ಇವರನ್ನು ಶ್ರೀ ಠೆಂಬೆಸ್ವಾಮಿ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತಿತ್ತು. ಇವರ ಮೂಲ ನಾಮ ವಾಸುದೇವ, ಅವರ ತಂದೆ ಗಣೇಶ ಭಟ್ಟ, ತಾಯಿ ರಮಾಬಾಯಿ ಮತ್ತು ಅಣ್ಣ ಹರಿ ಭಟ್ಟ. ಗೋವಾದ ಸಮೀಪದಲ್ಲಿರುವ ಸಾವಂತವಾಡಿಯ ಬಾಪುಜೀ ಪಂತ ಗೊಡೆಯವರ ೨೧ ವರ್ಶದ ಕನ್ಯೆ ಅನ್ನಪೂರ್ಣಾಬಾಯಿಯ ಜೊತೆ ವಿವಾಹವಾಯಿತು. ಚಿಕ್ಕಂದಿನಿಂದಲೇ ಅವರು ಸಂಸ್ಕೃತ ಭಾಷೆಯ ಪ್ರಖಂಡ ಪಂಡಿತರು ಮತ್ತು ಅತಿ ಉಚ್ಛ ಕೋಟಿಯ ವಿದ್ವಾನರಾಗಿದ್ದರು.
ಪ್ರತಿವರ್ಷ ಅವರ ಕೀರ್ತಿ ಹೆಚ್ಚುತ್ತಾ ಹೋಯಿತು. ನರಸೊಬಾವಾಡಿ ದತ್ತನ ದೇವಾಲಯಕ್ಕೆ ಪ್ರಸಿಧ್ಧವಾಗಿದೆ. ಈ ಕ್ಷೇತ್ರಕ್ಕೆ ಬಂದ ಮೇಲೆ ಅವರು ವಾಸುದೇವಾನಂದ ಸರಸ್ವತಿ ಎಂಬ ಹೆಸರಿನಿಂದ ಗುರುತಿಸಲ್ಪಟ್ಟರು. ಇಲ್ಲಿ ೪೦೦ ವರ್ಷಗಳ ಮುಂಚೆ ನರಸಿಂಹ ಸರಸ್ವತಿಯವರು ೧೨ ವರ್ಷಗಳ ತನಕ ನಿವಾಸ ಮಾಡಿದ್ದರು. ಶ್ರೀ ವಾಸುದೇವಾನಂದ ಸರಸ್ವತಿಯವರು "ದತ್ತ ಮಹತ್ಮೆ" ಎಂಬ ಗ್ರಂಥವನ್ನು ಬರೆದರು. ಅವರು ಪತ್ನಿಯ ಮೃತ್ಯುವಿನ ನಂತರ ಕೇವಲ ೧೩ ದಿನದಲ್ಲಿ ಸಂನ್ಯಾಸಿಯಾದರು. ಅವರು ಗುರು ಶ್ರೀಮಂತ ಗೋವಿಂದ ಸ್ವಾಮಿಯವರಿಂದ ಸಂನ್ಯಾಸ ದೀಕ್ಷೆ ತೆಗೆದುಕೊಂಡರು.