ಶ್ರೀಧರ ಸ್ವಾಮಿಗಳು

ಡಿಸೆಂಬರ್ ೭, ೧೯೦೮ ರಲ್ಲಿ ಜನಿಸಿದ ಶ್ರೀಧರ ಸ್ವಾಮಿಗಳು ದತ್ತಾತ್ರೇಯರ ಅವತಾರವೆಂದು ಪರಿಗಣಿಸಲ್ಪಟ್ಟ ಮಹನೀಯರು. ರಾಷ್ಟ್ರ ಸಂತ, ಶಿವಾಜಿ ಮಹಾರಾಜರ ಗುರು ಶ್ರೀ ಸಮರ್ಥ ರಾಮದಾಸರ ಶಿಷ್ಯರಾಗಿ, ದಿಕ್ಷಾ ಬದ್ಧರಾಗಿ, ನಾಡಿನ ಉದ್ದಗಲಕ್ಕೂ ಸಂಚರಿಸಿದವರು. ಪರಿವ್ರಾಜಕರಾಗಿ, ಕಾಶಿಯಲ್ಲಿ ತಪಸ್ಸಾನ್ನಾಚರಿಸಿ ನಂತರ ಮಹಾರಾಷ್ಟ್ರ, ಆಂಧ್ರ ಪ್ರದೇಶಗಳಾದ್ಯಂತ ಸಂಚರಿಸಿ ಕರ್ನಾಟಕದಲ್ಲಿ ಬಂದಾಗ ತಾಯಿ ದುರ್ಗಾಂಬೆಯ ಆಣತಿಯ ಮೇರೆಗೆ ಸಾಗರ ಜಿಲ್ಲೆಯ ವರದಹಳ್ಳಿಯಲ್ಲಿ ನೆಲೆ ನಿಂತು, ದುರ್ಗಾ ದೇವಾಲಯದ ಜೀರ್ಣೋದ್ಧಾರ ಮಾಡಿ ಪೂಜಾದಿ ಕಾರ್ಯಗಳು ನಿರಂತರವಾಗಿ ನಡೆಯಲು ಕಾರಣರಾದವರು.

ವರದಹಳ್ಳಿಯಲ್ಲಿ ಗುಡ್ಡದ ಮೇಲೆ ನಿಂತು, ಕೇವಲ ತಮ್ಮ ತಪಶ್ಶಕ್ತಿಯಿಂದ ನೀರನ್ನು ಉದ್ಭವಿಸಿ, ಉದ್ಭವ ಗಂಗೆಯ ನೆಲೆಗೆ ಕಾರಣೀಕೃತರಾದರು. ಈ ನೀರು, ಅತ್ಯುತ್ತಮ ಔಷಧೀಯ ಗುಣಗಳಿಂದ ಕೂಡಿದ್ದು, ರೋಗ ನಿವಾರಣ ಶಕ್ತಿಯಾಗಿಯೂ ಭಕ್ತರಲ್ಲಿ ಚಿರಪರಿಚಿತ. ತಮ್ಮ ಅವತಾರ ಕಾಲದಲ್ಲಿ ನಿರಂತರ ಪವಾಡ ಮತ್ತು ಕೃಪಾದೃಷ್ಟಿಯಿಂದ ಭಕ್ತರ ಕಷ್ಟಗಳನ್ನು ದೂರ ಮಾಡಿ ಅವರ ಬದುಕಿನಲ್ಲಿ ಸಂತೃಪ್ತಿ ತಂದರು.

Leave a Comment