Due to a software update, our website may be briefly unavailable on Saturday, 18th Jan 2020, from 10.00 AM IST to 11.30 PM IST

ಕ್ರಾಂತಿವೀರ ದಾಮೋದರ ಹರಿ ಚಾಪೆಕರ

 ಆಂಗ್ಲರ ಕಪಿಮುಷ್ಠಿಯಿಂದ ದೇಶವನ್ನು ಸ್ವತಂತ್ರಗೊಳಿಸುವ ಧ್ಯೇಯದಿಂದ ಪ್ರೇರಿತರಾಗಿ ತುಂಬುತಾರುಣ್ಯದಲ್ಲಿ ಸ್ವಂತದ ಪ್ರಾಣದ ಆಹುತಿಯನ್ನು ನೀಡಿದ ಕ್ರಾಂತಿವೀರನ ವಿಷಯವನ್ನು ತಿಳಿದುಕೊಳ್ಳಲಿಕ್ಕಾಗಿ ಲೇಖನವನ್ನು ನೀಡುತ್ತಿದ್ದೇವೆ.

 ದಾಮೋದರ ಹರಿಚಾಪೇಕರರು ಮೂಲತಃ ಕೋಕಣದ ವೆಳಣೇಶ್ವರದ ಮನೆತನದವರಾಗಿದ್ದರು. ಆದರೆ ಅವರ ಪೂರ್ವಜರು ಪುಣೆಯ ಸಮೀಪವಿರುವ ಚಿಂಚವಡಕ್ಕೆ ಬಂದು ನೆಲೆಸಿದ್ದರು. ಅಲ್ಲಿಯೇ ೧೮೬೯ರ ಜೂನ್ ೨೫ರಂದು ದಾಮೋದರ ಪಂತರು ಜನಿಸಿದರು. ಚಿಕ್ಕಂದಿನಿಂದಲೇ ದಾಮೋದರ ಪಂತ ಹಾಗೂ ಅವರ ಇಬ್ಬರು ಸಹೋದರರಾದ ಬಾಲಕೃಷ್ಣ ಮತ್ತು ವಾಸುದೇವರಲ್ಲಿ ದೇಶವನ್ನು ಪರದಾಸ್ಯದಿಂದ ಮುಕ್ತಗೊಳಿಸುವ ತೀವ್ರ ಸೆಳೆತವಿತ್ತು. ಕ್ರಾಂತಿಕಾರ್ಯಕ್ಕಾಗಿ ಅವಶ್ಯವೆಂದು ಅವರು ಪ್ರತಿದಿನ ೧೨೦ ಸೂರ್ಯ ನಮಸ್ಕಾರಗಳನ್ನು ಹಾಕುತ್ತಿದ್ದರು. ಹಾಗೆಯೇ ಒಂದು ಗಂಟೆಯಲ್ಲಿ ೧೧ ಮೈಲು ಓಡುವಷ್ಟು ವೇಗವನ್ನು ಸಾಧಿಸಿದ್ದರು. ದಾಮೋದರ ಪಂತರ ತಂದೆ ಹರಿಭಾವೂ ಇವರು ಪ್ರತಿ ಚಾತುರ್ಮಾಸದಲ್ಲಿ ಮುಂಬೈಗೆ ಹೋಗಿ ಪ್ರವಚನ ನೀಡುವ ವಾಡಿಕೆಯಿತ್ತು. ೧೮೯೬ರ ಚಾತುರ್ಮಾಸದಲ್ಲಿ ತಂದೆಯವರಿಗೆ ಜೊತೆಗೆ ಹೋಗಿದ್ದ ದಾಮೋದರ ಮತ್ತು ಬಾಲಕೃಷ್ಣರು ಅಲ್ಲಿನ ರಾಣಿ ವಿಕ್ಟೋರಿಯಾಳ ಪ್ರತಿಮೆಗೆ ಮಸಿ ಹಚ್ಚಿ ಚಪ್ಪಲಿಗಳ ಮಾಲೆಯನ್ನು ಹಾಕಿದ್ದರು. ಕಾಲದಲ್ಲಿ ಕಾಂಗ್ರೆಸ್ ಅಧಿವೇಶನವನ್ನು ಬ್ರಿಟಿಷ್ ರಾಣಿಯ ಸ್ತುತಿಯೊಂದಿಗೆ ಪ್ರಾರಂಭಿಸಲಾಗುತ್ತಿತ್ತು ಎಂದು ಮಾಹಿತಿಯಿದ್ದವರಿಗೆ ದಿಟ್ಟ ಕೃತ್ಯದ ಮೌಲ್ಯವು ಗೊತ್ತಾಗುತ್ತದೆ.

ರ‍್ಯಾಂಡ್‌ರ ವಧೆ : ೧೮೯೬ರಲ್ಲಿ ಸಾಂಕ್ರಾಮಿಕ ಪ್ಲೇಗ್ ರೋಗವು ಪುಣೆಯಲ್ಲಿ ವೇಗವಾಗಿ ಹರಡಲು ಪ್ರಾರಂಭವಾಯಿತು. ಸರಕಾರವು ಅಂಟುರೋಗದ ಬಂದೊಬಸ್ತು ಮಾಡಲು ರ‍್ಯಾಂಡ್‌ರ ಎಂಬ ಹೆಸರಿನ .ಸಿ.ಎಸ್ ಅಧಿಕಾರಿಯನ್ನು ನೇಮಿಸಿತು. ಅವರ ಬಿಳಿ ಸೈನಿಕರು ಮನೆಗಳನ್ನು ತಪಾಸಣೆ ಮಾಡುವ ನೆಪದಿಂದ ನಾಗರಿಕರ ಮೇಲೆ ಅತ್ಯಾಚಾರ ಮಾಡತೊಡಗಿದರು. ಸ್ತ್ರೀಯರ ಮಾನಹಾನಿ ಮಾಡತೊಡಗಿದರು. ಪುಣೆಯಲ್ಲಾಗುತ್ತಿದ್ದ ಅತ್ಯಾಚಾರಗಳಿಂದ ಚಾಪೆಕರ ಸಹೋದರರ ಅಂತಃಕರಣದಲ್ಲಿ ಪ್ರತಿಕಾರದ ಅಗ್ನಿಯು ಜ್ವಲಿಸಿತು. ಶೀಘ್ರದಲ್ಲಿಯೇ ರ‍್ಯಾಂಡ್‌ರ ಮೇಲೆ ಸೇಡು ತೀರಿಸುವ ಅವಕಾಶವು ಚಾಪೆಕರ ಸಹೋದರರಿಗೆ ಲಭಿಸಿತು. ೧೮೯೭ರಲ್ಲಿ ರಾಣಿ ವಿಕ್ಟೋರಿಯಾಳ ಕಾರುಭಾರಿನ ೬೦ ವರ್ಷಗಳು ಆಗಿದ್ದವು. ನಿಮಿತ್ತ ಪುಣೆಯಲ್ಲಿಯೂ ಗಣೇಶ ಖಿಂಡಿಯ ರಾಜಭವನದಲ್ಲಿ ಒಂದು ಸಮಾರಂಭವನ್ನು ಏರ್ಪಡಿಸಲಾಗಿತ್ತು. ಜೂನ್ ೨೨, ೧೮೯೭ರಂದು ರಾತ್ರಿ ಗಣೇಶ ಖಿಂಡಿಯಲ್ಲಿನ ಸಮಾರಂಭ ಮುಕ್ತಾಯಗೊಂಡ ನಂತರ ರ‍್ಯಾಂಡ್‌ರ ಮತ್ತು ಆರ್ಯಸ್ಟ ಇವರು ತಮ್ಮತಮ್ಮ ಕುದುರೆಗಳನ್ನೇರಿ ಹೊರಟರು. ಆರ್ಯಸ್ಟ ಇವರ ಕುದುರೆಯು ಸ್ವಲ್ಪ ಮುಂದಿತ್ತು. ವಾಸುದೇವರಾವ್ ಇವರುಗೊವಿಂದಾ ಆಲಾರೆ ಆಲಾಎಂದು ಹಾಡಿನ ಸಾಲನ್ನು ಕೇಳುತ್ತಲೇ ಮತ್ತು ರ‍್ಯಾಂಡ್‌ರರಂತೆ ಕಾಣಿಸುತ್ತಿದ್ದ ಆರ್ಯಸ್ಟ ಇವರ ಕುದುರೆಗಾಡಿಯು ಕಾಣಿಸುತ್ತಲೇ ಬಾಲಕೃಷ್ಣರು ಓಡುತ್ತಿದ್ದ ಕುದುರೆಗಾಡಿಯೊಳಗೆ ನುಸುಳಿ ತಮ್ಮ ರಿವಾಲ್ವರ್ಅನ್ನು ಆರ್ಯಸ್ಟ ಇವರ ತಲೆಯೊಳಗೆ ಖಾಲಿ ಮಾಡಿದರು. ಆದರೂ ದೂರದಿಂದ ಕೇಳಿಸುತ್ತಿದ್ದ ಹಾಡಿನ ಸಾಲು ನಿಲ್ಲುತ್ತಿಲ್ಲ ಎಂದು ಗೊತ್ತಾದೊಡನೆ ದಾಮೋದರ ಪಂತರಿಗೆ ಏನಾಗಿದೆ ಎಂದು ಗೊತ್ತಾಯಿತು. ಬಾಲಕೃಷ್ಣಪಂತರು ಕಳೆದುಕೊಂಡ ಅವಕಾಶವು ಮತ್ತೊಮ್ಮೆ ಸಿಕ್ಕಿತು ಎಂದು ಅವರಿಗೆ ಆನಂದವಾಯಿತು. ರ‍್ಯಾಂಡ್‌ರ ಗಾಡಿಯ ಹಿಂದೆ ಓಡುತ್ತಿದ್ದ ವಾಸುದೇವರನ್ನು ನಿಲ್ಲಿಸಿ ಅವರು ಸ್ವತಃ ಗಾಡಿಯೊಳಗೆ ಹಾರಿದರು. ಗಾಡಿಯ ಚಪ್ಪರದ ಮೇಲಿನ ಪರದೆಯನ್ನು ಬದಿಗೆ ಸರಿಸಿ ಅವರ ಬೆನ್ನಹಿಂದಿನಿಂದ ರ‍್ಯಾಂಡ್‌ರ ಮೇಲೆ ತಮ್ಮ ರಿವಾಲ್ವರನ್ನು ಮುಕ್ತಗೊಳಿಸಿದರು. ದಾಮೋದರ ಪಂತರು ಕಾರ್ಯಸಿದ್ಧಿಯಾದ ಆನಂದದಲ್ಲಿ ಗಾಡಿಯಿಂದ ಕೆಳಗೆ ಇಳಿದರು. ಎರಡೂ ಘಟನೆಗಳು ಗಾಡಿ ಓಡಿಸುವವರ ಗಮನಕ್ಕೆ ಬರಲೇಇಲ್ಲ.

ಅಸೀಮ ತ್ಯಾಗ : ಕೆಲವು ತಿಂಗಳ ನಂತರ ದ್ರಾವಿಡ ಸಹೋದರರ ಚಾಡಿಕೋರತನದಿಂದ ದಾಮೋದರ ಪಂತ ಹಾಗೂ ಬಾಲಕೃಷ್ಣಪಂತರನ್ನು ಬಂಧಿಸಲಾಯಿತು. ಅವರ ಮೇಲೆ ವಿಚಾರಣೆ ನಡೆಸಿ ಎಪ್ರಿಲ್ ೧೮ ರಂದು ದಾಮೋದರ ಪಂತರನ್ನು ಹಾಗೂ ಮೇ, ೧೨, ೧೮೯೯ರಂದು ಬಾಲಕೃಷ್ಣ ಪಂತರನ್ನು ಗಲ್ಲಿಗೇರಿಸಲಾಯಿತು. ಚಾಪೆಕರ ಸಹೋದರರ ಕತೆಯು ಇಲ್ಲಿಗೆ ಮುಗಿಯುವುದಿಲ್ಲ. ದ್ರಾವಿಡ ಸಹೋದರರ ಚಾಡಿಕೋರತನದ ಮಾಹಿತಿ ತಿಳಿದೊಡನೆ ವಾಸುದೇವಪಂತರು ಸಿಟ್ಟಿಗೆದ್ದರು. ಮಹಾದೇವ ರಾನಡೆ ಎಂಬ ಮಿತ್ರನ ಸಹಾಯದಿಂದ ಅವರು ಚಾಡಿಕೋರ ದ್ರಾವಿಡ ಸಹೋದರರನ್ನು ಕೊಲೆಗೈದರು ಮತ್ತು ಮೇ , ೧೮೯೯ರಂದು ಅವರು ಸ್ವತಃ ಗಲ್ಲಿಗೇರಿದರು. ್ಯಾಂಡ್ ವಧೆಯ ಸಮಯದಲ್ಲಿ ದಾಮೋದರ ಪಂತರು ೨೭ ವರ್ಷದವರಾಗಿದ್ದರು, ನಡುವಿನ ಸಹೋದರ ಬಾಲಕೃಷ್ಣಪಂತರು ೨೪ ವರ್ಷ ಹಾಗೂ ಕಿರಿಯ ಸಹೋದರ ವಾಸುದೇವರಾವರು ೧೮ ವರ್ಷದವರಾಗಿದ್ದರು. ಇಪ್ಪತ್ತುಇಪ್ಪತ್ತೈದು ವರ್ಷದ ತರುಣರ ಅಸೀಮ ತ್ಯಾಗ ಮತ್ತು ಶೌರ್ಯವನ್ನು ನೋಡಿದಾಗ ಇಂದಿಗೂ ಅಭಿಮಾನವು ಉಕ್ಕಿಬರುತ್ತದೆ. ಮೂವರು ಸಹೋದರರು ರಾಷ್ಟ್ರಕಾರ್ಯಕ್ಕಾಗಿ ಮಾಡಿದ ಬಲಿದಾನವು ಜಗತ್ತಿನಲ್ಲಿ ಏಕಮೇವಾದ್ವಿತೀಯವಾಗಿದೆ.