ಶ್ರೀ ಗಣಪತಿಯ ಆರತಿ

ಸುಖಕರ್ತಾ ದುಃಖಹರ್ತಾ ವಾರ್ತಾ ವಿಘ್ನಾಚೀ |
ನುರವೀ ಪುರವೀ ಪ್ರೇಮ ಕೃಪಾ ಜಯಾಚೀ |
ಸರ್ವಾಂಗೀ ಸುಂದರ ಉಟೀ ಶೇಂದುರಾಚೀ |
ಕಂಠೀ ಝಳಕೇ ಮಾಳ ಮುಕ್ತಾಫಳಾಂಚೀ ||೧||

ಜಯದೇವ ಜಯದೇವ ಜಯ ಮಂಗಲರ್ತಿ |
ದರ್ಶನಮಾತ್ರೇ ಮನಃಕಾಮನಾ ಪುರತಿ ||…..||

ರತ್ನಖಚಿತ ಫರಾ ತುಜ ಗೌರೀಕುಮರಾ|
ಚಂದನಾಚೀ ಉಟೀ ಕುಂಕುಮಕೇಶರಾ|
ಹಿರೆಜಡಿತ ಮುಕುಟ ಶೋಭತೋ ಬರಾ|
ರುಣಝುಣತೀ ನೂಪುರೇ ಚರಣೀಂ ಘಾಗರಿಯಾ||೨||

ಲಂಬೋದರ ಪೀತಾಂಬರ ಫಣಿವರಬಂಧನಾ |
ಸರಳ ಸೋಂಡ ವಕ್ರತುಂಡ ತ್ರಿನಯನಾ ||
ದಾಸ ರಾಮಾಚಾ ವಾಟ ಪಾಹೇ ಸದನಾ |
ಸಂಕಟೀ ಪಾವಾವೇ, ನಿರ್ವಾಣೀ ರಕ್ಷಾವೇ ಸುರವರವಂದನಾ ||೩||
– ಸಮರ್ಥ ರಾಮದಾಸಸ್ವಾಮೀ
ಆಧಾರ : ಸನಾತನ ನಿರ್ಮಿತ ಕಿರುಗ್ರಂಥ “ಆರತಿಸಂಗ್ರಹ”.

ಶ್ರೀ ಗಣೇಶನು ಸುಖಕರ್ತಾ (ಸುಖವನ್ನು ನೀಡುವವನು), ದುಃಖಹರ್ತಾ (ದುಃಖ ಹರಣ ಮಾಡುವವನು) ನಾಗಿದ್ದಾನೆ. ಅವನು ವಿಘ್ನದ ವಾರ್ತೆ (ದುಃಖದ ವಿಷಯ) ಯನ್ನು ನುರವೀ (ಉಳಿಯಲು ಬಿಡುವುದಿಲ್ಲ), ಅಂದರೆ ಎಲ್ಲ ದುಃಖವನ್ನು ಸಮೂಲವಾಗಿ ನಾಶಗೊಳಿಸುತ್ತಾನೆ. ಪುರವೀ ಪ್ರೇಮ ಕೃಪಾ ಜಯಾಚೀ, ಅಂದರೆ ಅವನ ಕೃಪೆಯಾದರೆ ಭಕ್ತರಿಗೆ ಪ್ರೇಮದ ಮಳೆಯ ಲಾಭವಾಗುತ್ತದೆ. ಗಣೇಶನು ಸರ್ವಾಂಗದಿಂದ ಸುಂದರನಾಗಿದ್ದಾನೆ. ಅವನು ಸಿಂಧೂರದ ಸುಗಂಧದ್ರವ್ಯವನ್ನು ಹಚ್ಚಿಕೊಂಡಿದ್ದಾನೆ. ಅವನ ಕಂಠದಲ್ಲಿ ಮುತ್ತಿನ ಮಾಲೆಯು ಹೊಳೆಯುತ್ತಿದೆ.||೧||

ಹೇ ದೇವಾ, ನಿನಗೆ ಜಯಜಯಕಾರ! ನೀನು ಪ್ರತ್ಯಕ್ಷ ಮಂಗಲದ ಮೂರ್ತಿಯಾಗಿರುವೆ. ನಿನ್ನ ದರ್ಶನಮಾತ್ರದಿಂದ (ಕೇವಲ ದರ್ಶನದಿಂದ) ಭಕ್ತರ ಎಲ್ಲ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ.||…||

ಹೇ ಗೌರೀಕುಮರಾ (ಗೌರಿಯ ಕುಮಾರಾ), ರತ್ನವನ್ನು ಜೋಡಿಸಿದ ……… (ಮುಕುಟದ ಮುಂದಿನ ಭಾಗ) ನಿನ್ನ ಹಣೆಯಲ್ಲಿದೆ. ಕುಂಕುಮ ಮತ್ತು ಕೇಸರಿ ಮಿಶ್ರಿತ ಚಂದನದ ಸುಗಂಧದ್ರವ್ಯವನ್ನು ನೀನು ಹಚ್ಚಿಕೊಂಡಿರುವಿ. ವಜ್ರದಿಂದ ಕೂಡಿದ ಮುಕುಟವು ನಿನ್ನ ತಲೆಯಲ್ಲಿ ಶೋಭಿಸುತ್ತದೆ. ನಿನ್ನ ಕಾಲುಗಳಲ್ಲಿನ ಗಜ್ಜೆಗಳಿಂದ ರುಣಝುಣವಾದ ಮಂಜುಳ ಧ್ವನಿಯು ಬರುತ್ತಿದೆ.||೨||

ಲಂಬೋದರ (ದೊಡ್ಡ ಹೊಟ್ಟೆಯನ್ನು ಹೊಂದಿದ), ಪೀತಾಂಬರ (ಪೀತಾಂಬರವನ್ನು ಉಟ್ಟ), (ಸೊಂಟಕ್ಕೆ) ಫಣಿವರನ (ನಾಗನ) ಬಂಧನ (ಉಡಿದಾರ) ವಿರುವ, ಸರಳ ಸೊಂಡಿಲು ಮತ್ತು ವಕ್ರತುಂಡ (ಡೊಂಕಾದ ಮುಖವಿರುವವನು, ಅಂದರೆ ವಕ್ರಮಾರ್ಗದಲ್ಲಿ (ಕೆಟ್ಟ ಮಾರ್ಗದಲ್ಲಿ) ನಡೆಯುವ ಮತ್ತು ನುಡಿಯುವವರಿಗೆ ಶಿಕ್ಷಿಸಿ ಸರಿಯಾದ ರ್ಮಾಗದಲ್ಲಿ ತರುವವನು), ತ್ರಿನಯನಾ (ಮೂರು ಕಣ್ಣುಗಳನ್ನು ಹೊಂದಿರುವವನು, ಅಂದರೆ ತ್ರಿಕಾಲಜ್ಞ) ಇಂತಹ ಗಣಪತಿಯೇ, ನಾನು ರಾಮನ ದಾಸ (ಸಮರ್ಥ ರಾಮದಾಸಸ್ವಾಮೀ) ಸದನದಲ್ಲಿ (ಮನೆಯಲ್ಲಿ) ನಿನ್ನ ದಾರಿಯನ್ನು ಆತುರತೆಯಿಂದ ನೋಡುತ್ತಿದ್ದೇನೆ. ಹೇ ಸುರವರವಂದನಾ (ಎಲ್ಲ ದೇವಶ್ರೇಷ್ಠರಿಂದ ವಂದಿಸಲ್ಪಡುವ ಗಜಾನನಾ), ಸಂಕಟದಲ್ಲಿ (ಸಂಕಟದ ಎಲ್ಲ ಪ್ರಸಂಗಗಳಲ್ಲಿ) ನೀ ನನಗೆ ಪ್ರಸನ್ನನಾಗು (ನನ್ನನ್ನು ಸಂಭಾಳಿಸು), ನಿರ್ವಾಣೀ (ಕೊನೆಯ, ದೇಹತ್ಯಾಗದ ಸಮಯದಲ್ಲಿ) ನೀನು ನನ್ನನ್ನು ರಕ್ಷಿಸು (ಇದೇ ನಿನ್ನ ಚರಣಗಳಲ್ಲಿ ವಿನಮ್ರವಾದ ಪ್ರಾರ್ಥನೆ!)||೩||