ಲಿ ಧ್ವಜವಜ್ರಾಂಕುಶರೇಖೆಯು, ಅಂದರೆ ಸಾಮುದ್ರಿಕ ಶಾಸ್ತ್ರಕ್ಕನುಸಾರ ಧ್ವಜ, ವಜ್ರ ಮತ್ತು ಅಂಕುಶವನ್ನು ತೋರಿಸುವ ರೇಖೆ, ಶುಭ ಚಿಹ್ನೆಯಿದ್ದು), ಬ್ರೀದಾಚಾ ತೋಡರ (ಭಕ್ತವತ್ಸಲನ ಕಾಲಿನ ಕಡ್ಗವು ಹೆಮ್ಮೆಯಿಂದ ಹೇಳುತ್ತಿದೆ ಎಂದು ಅನಿಸುವುದು.)||೧||

ನಾಭಿಕಮಳ ಜ್ಯಾಚೇಂ ಬ್ರಹ್ಮಯಾಚೇಂ ಸ್ಥಾನ (ಯಾರ ನಾಭಿರೂಪಿ ಕಮಲದಿಂದ ಬ್ರಹ್ಮದೇವನ ಉತ್ಪತ್ತಿಯಾಗಿದೆ)| ಹೃದಯೀಂ ಪದಕ ಶೋಭೇ ಶ್ರೀವತ್ಸಲಾಂಛನ (ಹೃದಯದ ಮೇಲೆ ಶ್ರೀವತ್ಸಲಾಂಛನರೂಪಿ ಪದಕವು ದೊಡ್ಡದಾಗಿ ಶೋಭಿಸುತ್ತಿದೆ.) (ಟಿಪ್ಪಣಿ )||೨||

ಮುಖಕಮಲ ಪಹತಾಂ ಸುಖಾಚಿಯಾ ಕೋಟೀ (ಮುಖರೂಪಿ ಕಮಲವು ಕಣ್ಣಿಗೆ ಬಿದ್ದಾಗ ಅನಂತಕೋಟಿ ಆನಂದವು ಲಭಿಸುತ್ತದೆ.)| ವೇಧಲೇ ಮಾನಸ ಹಾರಪಲೀ ದೃಷ್ಟಿ (ಮನಸ್ಸು ಛಿದ್ರವಾಗುತ್ತದೆ ಮತ್ತು ದೇಹಬುದ್ಧಿಯನ್ನು ಕಳೆಯುತ್ತದೆ.)||೩||

ಜಡಿತಮುಗುಟ ಜ್ಯಾಚಾ ದೈದೀಪ್ಯಮಾನ (ಯಾರ ಮುಕುಟವು ರತ್ನದ ದಿವ್ಯತೇಜದಿಂದ ಹೊಳೆಯುತ್ತಿದೆ.)| ತೇಣೇಂ ತೇಜೇಂ ಕೋಂದಲೇಂ ಅವಘೇಂ ತ್ರಿಭುವನ (ಸಂಪೂರ್ಣ ತ್ರಿಭುವನದಲ್ಲಿ ಅವನು ತೇಜದಿಂದ ತುಂಬಿದ್ದಾನೆ.)||೪||

ಏಕಾ ಜನಾರ್ದನೀಂ ದೇಖಿಯೆಲೇಂ ರೂಪ (ಏಕನಾಥ ಮಹಾರಾಜರು ಹೇಳುತ್ತಾರೆ, ಸದ್ಗುರು ಜನಾರ್ದನಸ್ವಾಮೀ ಇವರ ಕೃಪೆಯಿಂದ ನನಗೆ ಶ್ರೀಕೃಷ್ಣನ ರೂಪವನ್ನು ನೋಡಲು ಸಾಧ್ಯವಾಯಿತು, ಶ್ರೀಕೃಷ್ಣನ ಸಾಕ್ಷಾತ್ಕಾರವಾಯಿತು.)| ಪಾಹತಾಂ ಅವಘೇಂ ಝಾಲೇ ತದ್ರೂಪ (ಶ್ರೀಕೃಷ್ಣನ ರೂಪವನ್ನು ನೋಡುತ್ತಾ, ಅಂದರೆ ಅವನ ಸಾಕ್ಷಾತ್ಕಾರವಾಗಿರುವಾಗ, ಯಾರಿಗೆ ಸಾಕ್ಷಾತ್ಕಾರವಾಯಿತೋ ಅವರಿಲ್ಲರೂ ಅವನೊಂದಿಗೆ ಏಕರೂಪವಾದರು, ಅವರಿಗೆ ಅದ್ವೈತಾವಸ್ಥೆಯು ಪ್ರಾಪ್ತವಾಯಿತು.)||೫||

ಟಿಪ್ಪಣಿ – ಶ್ರೀವಿಷ್ಣುವಿನ ಹೃದಯದ ಮೇಲೆ ಬಿಳಿಕೂದಲುಗಳ ಸುಳಿ ಇದೆ, ಅದನ್ನು ಶ್ರೀವತ್ಸಲಾಂಛನ ಎಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ಮುಂದಿನ ಕಥೆಯನ್ನು ಪುರಾಣಗಳಲ್ಲಿ ನೀಡಲಾಗಿದೆ – ಒಮ್ಮೆ ಸರಸ್ವತೀ ನದಿಯ ತೀರದಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ ಈ ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠರು, ಎಂದು ಋಷಿಮಂಡಳಿಯಲ್ಲಿ ವಾದವಾಯಿತು. ಇದರ ನಿರ್ಣಯವನ್ನು ಬ್ರಹ್ಮದೇವನ ಮಾನಸಪುತ್ರನಾದ ಭೃಗುಮಹರ್ಷಿ ಇವರು ನೀಡಬೇಕು, ಎಂದು ಸರ್ವಾನುಮತಿಯಿಂದ ನಿರ್ಧರಿಸಲಾಯಿತು. ಭೃಗುಮಹರ್ಷಿಯು ಪ್ರಪ್ರಥಮವಾಗಿ ಬ್ರಹ್ಮದೇವರ ಬಳಿ ಹೋದರು ಮತ್ತು ಅವನಿಗೆ ನಮಸ್ಕರಿಸದೇ ಹಾಗೇ ನಿಂತರು. ತನ್ನ ಮಗನಿಂದ ಆದ ಈ ಅವಮಾನವನ್ನು ನೋಡಿ ಬ್ರಹ್ಮದೇವನಿಗೆ ಸಿಟ್ಟು ಬಂದಿತು, ಆದರೆ ‘ತನ್ನ ಮಗ’ ಎಂಬ ಕಾರಣಕ್ಕಾಗಿ ಅವರನ್ನು ಕ್ಷಮಿಸಿದನು. ಅನಂತರ ಭೃಗುಮಹರ್ಷಿಯು ಕೈಲಾಸದ ಶಂಕರನ ಬಳಿಗೆ ಹೋದರು. ಶಂಕರನು ಅವರನ್ನು ಆಲಿಂಗಿಸುವುದಕ್ಕಾಗಿ ಮುಂದೆ ಬಂದನು, ಆದರೆ ಭೃಗುಮಹರ್ಷಿಯು ಅವನನ್ನು ಅಲ್ಲಗಳೆದರು. ಆದ್ದರಿಂದ ಶಂಕರನಿಗೆ ಸಿಟ್ಟು ಬಂದು ಅವನು ತ್ರಿಶೂಲದಿಂದ ಭೃಗುಮಹರ್ಷಿಗೆ ಹೊಡೆಯಲು ಓಡಿದನು. ಕೊನೆಗೆ ಪಾರ್ವತಿಯು ಶಂಕರನ ಕೋಪವನ್ನು ಶಾಂತಗೊಳಿಸಿದಳು. ಅನಂತರ ಭೃಗುಮಹರ್ಷಿಯು ವೈಕುಂಠಕ್ಕೆ ಶ್ರೀವಿಷ್ಣುವಿನ ಬಳಿಗೆ ಹೋದರು. ಆಗ ಭಗವಂತನು ನಿದ್ರೆ ಮಾಡುತ್ತಿದ್ದನು. ಭೃಗುಮಹರ್ಷಿಯು ವಿಷ್ಣುವಿನ ಹೃದಯದ ಮೇಲೆ ಒದ್ದರು. ವಿಷ್ಣು ಕೂಡಲೇ ಎದ್ದನು ಮತ್ತು ಭೃಗುಮಹರ್ಷಿಗಳ ಚರಣಗಳ ಮೇಲೆ ತಲೆ ಇಟ್ಟು, ‘ಕ್ಷಮಿಸಿ! ತಮ್ಮ ಆಗಮನವು ನನಗೆ ಗೊತ್ತಿರಲಿಲ್ಲವಾಗಿದ್ದರಿಂದ ನನಗೆ ತಮ್ಮನ್ನು ಸ್ವಾಗತಿಸಲಾಗಲಿಲ್ಲ. ನನ್ನ ಬಿರುಸಾದ ಹೃದಯದ ಮೇಲೆ ಪ್ರಹರಿಸಿದ್ದರಿಂದ ತಮ್ಮ ಕೋಮಲ ಚರಣಗಳು ನೋಯುತ್ತಿರಬಹುದು!’ ಎಂದು ಹೇಳಿ ವಿಷ್ಣು ಭೃಗುಮಹರ್ಷಿಯ ಕಾಲುಗಳನ್ನು ಒತ್ತಲಾರಂಭಿಸಿದನು ಮತ್ತು ಮುಂದೆ, ‘ತಾವು ಇಂದು ನನ್ನ ಮೇಲೆ ದೊಡ್ಡ ಕೃಪೆ ಮಾಡಿದ್ದೀರಿ. ತಮ್ಮ ಚರಣಗಳ ಧೂಳು ಇನ್ನು ಮುಂದೆ ಯಾವಾಗಲೂ ನನ್ನ ಹೃದಯದ ಮೇಲೆ ಇರುತ್ತದೆ’ ಎಂದು ಹೇಳಿದನು. ಅನಂತರ ಭೃಗುಮಹರ್ಷಿ ಋಷಿಮಂಡಳಿಗೆ ಹಿಂದಿರುಗಿದರು ಮತ್ತು ಅವರು ವಿಷ್ಣುವು ಎಲ್ಲರಿಗಿಂತ ಶ್ರೇಷ್ಠನಾಗಿದ್ದಾನೆ ಎಂಬ ನಿರ್ಣಯವನ್ನು ನೀಡಿದರು.