ವಿಶ್ವದ ಉತ್ಪತ್ತಿಯ ಬಗ್ಗೆ ಆಧುನಿಕ ವಿಜ್ಞಾನಿಗಳು ಮಂಡಿಸಿದ ಸಿದ್ಧಾಂತಗಳು

ಜಗತ್ತಿನ ಉತ್ಪತ್ತಿಯು ಹೇಗೆ ಆಯಿತು ಎಂಬ ಗಹನವಾದ ಪ್ರಶ್ನೆಯು ಕಳೆದ ಕೆಲವು ಶತಮಾನಗಳಿಂದ ಮನುಷ್ಯನ ಮನಸ್ಸಿನಲ್ಲಿ ಮನೆಮಾಡಿಕೊಂಡಿದೆ. ಕಳೆದ ನೂರು ವರ್ಷಗಳಲ್ಲಿ ವಿಜ್ಞಾನದಲ್ಲಿ ಪ್ರಗತಿಯಾಗಿರುವುದರಿಂದ ವಿಜ್ಞಾನಿಗಳು ಪ್ರಶ್ನೆಯನ್ನು ಸವಾಲಾಗಿ ಸ್ವೀಕರಿಸಿದರು. ಕಳೆದ ಕೆಲವು ದಶಮಾನಗಳಲ್ಲಿ ವಿಜ್ಞಾನಿಗಳು ಅಣುವಿಜ್ಞಾನದ ಬಲದಿಂದ ಜಗತ್ತಿನ ಉತ್ಪತ್ತಿಯ ಸಮಸ್ಯೆಯನ್ನು ಪರಿಹರಿಸಿದ್ದಾರೆ. ವೈಜ್ಞಾನಿಕ ಪ್ರಗತಿಯ ಬಲದಿಂದ ವಿಜ್ಞಾನಿಗಳು ಯಾವ ಸಿದ್ಧಾಂತಗಳನ್ನು ಮಂಡಿಸಿದ್ದಾರೆಯೋ ಅದೇ ಸಿದ್ಧಾಂತಗಳು ಅತಿಪ್ರಾಚೀನವಾದ ಋಗ್ವೇದಗಳಲ್ಲಿಯೂ ಇವೆ. ಋಗ್ವೇದದ ಹತ್ತನೆಯ ಮಂಡಲದಲ್ಲಿರುವ ೧೨೯ನೆಯ ಸೂಕ್ತದಲ್ಲಿ ವಿಶ್ವದ ಉತ್ಪತ್ತಿಯ ಕುರಿತಾದ ಕೆಲವು ಸಿದ್ಧಾಂತಗಳನ್ನು ಮಂಡಿಸಲಾಗಿದೆ. (ವೈದಿಕ ವಿಜ್ಞಾನ ಮತ್ತು ವೇದಕಾಲ ನಿರ್ಣಯ, ಪುಟ ಕ್ರ.೫೭೫೮, ಡಾ.ಪದ್ಮಾಕರ ವಿಷ್ಣು ವರ್ತಕ)